More

    ಮರುಪಾವತಿಗೆ ವಿನಾಯಿತಿ ನೀಡಿ ; ಸಾಲ ಪಡೆದ ರೈತರ ಒತ್ತಾಯ ತಹಸೀಲ್ದಾರ್ ಗುರುಬಸವರಾಜಗೆ ಮನವಿ

    ಹೊಸಪೇಟೆ: ಪಡೆದಿರುವ ಸಾಲದ ಮರುಪಾವತಿಗೆ ವಿನಾಯಿತಿ ನೀಡುವಂತೆ ಒತ್ತಾಯಿಸಿ ಡಿಸಿ ಕಚೇರಿಯಲ್ಲಿ ತಹಸೀಲ್ದಾರ್ ಗುರುಬಸವರಾಜಗೆ ಜಿಲ್ಲೆಯ ವಿವಿಧ ಗ್ರಾಮಗಳ ರೈತರು ಮನವಿ ಶುಕ್ರವಾರ ಸಲ್ಲಿಸಿದರು.

    ಕಡ್ಲಬಾಳು, ಆನೆಕಲ್ಲು, ಹರೆಗೊಂಡನಹಳ್ಳಿ ಬ್ಯಾಲಾಳು, ಕೆ.ಓಬಳಾಪುರ, ಕಾತ್ಯಾಯಿನಿಮರಡಿ ಸೇರಿ ವಿವಿಧ ಗ್ರಾಮಗಳ ರೈತರು 2012ರಿಂದ ಇತ್ತೀಚೆಗೆ ವಿವಿಧ ಮೊತ್ತದ ಸಾಲವನ್ನು ಬ್ಯಾಂಕ್‌ನಲ್ಲಿ ಪಡೆದಿದ್ದೇವೆ. ಕೃಷಿಯನ್ನೇ ನಂಬಿರುವ ರೈತರು ಸಾಲ ಪಡೆದ ವರ್ಷದಿಂದ ಮೂರು ವರ್ಷಗಳವರೆಗೆ ಸಾಲ ಮರುಪಾವತಿಸಿದ್ದೇವೆ. ಆದರೆ, ಸತತ ಬರ, ಅತಿವೃಷ್ಟಿಯಿಂದಾಗಿ ಬೆಳೆ ಬಂದಿಲ್ಲ ಮತ್ತು ಕೋವಿಡ್ ಹಿನ್ನೆಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಲ ಮರುಪಾವತಿಸಲು ಆಗಿರುವುದಿಲ್ಲ. ಆದರೆ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಹೊಸಪೇಟೆ ಶಾಖೆಯವರು ಸಾಲ ಮರುಪಾವತಿಗೆ ನಮಗೆಲ್ಲ ನೋಟೀಸ್ ನೀಡಿದ್ದಾರೆ. ಈ ಬಗ್ಗೆ ಅನೇಕ ರೈತರು ನೋಟಿಸ್‌ಗೆ ಉತ್ತರಿಸಿದ್ದೇವೆ. ಅದಾಗ್ಯೂ ಕೂಡ ಮತ್ತೊಮ್ಮೆ ನೋಟಿಸ್ ನೀಡಿ ಸಾಲ ಮರುಪಾವತಿಸದಿದ್ದರೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವ ಎಚ್ಚರಿಗೆ ನೀಡಿದ್ದಾರೆ.

    ಪಡೆದ ಸಾಲ ಮರುಪಾವತಿಸಲು ಸಿದ್ಧರಿದ್ದು, ಅಸಲಿಗೆ ಬಡ್ಡಿ ಸೇರಿದಂತೆ ಇನ್ನಿತರ ಯಾವುದೇ ದಂಡ, ಚಕ್ರಬಡ್ಡಿ ಪಾವತಿಸಲು ಆರ್ಥಿಕವಾಗಿ ಶಕ್ತರಿಲ್ಲ. ಕೇವಲ ಒಟ್ಟು ಸಾಲದ ಶೇ. 15 ಮಾತ್ರ ಮರುಪಾವತಿಸಲು ಸಾಧ್ಯವಿದೆ. ಈಗಾಗಲೇ ಇದೇ ಬ್ಯಾಂಕ್‌ನಲ್ಲಿ ವಿಲೀನವಾದ ವಿವಿಧ ಬ್ಯಾಂಕ್ ಸೇರಿ ವಿವಿಧ ಬೇರೆ ಬ್ಯಾಂಕ್‌ಗಳಲ್ಲಿ ರೈತರು ಪಡೆದಿದ್ದ ಸಾಲಕ್ಕೆ ಈ ರೀತಿಯ ವಿನಾಯ್ತಿ ನೀಡಿ ಸಾಲ ಕಟ್ಟಿಸಿಕೊಂಡಿದ್ದಾರೆ. ಆದ್ದರಿಂದ ಆದೇ ರೀತಿ ಕಟ್ಟಿಸಿಕೊಂಡು ಋಣಮುಕ್ತರನ್ನಾಗಿ ಮಾಡುವಂತೆ ಬ್ಯಾಂಕ್‌ನವರಿಗೆ ಸೂಚನೆ ನೀಡಿ, ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

    ರೈತರಾದ ಪ್ರಶಾಂತ್ ಕರ್ಕಿಹಳ್ಳಿ, ನಾಗರಾಜ ಸಿ., ಎಸ್.ಎಸ್.ಎಂ.ಕೊಟ್ರೇಶ್, ಒ.ವೀರೇಶ್, ಒ.ಅಶೋಕ, ನಿಂಗಪ್ಪ ಸಿ., ಒ.ಕೊಟ್ರೇಶ್, ಮಂಜುನಾಥ, ಪೂಜಾರ್ ಬಸಪ್ಪ ಸೇರಿ ಮತ್ತಿತ್ತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts