More

    ಅಂಜನಾದ್ರಿಯೇ ಹನುಮ ಜನ್ಮಸ್ಥಳ; ಶೀಘ್ರವೇ ಮುಖ್ಯಮಂತ್ರಿಯಿಂದ ಘೋಷಣೆ

    ಹೊಸಪೇಟೆ: ಕೊಪ್ಪಳ ಜಿಲ್ಲೆಯ ಅಂಜನಾದ್ರಿಯೇ ಹನುಮ ಹುಟ್ಟಿದ ಸ್ಥಳ. ಶೀಘ್ರವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಮುಜರಾಯಿ ಮತ್ತು ವಕ್ಫ್ ಸಚಿವೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

    ಮುಜರಾಯಿ ಇಲಾಖೆಯಿಂದ ದಾಖಲೆ, ಪುರಾವೆ ಸಂಗ್ರಹಿಸಲಾಗುತ್ತಿದೆ. ರಾಮಾಯಣದಲ್ಲಿ ಇಲ್ಲಿನ ಕಿಷ್ಕಿಂಧೆ ಬಗ್ಗೆ ಉಲ್ಲೇಖವಿದೆ. ಆದರೆ, ತಿರುಪತಿಯಲ್ಲಿ ಹನುಮನ ಜನ್ಮಸ್ಥಳವಿದೆ ಎನ್ನಲು ಐತಿಹಾಸಿಕ ಪುರಾವಿಯಿಲ್ಲ ಎಂದು ಭಾನುವಾರ ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

    ಅಯೋಧ್ಯೆಯ ಶ್ರೀರಾಮ ಮಂದಿರ ಮಾದರಿಯಲ್ಲಿ ಅಂಜನಾದ್ರಿ ಬೆಟ್ಟ ಅಭಿವೃದ್ಧಿ ಮಾಡಲಾಗುವುದು. ಬಜೆಟ್‌ನಲ್ಲಿ ಈ ಬಗ್ಗೆ ಹೆಚ್ಚಿನ ಹಣ ಮೀಸಲಿರಿಸಲು ಪ್ರಯತ್ನ ನಡೆದಿದೆ. ಅಂಜನಾದ್ರಿ ಅಭಿವೃದ್ಧಿ ಕುರಿತು ಕೊಪ್ಪಳ ಡಿಸಿಯಿಂದ ಪ್ರಪೋಸಲ್ ಪಡೆಯಲಾಗಿದೆ. ಕೊಪ್ಪಳ ಉಸ್ತುವಾರಿ ಸಚಿವ ಆನಂದ ಸಿಂಗ್ ಆಗಿದ್ದರಿಂದ ಅಭಿವೃದ್ಧಿ ಪಕ್ಕಾ ಆಗಲಿದೆ ಎಂದರು.

    ರಾಷ್ಟ್ರಧ್ವಜ ಬಗ್ಗೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿರೋದು ಒಂದರ್ಥದಲ್ಲಿ. ಅದನ್ನು ಅರ್ಥ ಮಾಡಿಕೊಂಡಿದ್ದು ಇನ್ನೊಂದು ಬಗೆಯಲ್ಲಿ. ರಾಷ್ಟ್ರಧ್ವಜದ ಗೌರವಕ್ಕೆ ಚ್ಯುತಿ ಬರುವಂತೆ ಮಾತಾಡಿಲ್ಲ. ಅವರು ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸ್ತೀವಿ ಅಂತ ಎಲ್ಲೂ ಹೇಳಿಲ್ಲ. ಅದನ್ನು ವಿಪಕ್ಷದವರು ತಪ್ಪಾಗಿ ಗ್ರಹಿಸಿದ್ದರೆ. ಹೀಗಾಗಿ ಅಧಿವೇಶನ ನಡೆಸೋಕೆ ಅವರು ಬಿಡುತ್ತಿಲ್ಲ ಎಂದರು.

    ಅಂಜನಾದ್ರಿ ನಮ್ಮಲ್ಲಿದೆ ಅಂತ ಆಂಧ್ರ ಸರ್ಕಾರ ಆಧಾರ ರಹಿತವಾಗಿ ಹೇಳುತ್ತಿದೆ. ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (ಟಿಟಿಡಿ) ಹೇಳಿಕೆಯಲ್ಲಿ ತಾಳ-ಮೇಳವಿಲ್ಲ. ಇತಿಹಾಸ ಬರೆಯೋದೆ ಬೇರೆ, ನಮ್ಮ ಮುಂದೆ ಇರೋ ಇತಿಹಾಸವೇ ಬೇರೆ. ನಮ್ಮ ತಾತ, ತಂದೆ ಎಲ್ಲರೂ ಅಂಜನಾದ್ರಿಯೇ ಆಂಜನೇಯನ ಸ್ಥಳ ಅಂತಿದ್ದರು. ನಮ್ಮ ಮಕ್ಕಳಿಗೂ ನಾವು ಅದನ್ನೆ ಹೇಳಿದ್ದೀವಿ. ಅವರೂ ತಮ್ಮ ಮಕ್ಕಳಿಗೆ ಅದನ್ನೇ ಹೇಳುತ್ತಾರೆ. ತಿರುಪತಿ ನಮ್ಮ ದೇವರು ಆಗಿದೆ. ಹನುಮನ ವಿಷಯದಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ.
    ಆನಂದ ಸಿಂಗ್, ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts