More

    ಪರಿಸರ ಜಾಗೃತಿಗಾಗಿ ಚಿತ್ರಕಲೆ ಸ್ಪರ್ಧೆ

    ಹೊಸದುರ್ಗ: ಪಟ್ಟಣದ ಒಪ್ಪತ್ತಿನ ಸ್ವಾಮಿ ಮಠದಲ್ಲಿ ಭಾನುವಾರ ಪರಿಸರ ಮಾಲಿನ್ಯ ಕುರಿತು ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಯುವ ಬ್ರಿಗೇಡ್ ವತಿಯಿಂದ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು.

    ಬೆಳಗ್ಗೆ 10ಕ್ಕೆ ಆರಂಭವಾದ ಸ್ಪರ್ಧೆಯಲ್ಲಿ ತಾಲೂಕಿನ 22 ಶಾಲೆಗಳ 5ರಿಂದ 10ನೇ ತರಗತಿಯ 122 ಮಕ್ಕಳು ಭಾಗವಹಿಸಿದ್ದರು. ಇವರಿಗೆ ಚಿತ್ರ ಬಿಡಿಸಲು ಡ್ರಾಯಿಂಗ್ ಶೀಟ್ ಮತ್ತು ಪರಿಕರ ಒದಗಿಸಲಾಗಿತ್ತು.

    ಪ್ರತಿ ವಿದ್ಯಾರ್ಥಿಗೂ ಪರಿಸರ ಮಾಲಿನ್ಯ ಕುರಿತು ಜಾಗೃತಿ ಮೂಡಿಸುವ ಚಿತ್ರ ರಚನೆ ಜತೆಗೆ ಚಿತ್ರದ ಬಗ್ಗೆ ಹತ್ತು ವಾಕ್ಯಗಳಲ್ಲಿ ವಿವರಣೆ ಬರೆಯಲು ಸೂಚಿಸಲಾಗಿತ್ತು.

    ಮಕ್ಕಳು ರಚಿಸಿದ ಚಿತ್ರಗಳನ್ನು ಸಾರ್ವಜನಿಕರ ಪ್ರದರ್ಶನಕ್ಕೆ ಇಟ್ಟು ಅವರಿಂದ ಅಭಿಪ್ರಾಯ ಸಂಗ್ರಹಿಸಿ ವಿಜೇತರನ್ನು ಆಯ್ಕೆ ಮಾಡಲಾಯಿತು.

    ಎಸ್.ನಿಜಲಿಂಗಪ್ಪ ಶಾಲೆಯ ವಿದ್ಯಾರ್ಥಿ ಸಮರ್ಥ ರಾಯ್ಕರ್ (ಪ್ರಥಮ), ರಾಮನ್ ಶಾಲೆಯ ವಿದ್ಯಾರ್ಥಿನಿ ಯಶೋಲಕ್ಷ್ಮಿ(ದ್ವಿತೀಯ), ಎಸ್.ನಿಜಲಿಂಗಪ್ಪ ಶಾಲೆಯ ವಿದ್ಯಾರ್ಥಿನಿ ಇನಿ ತೃತೀಯ ಬಹುಮಾನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts