More

    ದಶರಥ ರಾಮೇಶ್ವರ ಅದ್ದೂರಿ ತೇರು

    ಹೊಸದುರ್ಗ: ತಾಲೂಕಿನ ದಶರಥ ರಾಮೇಶ್ವರ ವಜ್ರದಲ್ಲಿ ಬುಧವಾರ ಮುಂಜಾನೆ ದಶರಥ ರಾಮೇಶ್ವರ ಸ್ವಾಮಿ ಮಹಾ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

    ಉತ್ಸವಕ್ಕೂ ಪೂರ್ವವಾಗಿ ಮಂಗಳವಾರ ಶ್ರೀ ವೀರಭದ್ರೇಶ್ವರ ದೇವರ ಕೆಂಡ, ವೀರಗಾಸೆ ಹಾಗೂ ದಾಸೋಹ ಸೇವೆ ಜರುಗಿದವು. ಸಂಜೆ ದಶರಥ ರಾಮೇಶ್ವರ ಸ್ವಾಮಿ, ಕಂಚೀಪುರದ ಶ್ರೀ ಕಂಚೀವರದರಾಜಸ್ವಾಮಿ, ದಸೂಡಿ ಆಂಜನೇಯಸ್ವಾಮಿ ದೇವರಿಗೆ ಎಡೆ ಸೇವೆ ನೆರವೇರಿಸಲಾಯಿತು.

    ಬುಧವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ದೇಗುಲದಿಂದ ಪರಿವಾರದ ದೇವರುಗಳೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದ ದಶರಥ ರಾಮೇಶ್ವರ ಸ್ವಾಮಿಯ ರಥಾರೋಹಣ ನಡೆಯಿತು. ಶ್ರೀ ಕಂಚೀವರದರಾಜ ಸ್ವಾಮಿ, ದಸೂಡಿ ಆಂಜನೇಯಸ್ವಾಮಿ ದೇವರು ರಥಕ್ಕೆ ಪ್ರದಕ್ಷಿಣೆ ಹಾಕಿ ನಂತರ ತೇರಿಗೆ ಚಾಲನೆ ದೊರೆಯಿತು.

    ಬೃಹತ್ ಹೂಮಾಲೆಗಳಿಂದ ರಥವನ್ನು ಸಿಂಗರಿಸಲಾಗಿತ್ತು. ರಥೋತ್ಸವದ ನಂತರ ಕಂಚೀವರದರಾಜ ಸ್ವಾಮಿಯ ಮುಳ್ಳು ಪಾದುಕಾಸೇವೆ, ಪಂಚಾಮೃತ ಸ್ನಾನ ಹಾಗೂ ಕಂಕಣ ವಿಸರ್ಜನೆ ಕಾರ್ಯಕ್ರಮಗಳು ನಡೆದವು.

    ಬುಧವಾರ ನಸುಕಿನಲ್ಲಿ ನಡೆದ ರಥೋತ್ಸವಕ್ಕೆ ಚಿತ್ರದುರ್ಗ, ತುಮಕೂರು ಜಿಲ್ಲೆಯಿಂದ ಹೆಚ್ಚಿನ ಜನಸ್ತೋಮ ಹರಿದುಬಂದಿತ್ತು. ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.

    ಜಿಪಂ ಸದಸ್ಯೆ ಚೇತನಾ ಪ್ರಸಾದ್, ಗ್ರಾಪಂ ಅಧ್ಯಕ್ಷೆ ಅನಸೂಯಾ ಜಗನ್ನಾಥ್, ತಹಸೀಲ್ದಾರ್ ತಿಪ್ಪೇಸ್ವಾಮಿ, ಉಪತಹಸೀಲ್ದಾರ್ ರಾಮಚಂದ್ರಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts