More

    ಸಂಘಟನೆಯಿಂದ ರಾಜಕೀಯ ಪ್ರಾತಿನಿಧ್ಯ

    ಹೊಸದುರ್ಗ: ಮೀಸಲಾತಿಯ ಸಾಮಾಜಿಕ ನ್ಯಾಯದಿಂದ ಅನ್ಯಾಯಕ್ಕೊಳಗಾಗಿರುವ ಕುಂಚಿಟಿಗ ಸಮುದಾಯಕ್ಕೆ ರಾಜಕೀಯ ಸ್ಥಾನಮಾನಗಳು ದೊರೆಯುತ್ತಿಲ್ಲ ಎಂದು ಕುಂಚಿಟಿಗ ಸಂಸ್ಥಾನ ಮಠದ ಶ್ರೀ ಶಾಂತವೀರ ಸ್ವಾಮೀಜಿ ತಿಳಿಸಿದರು.

    ಪಟ್ಟಣದ ಕುಂಚಿಟಿಗ ಮಠದಲ್ಲಿ ಸಮುದಾಯದಿಂದ ಭಾನುವಾರ ಆಯೋಜಿಸಿದ್ದ ಗುರುವಂದನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

    ಕುಂಚಿಟಿಗ ಸಮುದಾಯದ ಮುಖಂಡರು ಸಮಾಜದ ಸಂಘಟನೆಗಾಗಿ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಬೇಕು. ಸಮಾಜವನ್ನು ಸುಭದ್ರವಾಗಿ ಸಂಘಟಿಸಿ ಸರ್ಕಾರಿ ಸೌಲಭ್ಯಗಳನ್ನು ದೊರಕಿಸಿಕೊಳ್ಳಲು ಶಕ್ತರಾಗಬೇಕು ಎಂದರು.

    ಕುಂಚಿಟಿಗರು ರಾಜಕೀಯ ಶಕ್ತಿಯಾಗಿ ಬೆಳೆಯುವ ಸಾಮರ್ಥ್ಯ ಹೊಂದಿದ್ದರೂ ಕೇವಲ ಮತಬ್ಯಾಂಕ್ ಆಗಿ ಬಳಕೆಯಾಗುತ್ತಿರುವುದು ವಿಷಾದನೀಯ ಸಂಗತಿ. ಇಂತಹ ಸ್ಥಿತಿಗಳನ್ನು ಅರಿತು ಸಂಘಟನೆಗೊಂಡು ರಾಜಕೀಯ ಶಕ್ತಿ ನೀಡಲು ಕುಂಚಿಟಿಗ ಗುರುಪೀಠ ಶ್ರಮಿಸುತ್ತದೆ. ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಲು ಹೋರಾಡುವ ಅಗತ್ಯವಿದೆ. ಇದರಿಂದ ಶೈಕ್ಷಣಿಕ ಹಾಗೂ ಉದ್ಯೋಗ ಅವಕಾಶ ಪಡೆಯಬಹುದಾಗಿದೆ ಎಂದರು.

    ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಮಾತನಾಡಿ, ಶಾಂತವೀರ ಶ್ರೀಗಳ ಶ್ರಮ ಹಾಗೂ ಒತ್ತಾಸೆಯಿಂದ ಕುಂಚಿಟಿಗ ಸಮಾಜದ ಸಂಘಟನೆ ಸಾಧ್ಯವಾಗಿದೆ. ಸಹೋದರ ಸಮಾಜಗಳೊಂದಿಗೆ ಆತ್ಮೀಯ ಸಂಬಂಧವಿರಿಸಿಕೊಂಡು ಬದುಕಿದರೆ ಹಳ್ಳಿಗಳಲ್ಲಿ ಸೌಹಾರ್ದ ವಾತಾವರಣ ನಿರ್ಮಾಣವಾಗುವ ಜತೆಗೆ ರಾಜಕೀಯ ಸ್ಥಾನಮಾನ ಪಡೆಯಬಹುದು ಎಂದು ತಿಳಿಸಿದರು.

    ಕುಂಚಿಟಿಗ ಸಮಾಜದ ಕೇಂದ್ರ ಸಮಿತಿ ಅಧ್ಯಕ್ಷ ಎಚ್.ಆರ್.ಕಲ್ಲೇಶಪ್ಪ, ಪುರಸಭೆ ಸದಸ್ಯ ಶ್ರೀನಿವಾಸ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ದುಗ್ಗಾವರ ಮಂಜುನಾಥ್, ಉದ್ಯಮಿ ಜ್ಞಾನೇಶ್, ಮಹೇಶ್, ರವಿ, ದೇವರಾಜ್, ಲೋಕೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts