More

    ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ

    ಹೊಸದುರ್ಗ: ತಾಲೂಕಿನ ಬಿಜೆಪಿ ಕಾರ್ಯಕರ್ತರು ಹಾಗೂ ತನ್ನ ಬೆಂಬಲಿಗರ ವಿರುದ್ಧ ಜಿಲ್ಲಾ ಪೋಲಿಸರು ದ್ವೇಷ ಸಾಧಿಸಿ ಅವರನ್ನು ಜೈಲಿಗಟ್ಟುತ್ತಿದ್ದಾರೆ ಎಂದು ಆಪಾದಿಸಿ ಶುಕ್ರವಾರ ತಡರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಪ್ರಕಟಿಸಿದ್ದ ಶಾಸಕ ಗೂಳಿಹಟ್ಟಿ ಡಿ.ಶೇಖರ್, ಶನಿವಾರ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ.

    ಶನಿವಾರ ಇನ್ನೊಂದು ಹೆಜ್ಜೆ ಮುಂದಿಟ್ಟು ಹೊಸದುರ್ಗದ ಹಿಂದಿನ ಪೊಲೀಸ್ ಅಧಿಕಾರಿ ಒಬ್ಬರು ಜಿಲ್ಲಾ ಪೋಲಿಸ್ ಇಲಾಖೆ ತಾಲೂಕಿನ ಮೇಲೆ ಹದ್ದಿನ ಕಣ್ಣಿಟ್ಟಿರುವ ಕುರಿತು ಮಾತನಾಡಿದ 5 ನಿಮಿಷದ ಆಡಿಯೋ ತುಣಕು ಬಿಡುಗಡೆ ಮಾಡಿದ್ದಾರೆ.

    ಪ್ರಸ್ತುತ ಘಟನೆ ಕುರಿತು ಮಾತನಾಡಿ, ತಾಲೂಕು ಪೋಲಿಸರು ಉತ್ತಮ ಕೆಲಸ ಮಾಡುತ್ತಿದ್ದಾರೆ. ನಾನು ಇಲಾಖೆ ಕೆಲಸದಲ್ಲಿ ಮೂಗು ತೂರಿಸುವುದಿಲ್ಲ. ಆದರೆ, ನನ್ನ ಬೆಂಬಲಿಗರ ವಿರುದ್ಧ ಜಿಲ್ಲಾ ಪೊಲೀಸರು ವಿನಾಕಾರಣ ದ್ವೇಷ ಸಾಧಿಸುತ್ತಿದ್ದಾರೆ ಎಂದು ದೂರಿದರು.

    ಹೊಸದುರ್ಗದ ಮೇಲೆ ಗಮನವಿಟ್ಟು ಮೂರು ವಿಶೇಷ ತಂಡ ರಚಿಸಿ ಶಾಸಕರ ಬೆಂಬಲಿಗರ ಮೇಲೆ ಕಣ್ಣಿಟ್ಟಿದಾಗಿ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿದ್ದು, ಇಲಾಖೆಯ ಪಕ್ಷಪಾತ ದೋರಣೆಗೆ ಸಾಕ್ಷಿ ಎಂದು ಆಕ್ಷೇಪಿಸಿದರು.

    ಕೆರೆ, ಹಳ್ಳಗಳ ಮಣ್ಣು ಮಿಶ್ರಿತ ಮರಳನ್ನು ಸ್ಥಳಿಯರು ಸ್ವಂತ ಉದ್ದೇಶ ಹಾಗೂ ದೇವಾಲಯ ನಿರ್ಮಾಣಕ್ಕೆ ಬಳಸಿದರೆ, ಅವರು ನನ್ನ ಬೆಂಬಲಿಗರಾಗಿದ್ದರೆ ಹುಡುಕಿ ಪ್ರಕರಣ ದಾಖಲಿಸಲಾಗುತ್ತಿದೆ. ಪೊಲೀಸರ ಕಿರುಕುಳದಿಂದ ಕಾರ್ಯಕರ್ತರನ್ನು ರಕ್ಷಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

    ಹಿಂದೆ ಸಮ್ಮಿಶ್ರ ಸರ್ಕಾರದ ವೇಳೆ ತಾಲೂಕಿನಲ್ಲಿ ಹಲವು ಅಕ್ರಮಗಳು ನಡೆದಿದ್ದವು. ಕಾನೂನಿನಡಿಯಲ್ಲಿ ಅವಕಾಶ ಕಲ್ಪಿಸಿ ಅವನ್ನು ಸಕ್ರಮಗೊಳಿಸಿದ್ದಾರೆ. ಅಂತಹ ಯಾವುದೇ ಕೆಲಸ ಮಾಡದಿದ್ದರೂ ನಮಗೆ ಹಿಂಸೆ ನಿಡಲಾಗುತ್ತಿದೆ.

    ಪಟ್ಟಣಕ್ಕೆ ಹೊಂದಿಕೊಂಡ ಅರಣ್ಯ ಇಲಾಖೆಗೆ ಸೇರಿದ ಕೋಟ್ಯಂತರ ರೂ. ಬೆಲೆ ಬಾಳುವ ಡಿಮ್ಡ್ ಫಾರೆಸ್ಟ್ ಪ್ರದೇಶವನ್ನು ಅರಣ್ಯ ಕಾನೂನುಗಳಿಗೆ ವಿರುದ್ಧವಾಗಿ ಪ್ರಭಾವಿಯೊಬ್ಬರಿಗೆ ಕಲ್ಲು ಗಣಿಗಾರಿಕೆಗೆ ಮಂಜೂರು ಮಾಡಲಾಗಿದೆ. ಇದರಲ್ಲಿ ಅರಣ್ಯ, ಕಂದಾಯ, ಪೋಲಿಸ್ ಅಧಿಕಾರಿಗಳು ಶಾಮಿಲಾಗಿದ್ದಾರೆ ಎಂದು ಶಾಸಕರು ಆಪಾದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts