More

    ಹಾಲುರಾಮೇಶ್ವರದಲ್ಲಿ ಅಭಿವೃದ್ಧಿಗೆ ಚಾಲನೆ

    ಹೊಸದುರ್ಗ: ತಾಲೂಕಿನ ಪುಣ್ಯಕ್ಷೇತ್ರ ಹಾಲುರಾಮೇಶ್ವರ ಕ್ಷೇತ್ರದಲ್ಲಿ ಸೋಮವಾರ ಅಭಿವೃದ್ಧಿ ಹಾಗೂ ದೇವಾಲಯಗಳ ನಿರ್ಮಾಣಕ್ಕೆ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಚಾಲನೆ ನೀಡಿದರು.

    ಹಾಲು ರಾಮೇಶ್ವರ, ಶ್ರೀ ಗಂಗಾದೇವಿ ಹಾಗೂ ಸೀತಾರಾಮ ಮಂದಿರದ ಪುನರ್ ನಿರ್ಮಾಣ ಕಾರ್ಯ ಆರಂಭಿಸುವ ಉದ್ದೇಶದಿಂದ ಕಳೆದ ಶನಿವಾರದಿಂದ ಕ್ಷೇತ್ರದಲ್ಲಿ ಹೋಮ ಸೇರಿ ವಿಶೇಷ ಪೂಜಾ ಕಾರ್ಯ ಆಯೋಜಿಸಲಾಗಿತ್ತು. ನೂರಾರು ಶಿಲ್ಪಿಗಳು, ಭಕ್ತರು ಪೂಜೆ ಕಾರ್ಯದಲ್ಲಿ ಭಾಗವಹಿಸಿದ್ದರು.

    ಸೋಮವಾರ ಬೆಳಗ್ಗೆ ಶಾಸಕರು ಹೋಮಕ್ಕೆ ಪೂರ್ಣಾಹುತಿ ಸಲ್ಲಿಸಿ ಕಲ್ಲು ಕಂಬ ಕೆತ್ತುವ ಮೂಲಕ ದೇವಾಲಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದರು. ಈ ವೇಳೆ ಗಣಪತಿ ಹೋಮ, ಗಣ ಹೋಮ, ನವಗ್ರಹ ಹೋಮ, ಅಷ್ಟದಿಕ್ಪಾಲಕರ ಹೋಮ ನಡೆಸಲಾಯಿತು.

    ಹಾಲು ರಾಮೇಶ್ವರ ಸ್ವಾಮಿ ಹಾಗೂ ಗಂಗಾದೇವಿ ಕೊಳದ ಸನ್ನಿಧಿಯಲ್ಲಿ ರುದ್ರಾಭಿಷೇಕ, ಕುಂಕುಮಾರ್ಚನೆ, ಅಷ್ಟೋತ್ತರ, ಮಹಾಮಂಗಳಾರತಿ ಮತ್ತಿತರ ವಿಶೇಷ ಪೂಜೆ ನೆರವೇರಿದವು.

    2010ರಲ್ಲಿ ಹಾಲುರಾಮೇಶ್ವರ ಕ್ಷೇತ್ರ ಅಭಿವೃದ್ಧಿ ಹಾಗೂ ಶಿಲಾ ದೇವಾಲಯಗಳ ನಿರ್ಮಾಣಕ್ಕಾಗಿ 8 ಕೋಟಿ ವೆಚ್ಚದ ಯೋಜನೆ ರೂಪಿಸಿ ಅಂದಿನ ಬಿಜೆಪಿ ಸರ್ಕಾರ ಅನುದಾನ ಬಿಡುಗಡೆ ಮಾಡಿತ್ತು. ಹಳೆಯ ದೇವಾಲಯಗಳನ್ನು ಕೆಡವಿ ಹೊಸ ದೇವಾಲಯ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು.

    ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ದೇವಾಲಯ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತ್ತು. ನೂರಕ್ಕೂ ಹೆಚ್ಚು ನುರಿತ ಕೆತ್ತನೆ ಕೆಲಸಗಾರರು ಸೋಮವಾರದಿಂದ ಕೆಲಸ ಆರಂಭಿಸಿದರು. ಜೂನ್ ವೇಳೆಗೆ ಮೂರು ದೇವಾಲಯಗಳು ಪೂರ್ಣಗೊಳಿಸುವ ಯೋಜನೆ ರೂಪಿಸಲಾಗಿದೆ.

    2008ರಲ್ಲಿ ಶಾಸಕನಾಗಿ ಆಯ್ಕೆಯಾದಾಗ ಹಾಲು ರಾಮೇಶ್ವರ ಕ್ಷೇತ್ರದ ಅಭಿವೃದ್ಧಿಗೆ ಯೋಜನೆ ರೂಪಿಸಿ ಅಗತ್ಯ ಅನುದಾನ ನೀಡಿದ್ದೆ. ಆದರೆ, 2013ರಲ್ಲಿ ನಾನು ಸೋತ ನಂತರ ದೇವಾಲಯ ನಿರ್ಮಾಣ ಕಾರ್ಯಕ್ಕೆ ಹಿನ್ನಡೆಯಾಗಿತ್ತು ಎಂದು ಗೂಳಿಹಟ್ಟಿ ಡಿ.ಶೇಖರ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts