More

    ನಗರದ ಘೋಷಿತ ಸ್ಲಂಗಳಲ್ಲಿ 2300 ಮನೆಗಳ ನಿರ್ಮಾಣ

    ಚಿತ್ರದುರ್ಗ: ಹೊಸ ಸಂತೆ ಮೈದಾನ ಸೇರಿದಂತೆ ಘೋಷಿತ ನಗರದ ಎಲ್ಲ ಸ್ಲಂಗಳಲ್ಲೂ ಒಟ್ಟು 2300 ಮನೆಗಳನ್ನು ನಿರ್ಮಿಸಲಾಗುವುದೆಂದು ಶಾಸಕ ಜಿ. ಎಚ್.ತಿಪ್ಪಾರೆಡ್ಡಿ ಹೇಳಿದರು. ನಗರದ ಹೊಸಸಂತೆ ಮೈದಾನ ಬಡಾವಣೆಯ 92 ನಿವಾಸಿಗಳಿಗೆ ಮಂಗಳವಾರ ಹಕ್ಕು ಪತ್ರ ವಿತರಿಸಿ ಅವರು ಮಾತನಾಡಿದರು.
    ಅಂದಾಜು 40 ವರ್ಷಗಳಿಂದ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಹಕ್ಕಪತ್ರ ವಿತರಿಸಿರಲಿಲ್ಲ. ಅಂತಹ ಪ್ರದೇಶಗಳನ್ನು ಗುರುತಿಸಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗಳಿಂದ ಅರ್ಹ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಲಾಗುತ್ತಿದೆ. ಕಾವಡಿಗರಹಟ್ಟಿ,ಸಿ.ಕೆ.ಪುರ, ಜೆ.ಜೆ. ಹಟ್ಟಿ,ಜಟ್‌ಪಟ್ ನಗರ,ಸ್ವಾಮಿ ವಿವೇಕಾನಂದ ನಗರ,ವೆಂಕಟೇಶ್ವರ ಬಡಾವಣೆ,ಹಿಮ್ಮತ್ ನಗರ ಸೇರಿದಂತೆ ನಗರದ ನಾನಾ ಘೋಷಿತ ಅನೇಕ ಸ್ಲಂಗಳ ಅರ್ಹ ನಿವಾಸಿಗಳಿಗೆ ಹಂತ ಹಂತವಾಗಿ ಹಕ್ಕು ಪತ್ರಗಳನ್ನು ವಿತರಿಸಲಾಗುವುದು.
    ಹೊಸಸಂತೆ ಮೈದಾನದಲ್ಲಿ ಜಿಪ್ಲಸ್ 2 ಮಾದರಿ 105 ಮನೆಗಳನ್ನು ನಿರ್ಮಿಸಲು ಅನುದಾನ ಬಂದಿದೆ. ಸ್ಥಳ ಗುರುತಿಸಿದರೆ ಮನೆಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದೆಂದು. ಅರ್ಹ ಫಲಾನುಭವಿಗಳು ಮಂಡಳಿ ಸೂಚಿತ ಮೊತ್ತವನ್ನು ಪಾವತಿಸಬೇಕೆಂದರು.

    ಪೈಪ್‌ಲೈನ್‌ಮೂಲಕ ಅಡುಗೆ ಅನಿಲ
    ನಗರದ ಎಲ್ಲ ಮನೆಗಳಿಗೆ ನಿರಂತರ 24 ತಾಸು ನೀರಿನ ಸಂಪರ್ಕ ಮತ್ತು ಪ್ರತಿ ಮನೆಗೆ ಪೈಪ್ ಲೈನ್ ಮೂಲಕ ಅಡುಗೆ ಅನಿಲ ಸಂಪರ್ಕವನ್ನು ಒಂದೆರಡು ವರ್ಷಗಳಲ್ಲಿ ಒದಗಿಸಲಾಗುವುದು. ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್,ಉಪಾಧ್ಯಕ್ಷೆ ಮಂಜುಳಾ ವೇದಾ ಪ್ರಕಾಶ್,ಸದಸ್ಯರಾದ ಸರ್ದಾರ್‌ಅಹಮ್ಮದ್‌ಪಾಷ,ಸುರೇಶ್,ಹರೀಶ್,ಶ್ವೇತಾವೀರೇಶ್,ನಗರಸಭೆ ಪ್ರಭಾರ ಆಯುಕ್ತ ಸಿ.ವಾಸಿಂ,ಮುಖಂಡರಾದ ರವಿಕುಮಾರ್, ಪರಮೇಶ್,ದಾವೂದ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts