More

    ಆಸ್ತಿ ಮಾಲೀಕರಿಗೆ ಆಶಾಕಿರಣ, ಭೂ ದಾಖಲೆಗಳ ಡಿಜಿಟಲೀಕರಣ

    ಬೆಂಗಳೂರು: ಬ್ರಿಟೀಷರ ಕಾಲದಿಂದ ಕೈಬರಹದಲ್ಲೇ ಇದ್ದ ಭೂ ದಾಖಲೆಗಳನ್ನು ಡಿಜಿಟಲೀಕರಣ ಮಾಡಲು ಕಂದಾಯ ಇಲಾಖೆ ಮುಂದಾಗಿದೆ.

    ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಭೂ ದಾಖಲೆ ಪಡೆಯಲು ಆಸ್ತಿ ಮಾಲೀಕರು ಹರಸಾಹಸ ಪಡಬೇಕಿತ್ತು. ಕಚೇರಿಯಿಂದ ಕಚೇರಿಗೆ ಅಲೆಯುವುದು, ಅಧಿಕಾರಿಗಳ ಬಳಿ ಅಂಗಲಾಚುವುದು ಇತ್ತು. ದಶಕಗಳಿಂದಲೂ ಇದೆ. ರಾಜ್ಯದಲ್ಲಿ 2.40 ಕೋಟಿ ಸರ್ವೆ ನಮಬರ್‌ಗಳಿದ್ದು, ಈ ಎಲ್ಲ ಸರ್ವೆ ನಂಬರ್ ಹಾಗೂ ಸರ್ವೇ ನಂಬರ್ ಇಲ್ಲದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣಗೊಳಿಸಲಾಗುತ್ತದೆ. ಕೈಬರಹದ ಪಹಣಿ, ಗ್ರ್ಯಾಂಟ್‌ಆರ್ಡರ್, ಸಾಗುವಳಿ ಚೀಟಿ, ಸ್ಕೆಚ್‌ಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಲು ಯೋಜನೆ ಸಿದ್ಧಗೊಂಡಿದೆ.

    ರೆಕಾರ್ಡ್ ರೂಮ್ಗಳು ಶಿಥಿಲಾವಸ್ಥೆಯಲ್ಲಿವೆ. ದಾಖಲೆಗಳು ಜೀರ್ಣಾವಸ್ಥೆ ತಲುಪಿವೆ. ಕೆಲವು ಸಂದರ್ಭಗಳಲ್ಲಿ ದಾಖಲೆಗಳು ಕೈಗೇ ಸಿಗುವುದಿಲ್ಲ. ಬೋಗಸ್ ಆಗಿ ತಿದ್ದುಪಡಿ ಮಾಡಿರುವ ಉದಾಹರಣೆ ಇವೆ. ಉದ್ದೇಶಪೂರ್ವಕವಾಗಿ ಕಡತಗಳ ಕಳವು ನಡೆದಿವೆ ಎನ್ನುವ ದೂರುಗಳಿವೆ. ಈ ದಾಖಲೆ ನೀಡಲು ಶೋಷಣೆ ನಡೆಯುತ್ತಿದೆ. ಜನವರಿಯಿಂದ ಸಮರೋಪಾದಿಯಲ್ಲಿ ಸ್ಕಾೃನಿಂಗ್ ಕೈಗೊಂಡು ಮುಂದಿನ ವರ್ಷದೊಳಗೆ ಪೂರ್ಣಗೊಳಿಸಲಾತ್ತದೆ. ಜನರಿಗೆ ಆನ್‌ಲೈನ್‌ನಲ್ಲೇ ತಮ್ಮ ಆಸ್ತಿ ದಾಖಲೆ ಪಡೆಯಬಹುದು ಎಂದು ಕೃಷ್ಣ ಬೈರೇಗೌಡ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts