More

    ಕೆವಿನ್ ಪೀಟರ್ಸೆನ್ ಪ್ರಕಾರ ಈ ತಂಡವೇ ಐಪಿಎಲ್-2020 ಗೆಲ್ಲಲಿದೆ!

    ನವದೆಹಲಿ: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸೆನ್ ತವರಿನ ಕಾಮೆಂಟರಿ ಕೆಲಸಗಳನ್ನು ಮುಗಿಸಿ ಐಪಿಎಲ್ ಟೂರ್ನಿಯಲ್ಲೂ ವೀಕ್ಷಕವಿವರಣೆಕಾರರಾಗಿ ಕಾರ್ಯನಿರ್ವಹಿಸಲು ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಇದೇ ವೇಳೆ ಅವರು ಈ ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲಬೇಕೆಂದು ತಾವು ಬಯಸಿರುವ ತಂಡ ಯಾವುದು ಎಂಬುದನ್ನು ಬಹಿರಂಗಪಡಿಸಿದ್ದಾರೆ.

    ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಬೆನ್ನಲ್ಲೇ ಮಾಜಿ ಬ್ಯಾಟ್ಸ್‌ಮನ್ ಪೀಟರ್ಸೆನ್ ಸೌಥಾಂಪ್ಟನ್‌ನ ಬಯೋ-ಬಬಲ್‌ನಿಂದ ದುಬೈಗೆ ನೇರವಾಗಿ ಆಗಮಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಪೀಟರ್ಸೆನ್, ಕ್ರಿಕೆಟ್ ಚಟುವಟಿಕೆಗಳು ಮತ್ತೆ ಶುರುವಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಜತೆಗೆ ಐಪಿಎಲ್‌ನಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ಸಂಭ್ರಮ ಹಂಚಿಕೊಂಡಿದ್ದಾರೆ.

    ಕೆವಿನ್ ಪೀಟರ್ಸೆನ್ ಪ್ರಕಾರ ಈ ತಂಡವೇ ಐಪಿಎಲ್-2020 ಗೆಲ್ಲಲಿದೆ!

    ಇದೇ ವೇಳೆ, ಈ ಬಾರಿ ಐಪಿಎಲ್ ಪ್ರಶಸ್ತಿಯನ್ನು ಯಾವ ತಂಡ ಗೆಲ್ಲಲಿದೆ ಎಂದು ತಮಗೆ ತಾವೇ ಪ್ರಶ್ನೆ ಹಾಕಿಕೊಂಡಿರುವ 40 ವರ್ಷದ ಪೀಟರ್ಸೆನ್, ‘ಡೆಲ್ಲಿ ತಂಡ ಗೆಲ್ಲುವ ಭರವಸೆಯಲ್ಲಿದ್ದೇನೆ’ ಎಂದು ಉತ್ತರವನ್ನೂ ನೀಡಿದ್ದಾರೆ.

    ಇದನ್ನೂ ಓದಿ: VIDEO: ನಟಿ ಪ್ರಾಚಿ ಸಿಂಗ್ ಜತೆ ಕ್ರಿಕೆಟಿಗ ಪೃಥ್ವಿ ಷಾ ಡೇಟಿಂಗ್..?

    ಪೀಟರ್ಸೆನ್ ಈ ಮುನ್ನ ಐಪಿಎಲ್‌ನಲ್ಲಿ ಆರ್‌ಸಿಬಿ, ಪುಣೆ ಸೂಪರ್‌ಜೈಂಟ್ಸ್ ತಂಡಗಳಲ್ಲದೆ ಡೆಲ್ಲಿ ತಂಡವನ್ನೂ ಪ್ರತಿನಿಧಿಸಿದ್ದರು. ಈಗ ಡೆಲ್ಲಿ ಕ್ಯಾಪಿಟಲ್ಸ್ ಆಗಿರುವ ತಂಡ ಆಗ ಡೆಲ್ಲಿ ಡೇರ್‌ಡೆವಿಲ್ಸ್ ಆಗಿತ್ತು. ಡೆಲ್ಲಿ ತಂಡವನ್ನು ಈ ಬಾರಿ ಯುವ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದು, ಆರ್. ಅಶ್ವಿನ್, ಅಜಿಂಕ್ಯ ರಹಾನೆ ಅವರಂಥ ಅನುಭವಿ ಆಟಗಾರರಿದ್ದಾರೆ. ಆಸ್ಟ್ರೇಲಿಯಾದ ಶ್ರೇಷ್ಠ ನಾಯಕ ರಿಕಿ ಪಾಂಟಿಂಗ್ ತಂಡದ ಮುಖ್ಯ ಕೋಚ್ ಆಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts