More

    ‘ಚೀನಾ ಸಹಾಯದಿಂದ ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್​ 370 ಮರುಸ್ಥಾಪಿತವಾಗಲಿದೆ…’

    ಶ್ರೀನಗರ: ಜಮ್ಮುಕಾಶ್ಮೀರದಲ್ಲಿ ಆರ್ಟಿಕಲ್​ 370ನ್ನು ರದ್ದುಗೊಳಿಸಿದ್ದರಿಂದಲೇ ಚೀನಾ ಇದೀಗ ಲಡಾಖ್​ ವಾಸ್ತವ ನಿಯಂತ್ರಣ ರೇಖೆ ಬಳಿ ಆಕ್ರಮಣ ಮಾಡುತ್ತಿದೆ ಎಂದು ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್​ ಅಬ್ದುಲ್ಲಾ ಹೇಳಿದ್ದಾರೆ.

    ಇಂದು ಮಾಧ್ಯಮವೊಂದಕ್ಕೆ ಮಾತನಾಡಿದ ಅವರು, ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾಗುತ್ತದೆ ಎಂದು ಚೀನಾ ನಿರೀಕ್ಷೆ ಮಾಡಿರಲಿಲ್ಲ. ಅದಕ್ಕಾಗಿಯೇ ಈಗ ಲಡಾಖ್​​ ಗಡಿಯಲ್ಲಿ ಕ್ಯಾತೆ ತೆಗೆದು, ಆಕ್ರಮಣ ಮಾಡುತ್ತಿದೆ. ಹಾಗೇ ಚೀನಾದ ಸಹಕಾರದಿಂದ ಜಮ್ಮುಕಾಶ್ಮೀರದಲ್ಲಿ ಆರ್ಟಿಕಲ್​ 370 ಮರುಸ್ಥಾಪಿತವಾಗುತ್ತದೆ ಎಂಬ ಆಶಯವಿದೆ ಎಂದಿದ್ದಾರೆ.

    ನಾನೆಂದೂ ಚೀನಾ ಅಧ್ಯಕ್ಷನನ್ನು ಭಾರತಕ್ಕೆ ಆಹ್ವಾನಿಸಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅದನ್ನು ಮಾಡಿದ್ದಾರೆ. ಚೀನಾ ಅಧ್ಯಕ್ಷನನ್ನು ಆಮಂತ್ರಿಸುವ ಜತೆ ಅವರೊಂದಿಗೆ ಔತಣಕೂಟವನ್ನೂ ನಡೆಸಿದ್ದಾರೆ ಎಂದು ಫಾರೂಕ್​ ಅಬ್ದುಲ್ಲಾ ವ್ಯಂಗ್ಯವಾಡಿದರು.

    ಕಳೆದ ವರ್ಷ ಆಗಸ್ಟ್​ 5ರಂದು ಸರ್ಕಾರ ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಗೊಳಿಸುವುದನ್ನು ನಾವ್ಯಾರೂ ನಿರೀಕ್ಷೆ ಮಾಡಿರಲಿಲ್ಲ. ಅದಾದ ಬಳಿಕ ನಮಗೆ ಮಾತನಾಡಲು ಅವಕಾಶವೂ ಸಿಗಲಿಲ್ಲ ಎಂದೂ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts