More

    ಮೃತ ರೈತನ ಶವವಿಟ್ಟು ಪ್ರತಿಭಟನೆ; ತಹಸಿಲ್ ಕಚೇರಿ ಎದುರು ಕುಟುಂಬಸ್ಥರ ಆಕ್ರಂದನ

    ಸಾಂತ್ವನ ಹೇಳಿದ ಪ್ರಭಾರ ತಹಸೀಲ್ದಾರ್ ನಟರಾಜ

    ಹೂವಿನಹಡಗಲಿ: ತುಂಡು ಜಮೀನಿನ ಹಕ್ಕಿಗಾಗಿ ಹೋರಾಟ ಮಾಡುತ್ತ, ಒಂದು ವಾರದ ಹಿಂದೆ ಕಾಣೆಯಾಗಿ, ಭಾನುವಾರ ಶವವಾಗಿ ಪತ್ತೆಯಾಗಿದ್ದ ರೈತ ನಂದಿಹಳ್ಳಿ ಬಣಕಾರ ಮಲ್ಲಪ್ಪನ ಕುಟುಂಬಸ್ಥರು ಆತನ ಶವವನ್ನು ತಹಸಿಲ್ ಕಚೇರಿ ಎದುರು ಇರಿಸಿ ಸೋಮವಾರ ಪ್ರತಿಭಟನೆ ನಡೆಸಿದರು.

    ಬಣಕಾರ ಮಲ್ಲಪ್ಪನ ಶವವಾಗಿ ಪತ್ತೆಯಾದರೂ ವಿಚಾರಿಸಲು ಬಾರದ ತಹಸೀಲ್ದಾರ್, ಸರ್ವೇ ಇಲಾಖಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನ್ಯಾಯಕ್ಕಾಗಿ ಹೋರಾಟ ಮಾಡಿದವರಿಗೆ ನ್ಯಾಯ ಸಿಗಲಿಲ್ಲ. ಅಧಿಕಾರಿಗಳೇ ಮೋಸ ಮಾಡಿದ್ದಾರೆ. ತನ್ನ ಜೀವಕ್ಕೆ ಅಪಾಯವಿದೆ ಎಂದು ಮನವಿ ಮಾಡಿದ್ದರೂ ರಕ್ಷಣೆ ನೀಡಲಿಲ್ಲ ಎಂದು ಮಲ್ಲಪ್ಪನ ಕುಟುಂಬದ ಸದಸ್ಯರು ಅಳಳು ತೋಡಿಕೊಂಡರು. ಅಲ್ಲದೇ ತಹಸೀಲ್ದಾರ್, ಸರ್ವೇ ಇಲಾಖೆ ಅಧಿಕಾರಿಗಳು ಬರಲೇ ಬೇಕು ಎಂದು ಪಟ್ಟು ಹಿಡಿದರು. ಕೊನೆಗೆ ಪ್ರಭಾರ ತಹಸೀಲ್ದಾರ್ ನಟರಾಜ ಆಗಮಿಸಿ ಕುಟುಂಬದವರಿಗೆ ಸಾಂತ್ವನ ಹೇಳಿ, ನ್ಯಾಯ ಕೊಡಿಸುವ ಭರವಸೆ ನೀಡಿದರು. ನಂತರ ಶವ ಸಂಸ್ಕಾರ ನಡೆಸಲಾಯಿತು.

    ಏಳು ಜನರ ವಿರುದ್ಧ ಪ್ರಕರಣ: ಹಡಗಲಿ ತಾಲೂಕು ಆಡಳಿತ ಸೌಧದ ಪಕ್ಕದಲ್ಲಿ ಅಕ್ರಮವಾಗಿ ಲೇಔಟ್ ಮಾಡಿದ ಮಾಲೀಕ ಜಿಪಂ ಮಾಜಿ ಸದಸ್ಯ ಪಿ.ವಿಶ್ವನಾಥ ವಿಜಯಕುಮಾರ್, ಪುರಸಭೆ ಮುಖ್ಯಾಧಿಕಾರಿ ನಾಸೀರ್ ಬಾಷಾ, ಪುರಸಭೆ ಇಂಜಿನಿಯರ್ ಸಿದ್ದಯ್ಯ, ಪುರಸಭೆ ಪ್ರಥಮ ದರ್ಜೆ ಸಹಾಯಕ ರಾಮಮೂರ್ತಿ, ಸರ್ವೇ ಇಲಾಖೆ ನೌಕರರಾದ ಕೌಸರ್, ಹಂಸಕುಮಾರಿ, ಸರ್ಪಭೂಷಣ ವಿರುದ್ಧ ಹೂವಿನಹಡಗಲಿ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ. ರೈತ ಬಣಕಾರ ಮಲ್ಲಪ್ಪ ಸಾವಿಗೆ ಇವರೇ ಕಾರಣ ಎಂದು ಮೃತನ ಪತ್ನಿ ಸರೋಜಾ ದೂರು ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts