More

    ರೋಗ ಬರುವ ಮುನ್ನ ಎಚ್ಚರಿಕೆ ವಹಿಸಿ

    ಹೂವಿನಹಡಗಲಿ: ರೋಗ ಬರುವ ಮುನ್ನ ಎಚ್ಚರಿಕೆ ವಹಿಸಿದರೆ ಆಸ್ಪತ್ರೆ ಮತ್ತು ಮಾತ್ರಗಳಿಂದ ದೂರವಿರಬಹುದು ಎಂದು ಗವಿಮಠದ ಡಾ.ಹಿರಿಶಾಂತ ವೀರ ಸ್ವಾಮೀಜಿ ಹೇಳಿದರು.

    ಇದನ್ನೂ ಓದಿ: ಉಚಿತ ಆರೋಗ್ಯ ತಪಾಸಣೆ ಶಿಬಿರ

    ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹೊಳಗುಂದಿಯ ಎ.ಎಂ.ಪಿ. ಅಜ್ಜಯ್ಯ ಸಮಾಜಮುಖಿ ಟ್ರಸ್ಟ್‌ನ 6ನೇ ವರ್ಷಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣಾ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

    ಮನುಷ್ಯ ದಿನನಿತ್ಯದ ಬದುಕನ್ನು ಹಲವಾರು ಒತ್ತಡದಿಂದಲೇ ಕಳೆಯುತ್ತ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾನೆ. ರೋಗ ಬರುವ ಲಕ್ಷಣ ಕಂಡ ಕೂಡಲೇ ಜಾಗ್ರತೆ ವಹಿಸಿ, ಸೂಕ್ತ ಚಿಕಿತ್ಸೆಗಳನ್ನು ಪಡೆದು ಆರೋಗ್ಯವಂತರಾಗಿ ಜೀವಿಸಬೇಕು ಎಂದರು.

    ಎಸಿ ಟಿ.ವಿ.ಪ್ರಕಾಸ ಮಾತನಾಡಿ, ಸಾರ್ವಜನಿಕರ ಸರ್ವತೋಮುಖ ಅಭಿವೃದ್ಧಿಗೆ ಸಂಘ ಸಂಸ್ಥೆಗಳು ಅನೇಕ ಯೋಜನೆಗಳನ್ನು ಹಾಕಿಕೊಂಡು ಸಾರ್ವಜನಿಕ ವಲಯದಲ್ಲಿ ಸೇವೆ ಮಾಡುತ್ತಿರುವುದು ಸಂತಸದ ಸಂಗತಿ ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎ.ಎಂ.ಪಿ.ಅಜ್ಜಯ್ಯ ಸಮಾಜಮುಖಿ ಟ್ರಸ್ಟ್ ಇನ್ನಷ್ಟು ಕೆಲಸಗಳನ್ನು ಮಾಡುವಂತಾಗಲಿ ಎಂದರು.

    ಶಿಬಿರದಲ್ಲಿ ಸುಮಾರು 110ಕ್ಕಿಂತ ಹೆಚ್ಚು ಜನರು ನೇತ್ರ ತಪಾಸಣೆ ಮಾಡಿಸಿಕೊಂಡವರ ಪೈಕಿ 64 ಜನ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾಗಿದ್ದಾರೆ.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಲ್.ಶಂಕರ್ ನಾಯ್ಕ, ಎಸಿ ಟಿ.ವಿ.ಪ್ರಕಾಶ್, ನೇತ್ರಲಕ್ಷ್ಮೀ ವಿದ್ಯಾಲಯದ ನೇತ್ರಜ್ಞಾನ ಡಾ.ಎ.ಶ್ರೀನಿವಾಸ್, ಎ.ಎಂ.ಪಿ.ಅಜ್ಜಯ್ಯ ಸಮಾಜಮುಖಿ ಟ್ರಸ್ಟಿನ ಅದ್ಯಕ್ಷ ಎ.ಎಂ.ಪಿ.ವಾಗೀಶ, ಹಿರೇಮಲ್ಲನಕೆರಿ ಮಠದ ಚನ್ನಬಸವ ಸ್ವಾಮೀಜಿ, ಆಡಳಿತ ವೈದ್ಯಾಧಿಕಾರಿ ಬಿ.ಶಿವಕುಮಾರ್, ತಾಲೂಕು ವೈದ್ಯಾಧಿಕಾರಿ ಶಿವಕುಮಾರ್, ಆಯುಷ್ಯ ವೈದ್ಯಾಧಿಕಾರಿ ಡಾ.ಕೊಟ್ರಮ್ಮ, ವೈದ್ಯರಾದ ಡಾ.ಎಸ್.ಕೀರ್ತಿ, ಡಾ.ರೇಖಾ, ಡಾ.ಸಂದೀಪ್, ಡಾ.ದೀಪ್ತ, ಎ.ಎಂ.ಪಿ.ಅಜ್ಜಯ್ಯ ಅಭಿಮಾನಿ ಬಳಗದ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts