More

    ಕ್ರಿಯಾಶೀಲತೆಯಿಂದ ಮಕ್ಕಳ ಕಲಿಕೆ ಪರಿಣಾಮಕಾರಿ

    ಹೊಳಲ್ಕೆರೆ: ಶಿಕ್ಷಕರು ಕ್ರಿಯಾಶೀಲತೆಯಿಂದ ಬೋಧಿಸಿದಾಗ ಮಕ್ಕಳ ಕಲಿಕೆ ಪರಿಣಾಮಕಾರಿಯಾಗುತ್ತದೆ ಎಂದು ಡಯಟ್ ಉಪನ್ಯಾಸಕ ಎಸ್.ಬಸವರಾಜ್ ಹೇಳಿದರು.

    ತಾಲೂಕಿನ ತುಪ್ಪದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ಭೇಟಿ ನೀಡಿ ಮಾತನಾಡಿದರು.

    ಶಿಕ್ಷಕರಿಗೆ ಒಳನೋಟವಿರಬೇಕು. ಪಠ್ಯದ ಜತೆ ಹೊಸ, ಚಿಂತನೆ ಆಲೋಚನೆಯೊಂದಿಗೆ ಬೋಧಿಸಬೇಕು. 5, 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗೆ ಶಿಕ್ಷಕಿ ಅನಿತಾ ಅವರು ಕೈಬರಹ ನಿಘಂಟು ರಚಿಸಿರುವುದು ಶ್ಲಾಘನೀಯ ಕಾರ್ಯ ಎಂದರು.

    ಇನ್ನೋವೇಟಿವ್ ಟೀಚರ್ ಅವಾರ್ಡ್ ಪುರಸ್ಕೃತ ಶಿಕ್ಷಕಿ ಅನಿತಾ ಮಾತನಾಡಿ, ಶ್ರಮ ಮತ್ತು ಶಿಸ್ತು ಯಶಸ್ಸಿಗೆ ಸೋಪಾನ. ಕಲಿತಿರುವ ವಿದ್ಯೆ ಎಂದಾದರೂ ಫಲ ಕೊಟ್ಟೇ ಕೊಡುತ್ತದೆ ಎಂದರು.

    ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ, ನಿಕಟಪೂರ್ವ ಸಿಆರ್‌ಪಿ ಚಿತ್ರಶೇಖರ್, ಶಿಕ್ಷಕರಾದ ಬಸವರಾಜು, ಹೇಮಲತಾ, ಮಹೇಶ್ವರಪ್ಪ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts