More

    ಮತ್ತೊಂದು ಮರ್ಯಾದಾಗೇಡು ಹತ್ಯೆ : ಅನ್ಯಜಾತಿಯವನನ್ನು ವರಿಸಿ ಹೆಣವಾದಳು

    ಆಗ್ರಾ: ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯಲ್ಲಿ ಮರ್ಯಾದಾಗೇಡು ಹತ್ಯೆಯ ಪ್ರಕರಣ ನಡೆದಿದೆ.
    ಎರಡು ವರ್ಷಗಳ ಹಿಂದೆ ಅನ್ಯಜಾತಿಯ ಹುಡುಗನನ್ನು ವರಿಸಿದ ಕಾರಣಕ್ಕೆ ಆಕೆಯ ಮೂವರು ಸಹೋದರರು ಗುಂಡಿಕ್ಕಿ ಕೊಂದಿದ್ದಾರೆ. ಆರೋಪಿಗಳು ಆಕೆಯ ಪತಿಯನ್ನೂ ಗುರಿಯಾಗಿಸಿಕೊಂಡು ಗುಂಡಿಕ್ಕಿದ್ದು, ಆತ ಗಂಭೀರವಾಗಿ ಗಾಯಗೊಂಡಿದ್ದಾನೆ.
    ಮೃತ ಮಹಿಳೆಯನ್ನು ಜ್ಯೋತಿ ಮಿಶ್ರಾ ಎಂದು ಗುರುತಿಸಲ್ಪಟ್ಟಿದ್ದು, ಜಿಲ್ಲೆಯ ಅಂಗೋಥ ಗ್ರಾಮಕ್ಕೆ ಸೇರಿದವಳು. 2018 ರಲ್ಲಿ, ಆಕೆ ಪಕ್ಕದ ಬ್ರಿಜ್‌ಪುರ ಗ್ರಾಮದ ಪಶುವೈದ್ಯ ರೋಹಿತ್ ಯಾದವ್ ನೊಂದಿಗೆ ಓಡಿ ಹೋಗಿ ಮದುವೆಯಾದಳು. ನಂತರ ಆಕೆಯ ಕುಟುಂಬದವರು ಪೊಲೀಸರನ್ನು ಸಂಪರ್ಕಿಸಿ ಅಪಹರಣದ ದೂರು ದಾಖಲಿಸಿದ್ದರು. ಆದರೆ, ಜ್ಯೋತಿ ನ್ಯಾಯಾಲಯಕ್ಕೆ ಹಾಜರಾಗಿ ತಾನು ರೋಹಿತ್‌ನನ್ನು ಇಷ್ಟಪಟ್ಟು ವಿವಾಹವಾಗಿರುವುದಾಗಿ ತಿಳಿಸಿದ ನಂತರ ಪ್ರಕರಣವನ್ನು ಮುಂದುವರಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನು ಓದಿ: ಅಪಾರ್ಟ್​ಮೆಂಟ್ ಖರೀದಿಗೆ ಹಣ ತರಲು ಪತ್ನಿಗೆ ಚಿತ್ರಹಿಂಸೆ: ದೂರು ದಾಖಲು

    ಆಕೆಯ ನಿರ್ಧಾರದ ಬಗ್ಗೆ ತಿಳಿದ ನಂತರ ಸಹೋದರರು ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದರು. ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದರು. ಏತನ್ಮಧ್ಯೆ ಆ ಕುಟುಂಬದ ಸದಸ್ಯರು ಆಕೆಯನ್ನು ಕೊಲ್ಲದಂತೆ ಅವರನ್ನು ಸಂತೈಸಲೆತ್ನಿಸಿದ್ದರು.
    ಆದರೆ ಆರೋಪಿಗಳು ಜ್ಯೋತಿಗೆ ಆರು ಬಾರಿ ಗುಂಡು ಹಾರಿಸಿದ್ದರು. ಅದರಲ್ಲಿ ಒಂದು ಗುಂಡು ಆಕೆಯ ಪತಿ ರೋಹಿತ್ ಹೊಟ್ಟೆಗೆ ಬಿದ್ದಿದ್ದು. ಪ್ರಸ್ತುತ ಆತನಿಗೆ ಸಫಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
    ಸಂತ್ರಸ್ತೆಯ ಸ್ವಂತ ಸಹೋದರ ಗುಲ್ಶನ್ ಮಿಶ್ರಾ (19) ಮತ್ತು ಇಬ್ಬರು ಸೋದರಸಂಬಂಧಿಗಳು ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು ನ್ಯಾಯಾಂಗ ಬಂಧನದಲ್ಲಿಡಲಾಗುತ್ತಿದೆ.
    ತಮ್ಮ ಸಹೋದರಿ ಮದುವೆಗೆ ಸಂಬಂಧಿಸಿದಂತೆ ಸ್ಥಳೀಯರು ಅವರನ್ನು ಅವಮಾನಗೊಳಿಸುತ್ತಿದ್ದು, ತಮ್ಮ ಮಗಳನ್ನು ಮದುವೆಯಾಗಲು ಕುಟುಂಬದಲ್ಲಿ ಯಾರೂ ಸಿದ್ಧರಿಲ್ಲ ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ.

    ಇದನ್ನು ಓದಿ: ನಾಕಾ ತಪಾಸಣೆ ವೇಳೆ ಸಿಕ್ಕಿಬಿದ್ದ ಮಾದಕವಸ್ತು ಮಾರಾಟಗಾರರ ಬಳಿ ಸಿಕ್ಕಿದ್ದೇನು?

    ವಿಚಾರಣೆಯ ವೇಳೆ ಆರೋಪಿಗಳು, ರೋಹಿತ್ ಮೇಲ್ಜಾತಿಯ ಮಹಿಳೆಯನ್ನು ಮದುವೆಯಾಗಿ ಮಾಡಿದ ತಪ್ಪನ್ನು ಅರಿತುಕೊಳ್ಳಲು ಆತನನ್ನು ಅಂಗವಿಕಲನನ್ನಾಗಿ ಮಾಡಲು ಯೋಜಿಸಿದ್ದು, ಅವರು ಆತನ ಕಾಲಿಗೆ ಗುಂಡು ಹಾರಿಸಲು ಯೋಜಿಸಿದ್ದರು ಎಂದು ಮೈನ್‌ಪುರಿ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಕುಮಾರ್ ತಿಳಿಸಿದ್ದಾರೆ.
    ಅಪರಾಧ ಪ್ರಕರಣದಲ್ಲಿ ಬಳಸಿದ ಎರಡು ದೇಸಿ ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

    ಕರೊನಾ ಹೆಸರಲ್ಲಿ ದೆಹಲಿಯಲ್ಲಿ ಪ್ಲಾಸ್ಮಾ ಮಾಫಿಯಾ: ಸ್ಫೋಟಕ ಮಾಹಿತಿ ಬಹಿರಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts