More

    ಸಾಮಾಜಿಕ ಅಂತರದಿಂದ ಆರೋಗ್ಯ

    ಹೊನ್ನಾಳಿ: ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ನರೇಗಾದಡಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ಸಲಹೆ ನೀಡಿದರು.

    ತಾಲೂಕಿನ ಕುಂಕುವಾ ಗ್ರಾಮದ ಕೆರೆಯಲ್ಲಿ ಶನಿವಾರ ಹೂಳೆತ್ತುವ ಕಾಮಗಾರಿ ವೀಕ್ಷಿಸಿದ ಬಳಿಕ ಮಾತನಾಡಿ, ಕರೊನಾ ತಡೆಗಾಗಿ ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಮಕ್ಕಳನ್ನು ಮನೆಯಿಂದ ಹೊರ ಕಳಿಸಬೇಡಿ. ಕೆಮ್ಮು-ಶೀತ-ಜ್ವರದ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸದೇ ತಕ್ಷಣ ಸ್ಥಳೀಯ ಆಸ್ಪತ್ರೆಯಲ್ಲಿ ತೋರಿಸಿಕೊಳ್ಳಿ ಎಂದು ಮನವಿ ಮಾಡಿದರು.

    ಕರೊನಾ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿಯೊಬ್ಬರಿಗೂ 26 ರೂ. ಹೆಚ್ಚಿಗೆ ಮಾಡಿದೆ. 10 ರೂ. ಗಳನ್ನು ಪರಿಕರದ ಖರ್ಚಿಗೆ ಕೊಡುತ್ತಿದೆ. ನಾಳೆಯಿಂದ 10 ಜನರನ್ನು ಹೆಚ್ಚಿಗೆ ತೆಗೆದುಕೊಳ್ಳಲು ಸೂಚಿಸಿದೆ. 168 ದಿನ ಖಾತ್ರಿಯಡಿ ಕೆಲಸ ನೀಡಲಾಗುವುದು ಎಂದರು.
    ಕತ್ತಿಗೆ, ಕುಂದೂರು, ಚೀಲೂರು, ಸವಳಂಗ, ಮಾಚಗೊಂಡನಹಳ್ಳಿ, ಕೆಂಚಿಕೊಪ್ಪ ಹಾಗೂ ಸೊರಟೂರು ಗ್ರಾಮಗಳಲ್ಲಿ ಖಾತ್ರಿ ಯೋಜನೆಯಡಿ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.

    ಕಾರ್ಮಿಕರ ಕೂಲಿ ವಿತರಣೆಯಲ್ಲಿ ತೊಂದರೆಯಾಗದಂತೆ ಎಚ್ಚರ ವಹಿಸಿ ಅಳತೆ ಪ್ರಕಾರ ಕೆಲಸ ನಿರ್ವಹಿಸುವಾಗ ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆ ಹಾಜರಾಗಿ 10ರ ವರೆಗೆ ಕೆಲಸ ಪೂರೈಸಿ 6 ದಿನದ ಕೆಲಸದ ಮಿತಿ ಇದ್ದರೆ 7 ದಿನದ ಕೂಲಿ ನೀಡುವಂತೆ ತಾಪಂ ಕಾರ್ಯ ನಿರ್ವಹಣಾಧಿಕಾರಿ ಗಂಗಾಧರಮೂರ್ತಿ ಅವರಿಗೆ ಸೂಚಿಸಿದರು. ಗ್ರಾಪಂ ಉಪಾಧ್ಯಕ್ಷೆ ಜಯಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts