More

    ಎಟಿಎಂ ನಿಂದ ಹಣ ದೋಚುತ್ತಿದ್ದವನ ಬಂಧನ

    ಹೊನ್ನಾಳಿ: ಹಣಬಿಡಿಸಿಕೊಡುವ ನೆಪದಲ್ಲಿ ಮುಗ್ದ ಗ್ರಾಹಕರಿಂದ ಎಟಿಎಂ ಪಡೆದು ಹಣ ದೋಚಿ ವಂಚಿಸುತ್ತಿದ್ದ ಆರೋಪಿಯನ್ನು ಹೊನ್ನಾಳಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

    ಪಟ್ಟಣದ ತುಮ್ಮಿನಕಟ್ಟೆ ರಸ್ತೆಯಲ್ಲಿರುವ ಎಟಿಎಂ ನಲ್ಲಿ ಮಹಿಳೆಯೊಬ್ಬರು ಹಣ ಬಿಡಿಸಿಕೊಳ್ಳಲು ಪ್ರಯತ್ನಿಸಿದಾಗ ಹಣ ಬಂದಿಲ್ಲ. ಪಕ್ಕದಲ್ಲೇ ಇದ್ದ ವ್ಯಕ್ತಿಯೊಬ್ಬ ಮಹಿಳೆಯಿಂದ ಎಟಿಎಂ ಪಡೆದು ಹಣ ತೆಗೆಯುವಂತೆ ನಟಿಸಿ ಪಿನ್ ನಂಬರ್ ತಿಳಿದುಕೊಂಡಿದ್ದಾನೆ. ನಂತರ ಆಕೆಗೆ ಬೇರೊಂದು ಎಟಿಎಂ ಕಾರ್ಡ್ ನೀಡಿ ಮೂಲ ಕಾರ್ಡ್‌ನಿಂದ 4500 ರೂ. ಹಣ ಬಿಡಿಸಿಕೊಂಡು ಓಡಿಹೋಗಲು ಯತ್ನಿಸಿದ್ದಾನೆ. ತಕ್ಷಣ ತನ್ನ ಕೈಯಲ್ಲಿರುವ ಎಟಿಎಂ ತನ್ನದಲ್ಲವೆಂಬುದನ್ನು ಅರಿತ ಮಹಿಳೆ ಮತ್ತು ಆಕೆಯ ಸಂಬಂಧಿಕರು ಓಡಿ ಹೋಗಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಸದ್ಯ ಶಿವಮೊಗ್ಗ ಜಿಲ್ಲೆಯ ಹೊಳೆಬೆಳಗಲು ಗ್ರಾಮದ ಅನಂತಕುಮಾರ್ ವಿರುದ್ಧ ಹೊನ್ನಾಳಿ ಪೊಲೀಸರು ಐಪಿಸಿ 420 ರೀತ್ಯಾ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಜತೆಗೆ ಆರೋಪಿಯಿಂದ 8 ಎಟಿಎಂ ಕಾರ್ಡ್ ವಶಪಡಿಸಿಕೊಂಡಿದ್ದು, ಕಾರ್ಡ್ ಕಳೆದುಕೊಂಡವರು ಠಾಣೆಗೆ ಬಂದು ಎಟಿಎಂ ವಿಳಾಸ ತಿಳಿಸಿ ಕಾರ್ಡ್ ಪಡೆದುಕೊಳ್ಳಬಹುದು ಎಂದು ಪಿಎಸ್‌ಐ ತಿಪ್ಪೇಸ್ವಾಮಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts