More

    ಸಂಸಾರದಲ್ಲಿ ಸಾಮರಸ್ಯ ಅವಶ್ಯ

    ಹೊನ್ನಾಳಿ: ಸಂಸಾರದಲ್ಲಿ ಯಾವುದೇ ಸಮಸ್ಯೆ ಬಂದರೂ ದಂಪತಿಗಳು ಸಾಮರಸ್ಯ ಕಾಪಾಡಿಕೊಂಡು ಬಾಳಬೇಕು ಎಂದು ಶಾಸಕ ಶಿವಗಂಗಾ ಬಸವರಾಜ್ ಸಲಹೆ ನೀಡಿದರು.

    ತಾಲೂಕಿನ ಕೂಲಂಬಿ ಗ್ರಾಮದ ಪವಾಡ ಪುರುಷ ಗುರು ಗದ್ದಿಗೇಶ್ವರ ಸ್ವಾಮಿ ದೇಗುಲದಲ್ಲಿ ಹಮ್ಮಿಕೊಂಡಿದ್ದ ಕಾರ್ತಿಕೋತ್ಸವ ಹಾಗೂ ಸರಳ ಸಾಮೂಹಿಕ ವಿವಾಹ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.

    ಕುಟುಂಬದಲ್ಲಿ ತೊಂದರೆಗಳು ಬರುತ್ತವೆ, ಹೋಗುತ್ತವೆ. ಅದನ್ನು ದೊಡ್ಡದು ಮಾಡುವ ಬದಲು ಸಮಾಧಾನದಿಂದ ಬಗೆಹರಿಸಿಕೊಳ್ಳಬೇಕು. ಆದರೆ, ವೈಮನಸ್ಸು ಉಂಟಾಗಲು ಅವಕಾಶ ಮಾಡಿಕೊಡಬಾರದು ಎಂದರು.

    ಸಾಮೂಹಿಕ ವಿವಾಹದಲ್ಲಿ ಮದುವೆ ಆದವರೇ ನಿಜವಾದ ಪುಣ್ಯವಂತರು. ಸರಳವಾಗಿ ವಿವಾಹವಾದರೆ ಆರ್ಥಿಕವಾಗಿ ಹೊರೆ ಆಗುವುದಿಲ್ಲ. ಸಾಲ ಮಾಡುವುದು ತಪ್ಪುತ್ತದೆ ಎಂದರು.

    ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಮಧ್ಯಮ ವರ್ಗದವರು ಮದುವೆ ಮಾಡುವುದೇ ಕಷ್ಟಕರವಾಗಿದೆ. ಒಬ್ಬ ಬಡವ ಮದುವೆ ಮಾಡಬೇಕಾದರೆ ಲಕ್ಷಾಂತರ ರೂಪಾಯಿ ಬೇಕು. ಆದ್ದರಿಂದ, ಇಂತಹ ಸರಳ ವಿವಾಹ ಮಹೋತ್ಸವದಲ್ಲಿ ಮದುವೆ ಆಗುವುದು ಲೇಸು ಎಂದರು.

    ಹೆತ್ತ ಮನೆಗೂ, ಕೊಟ್ಟ ಮನೆಗೂ ಕೀರ್ತಿ ತರುವಂತೆ ಸತಿಪತಿಗಳಿಬ್ಬರೂ ಕುಟುಂಬವನ್ನು ನಿಭಾಯಿಸಬೇಕು. ಅತ್ತೆ, ಮಾವ, ನಾದಿನಿಯರನ್ನು ಚೆನ್ನಾಗಿ ನೋಡಿಕೊಂಡರೆ ನೀವು ಮಾಡಿದ ಒಳ್ಳೆಯ ಕಾರ್ಯ ನಿಮ್ಮ ತವರು ಮನೆಗೆ ಕೀರ್ತಿ ತರುತ್ತದೆ ಎಂದರು.

    ದೇವಸ್ಥಾನದ ಕಮಿಟಿ ಅಧ್ಯಕ್ಷ ಸೋಮಶೇಖರ್ ಮಾತನಾಡಿ, ಪ್ರತಿ ವರ್ಷ ಗದ್ದಿಗೇಶ್ವರ ಕಾರ್ತಿಕೋತ್ಸವದ ಜತೆಗೆ ಧಾರ್ಮಿಕ, ಸಾಮಾಜಿಕ ಕಾರ್ಯ ಹಮ್ಮಿಕೊಂಡು ಬರುತ್ತಿದ್ದೇವೆ. ಬಡವರು, ಆರ್ಥಿಕವಾಗಿ ಹಿಂದುಳಿದವರು ಇಂತಹ ಸಾಮಾಜಿಕ ಕಾರ್ಯಕ್ರಮದಲ್ಲಿ ಮದುವೆ ಆದರೆ ಆರ್ಥಿಕ ಸ್ಥಿತಿ ಸುಧಾರಿಸಲು ಸಹಕಾರಿ ಆಗುತ್ತದೆ ಎಂದರು.

    ಸಾಮೂಹಿಕ ಕಾರ್ಯಕ್ರಮದಲ್ಲಿ 45 ಜೋಡಿ ನವ ಜೀವನಕ್ಕೆ ಕಾಲಿಟ್ಟವು. ತಾಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಗದ್ದಿಗೇಶ್, ರೇವಣಪ್ಪ, ಶಿಮುಲ್ ನಿರ್ದೇಶಕ ಹನುಮನಹಳ್ಳಿ ಬಸವರಾಜಪ್ಪ ಮಾತನಾಡಿದರು.

    ಶಾಸಕ ಡಿ.ಜಿ. ಶಾಂತನಗೌಡ ಅವರ ಪುತ್ರ ಪ್ರದೀಪ್ ಗೌಡ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಕೆಂಗಲಹಳ್ಳಿ ಷಣ್ಮುಖಪ್ಪ, ದೇಗುಲ ಸಮಿತಿ ಉಪಾಧ್ಯಕ್ಷ ಮುರಿಗೆಪ್ಪ, ಹಾಲಪ್ಪ ಕೆ. ಹೇಮಂತರಾಜು, ಜಿ. ಶಂಕರಮೂರ್ತಿ, ಕೆ.ಎಸ್. ಲಿಂಗರಾಜು, ವಿ.ಎಂ. ಬಸವಲಿಂಗಪ್ಪ, ಶಿವಣ್ಣಗೌಡ, ಬಸವಲಿಂಗಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts