More

    ಮತ ಯಂತ್ರದಲ್ಲಿ ಅಭ್ಯರ್ಥಿ ಹೆಸರು, ಚಿಹ್ನೆ ನಮೂದು

    ಹೊನ್ನಾಳಿ: ತಾಲೂಕಿನ ಎಲ್ಲ 245 ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಹೆಸರು, ಚಿಹ್ನೆ ನಮೂದಿಸಲಾಗಿದೆ. ಅಲ್ಲದೆ, ದೋಷಪೂರಿತ ಮತ ಯಂತ್ರಗಳು ಯಾವುದು ಇಲ್ಲ ಎಂದು ಚುನಾವಣಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಸ್ಪಷ್ಟಪಡಿಸಿದರು.

    ನಗರದ ಚುನಾವಣಾ ಕಚೇರಿಯಲ್ಲಿ ಬುಧವಾರ ಅಗತ್ಯ ಸೇವೆಗಳಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್, ಸಾರಿಗೆ ಹಾಗೂ ಬೆಸ್ಕಾಂ ನೌಕರರ ಮತದಾನದ ವ್ಯವಸ್ಥೆ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

    ಮತಗಟ್ಟೆಗಳಲ್ಲಿ ಯಾವುದೇ ದೋಷಗಳು ಉಂಟಾಗಿ ಮತದಾನಕ್ಕೆ ಅಡ್ಡಿಯಾಗಬಾರದೆಂದು ಈಗಾಗಲೆ ಅಭ್ಯರ್ಥಿಗಳ ಸಮ್ಮುಖದಲ್ಲಿ ಮತಯಂತ್ರಗಳನ್ನು ಪರಿಶೀಲನೆ ಮಾಡಲಾಗಿದೆ. ಮೇ 5 ರಂದು ಅಂತಿಮ ದಿನದ ತರಬೇತಿಯನ್ನು ವೀರಭದ್ರಶಾಸ್ತ್ರಿ ಐಟಿಐ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

    ತರಬೇತಿಗೆ ಹೋಗುವ ತಾಲೂಕಿನ ನೌಕರರಿಗೆ ಅಂಚೆಮತಕ್ಕೆ ಬೇಕಾದ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಿಬ್ಬಂದಿ ತಮ್ಮ ತರಬೇತಿ ಕೇಂದ್ರದಲ್ಲಿ ಮತದಾನ ಮಾಡಬಹುದು ಎಂದು ತಿಳಿಸಿದರು.

    ಮತದಾನ ನಡೆಯುವ ದಿನದಂದು ನಗರದಲ್ಲಿ ಸಂತೆಯನ್ನು ರದ್ದು ಮಾಡುವಂತೆ ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.

    ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಲ್ಲಿ ವೃದ್ಧರು ಹಾಗೂ ಅಂಗವಿಕಲರು ಸೇರಿ ಒಟ್ಟು 847 ಮತದಾರರ ಪೈಕಿ 823 ಮತದಾರರು ಮತದಾನ ಮಾಡಿದ್ದು, ಅದರಲ್ಲಿ 9 ಜನ ನಿಧನರಾಗಿದ್ದಾರೆ. ಉಳಿದ 15 ಜನರು ಗ್ರಾಮಗಳಲ್ಲಿ ಇಲ್ಲ ಎಂದರು.

    ಸಹಾಯಕ ಚುನಾವಣಾಧಿಕಾರಿಗಳಾದ ತಿರುಪತಿ ಪಟೇಲ್, ಆರ್.ವಿ. ಕಟ್ಟಿ, ನೋಡಲ್ ಅಧಿಕಾರಿಗಳಾದ ನಂಜರಾಜ್, ಸುರೇಶ್, ಉಪತಹಸೀಲ್ದಾರ್ ಸುರೇಶ್, ಮುನಿರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts