More

    ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಲು ಮನವಿ

    ಹೊನ್ನಾಳಿ: ಪರಿಸರ ಸ್ನೇಹಿ ಗೌರಿ ಗಣೇಶ ಹಬ್ಬ ಆಚರಿಸಲು ಸಾರ್ವಜನಿಕರು ಬಣ್ಣ ರಹಿತ ಗಣಪ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದು ಮುಖ್ಯಾಧಿಕಾರಿ ನಿರಂಜನಿ ಮನವಿ ಮಾಡಿದರು.

    ಸ್ಥಳೀಯ ಆಡಳಿತ ನಿಗದಿತ ಸ್ಥಳದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಬೇಕು. ಪಿಒಪಿ ಗಣೇಶನ ಮೂರ್ತಿಗಳನ್ನು ಮಾರಾಟ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮೂರ್ತಿಗಳನ್ನು ಪುರಸಭೆ ವಶಪಡಿಸಿಕೊಳ್ಳುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದರು.

    ಪಟ್ಟಣದ ವ್ಯಾಪ್ತಿಯ ಗಣೇಶ ಸಮಿತಿಯವರು ಪರಿಸರ ಸ್ನೇಹಿಯಾಗಿ ಗಣೇಶ ಪ್ರತಿಷ್ಠಾಪನೆ ಮಾಡಿ, ನಂತರ ಪುರಸಭೆ ಅಧಿಕಾರಿಗಳು ಗುರುತಿಸಿರಿವ ಕಡೆ ಮಾತ್ರ ಗಣೇಶ ವಿಸರ್ಜನೆ ಮಾಡಬೇಕು ಎಂದು ತಿಳಿಸಿದರು.

    ಧ್ವನಿವರ್ಧಕ ಬಳಕೆ ಮತ್ತು ಮೂರ್ತಿ ಪ್ರತಿಷ್ಠಾಪನೆ ಮಾಡಲು ಅಗತ್ಯ ಪರವಾನಗಿ ಪಡೆದುಕೊಳ್ಳಬೇಕು. ಪೆಂಡಾಲ್‌ಗಳಲ್ಲಿ ಅಲಂಕಾರಕ್ಕಾಗಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು ಎಂದು ಹೇಳಿದರು.

    ಕಂದಾಯ ವಸೂಲಿ ಗುರಿ ಸಾಧನೆಯತ್ತ: ಶೇ. 100ರಷ್ಟು ನೀರಿನ ಕಂದಾಯ ವಸೂಲಿ ಮಾಡಲು ಪುರಸಭೆ ಸಿಬ್ಬಂದಿ ಒಳಗೊಂಡ ಸಮಿತಿ ರಚಿಸಲಾಗಿದೆ. ಪ್ರತಿ ತಿಂಗಳು 37 ಲಕ್ಷ ನೀರಿನ ಕಂದಾಯ ವಸೂಲಿ ಮಾಡಬೇಕು. ಅದರಲ್ಲಿ 12 ಲಕ್ಷ ವಸೂಲಿ ಮಾಡಲಾಗಿದೆ. ಶೇ. 30ರಷ್ಟು ಗುರಿ ಸಾಧಿಸಲಾಗಿದೆ.
    ಮನೆ ಕಂದಾಯ ವಸೂಲಿಯಲ್ಲೂ ಪ್ರಗತಿ ಕಂಡಿದ್ದು, 1.23 ಕೋಟಿ ರೂ. ಮನೆ ಕಂದಾಯ ವಸೂಲಿ ಮಾಡುವ ಗುರಿ ಹೊಂದಲಾಗಿದೆ. ಅದರಲ್ಲಿ 93 ಲಕ್ಷ ರೂ. ಈಗಾಗಲೆ ವಸೂಲಿ ಮಾಡಿ ಶೇ. 80ರಷ್ಟು ಗುರಿ ಸಾಧಿಸಿದ್ದೇವೆ ಎಂದು ತಿಳಿಸಿದರು.

    ಮಳಿಗೆ ಹರಾಜು: ಪುರಸಭೆ ವ್ಯಾಪ್ತಿಯ 79 ಮಳಿಗೆಗಳ ಪೈಕಿ 26 ಮಳಿಗೆಗಳ ಹರಾಜು ಪ್ರಕ್ರಿಯೆ ಆರಂಭವಾಗಿದೆ. ಸದಸ್ಯರು ಹಾಗೂ ಆಡಳಿತಾಧಿಕಾರಿ ಜತೆ ಚರ್ಚಿಸಿ ಹರಾಜು ದಿನಾಂಕ ಪ್ರಕಟಣೆ ಹೊರಡಿಸಲಾಗುವುದು ಎಂದು ಮಾಹಿತಿ ನೀಡಿದರು.

    ಕಂದಾಯಾಧಿಕಾರಿ ವಸಂತ್, ಹಿರಿಯ ಆರೋಗ್ಯ ನಿರೀಕ್ಷಕ ಪರಮೇಶ ನಾಯ್ಕ, ಕಿರಿಯ ಆರೋಗ್ಯ ಸಹಾಯಕ ನಿರೀಕ್ಷಕ ಹರ್ಷವರ್ಧನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts