More

    ಪೊಲೀಸ್ ಠಾಣೆ ಮೆಟ್ಟಿಲೇರುವಲ್ಲಿ ಮದ್ಯ ವ್ಯಸನಿಗಳೇ ಹೆಚ್ಚು: ಹೊನ್ನಾಳಿ ಸಿಪಿಐ ದೇವರಾಜ್ ಹೇಳಿಕೆ

    ಹೊನ್ನಾಳಿ: ನಮ್ಮ ಠಾಣೆಗೆ ಬರುವ ದೂರುಗಳಲ್ಲಿ ಶೇ.90ರಷ್ಟು ಮದ್ಯಪಾನದ ಪ್ರಕರಣಗಳೇ ಹೆಚ್ಚು. ಕರೊನಾ ಸಂದರ್ಭದಲ್ಲಿ ಪ್ರಕರಣಗಳ ಸಂಖ್ಯೆ ವಿರಳವಾಗಿತ್ತು. ಆಗ ವೈನ್‌ಶಾಪ್ ಹಾಗೂ ಬಾರ್‌ಗಳು ಬಾಗಿಲು ಹಾಕಿದ್ದವು ಎಂದು ಸಿಪಿಐ ದೇವರಾಜ್ ಹೇಳಿದರು.

    ಇಲ್ಲಿನ ಚನ್ನೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯಿಂದ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಆಸ್ಪತ್ರೆಗಳಲ್ಲಿ ವೈದ್ಯರು ಬರೆದುಕೊಡುವ ಔಷಧ ಮಾತ್ರ ತೆಗೆದುಕೊಳ್ಳಬೇಕು. ನೀವೇ ಹೋಗಿ ಮೆಡಿಕಲ್ ಸ್ಟೋರ್‌ನಲ್ಲಿ ಮಾತ್ರೆ ಪಡೆಯುವುದು ಸಲ್ಲದು. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದರು.
    ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕುಗಳಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವ ಬಗ್ಗೆ ದೂರುಗಳಿವೆ. ತಪ್ಪು ಮಾಡಿದರೆ ಜೈಲು ಸೇರಬೇಕಾಗುತ್ತದೆ ಇದಕ್ಕೆ ಅವಕಾಶ ನೀಡಬಾರದು ಎಂದರು.

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಯಸ್, ಜಿಲ್ಲಾ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಹೊಸಕೇರಿ ಸುರೇಶ್, ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ, ಪ್ರಾಂಶುಪಾಲ ಬಸವರಾಜ್ ಉಪ್ಪಿನಾಳ್, ಬಿಇಒ ಮಂಜುನಾಥಸ್ವಾಮಿ, ಯೋಜನಾಧಿಕಾರಿ ಬಸವರಾಜ್ ಅಂಗಡಿ, ನಾಗರಾಜ್ ಕತ್ತಿಗೆ, ಬಸವರಾಜ್ ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts