More

    ಮಾ.5ರಂದು ‘ಈ ಹೊತ್ತಿಗೆ’ಯ ‘ಹೊನಲು’ ಕಾರ್ಯಕ್ರಮ; ಕಪ್ಪಣ್ಣ ಅಂಗಳದಲ್ಲಿ ನಡೆಯಲಿವೆ ವಿವಿಧ ಗೋಷ್ಠಿಗಳು

    ಬೆಂಗಳೂರು: ‘ಈ ಹೊತ್ತಿಗೆ’ಯ ಕಥಾ ಮತ್ತು ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಮೌಲ್ಯಯುತ ಗೋಷ್ಠಿಗಳ ‘ಹೊನಲು’ ಕಾರ್ಯಕ್ರಮ ಜೆಪಿ ನಗರದ ಕಪ್ಪಣ್ಣ ಅಂಗಳದಲ್ಲಿ ಮಾರ್ಚ್ 5ರಂದು ನಡೆಯಲಿವೆ. ಈ ವೇಳೆ ಶ್ರೀನಿವಾಸ ಜಿ. ಕಪ್ಪಣ್ಣ ಅವರಿಗೆ ಸನ್ಮಾನ ಏರ್ಪಡಿಸಲಾಗಿದೆ.

    ಈ ಹೊತ್ತಿಗೆಯ 2022ನೇ ಸಾಲಿನ ಕಥಾ ಪ್ರಶಸ್ತಿಯನ್ನು ವಿನಾಯಕ ಅರಳಸುರಳಿ ಅವರಿಗೆ ಮತ್ತು ಕಾವ್ಯ ಪ್ರಶಸ್ತಿಯನ್ನು ಶ್ರೀ. ಚಾಂದ್ ಪಾಷಾ ಎನ್.ಎಸ್ ಅವರಿಗೆ ನೀಡಿ ಗೌರವಿಸಲಾಗುತ್ತಿದೆ. ಡಾ. ಎಚ್.ಎಸ್. ಶಿವಪ್ರಕಾಶ್ ಮತ್ತು ಡಾ. ಎಂ.ಎಸ್. ಆಶಾದೇವಿ ಅವರು ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿ, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ದಾದಾಪೀರ್ ಜೈಮನ್ ಅವರು ಸಮಾರಂಭದ ನಿರ್ವಹಿಸಲಿದ್ದಾರೆ.

    ಇದನ್ನೂ ಓದಿ: ಮುಖ್ಯೋಪಾಧ್ಯಾಯ ಹಾಗೂ ಸಹ ಶಿಕ್ಷಕಿಯರಿಂದ ಕಿರುಕುಳ! ರೈಲಿಗೆ ತಲೆ ಕೊಟ್ಟು ಪ್ರಾಣ ಬಿಟ್ಟ ಶಿಕ್ಷಕಿ

    ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಕೆ.ವಿ. ತಿರುಮಲೇಶ ಅವರ ಸ್ಮರಣಾರ್ಥ ಯುವಕವಿ ಗೋಷ್ಠಿ ‘ಅಕ್ಷಯ ಕಾವ್ಯ’ ಎಂ.ಆರ್. ಕಮಲ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದು, ಕುಸುಮ ಹೆಗಡೆ ಅವರು ಗೋಷ್ಠಿಯನ್ನು ನಿರ್ವಹಿಸಲಿದ್ದಾರೆ.

    ‘ಕಥೆ ಕದವ ತಟ್ಟಿದಾಗ’ ಗೋಷ್ಠಿಯಲ್ಲಿ, ಜಯಶ್ರೀ ಕಾಸರವಳ್ಳಿ, ಡಾ. ಚಿದಾನಂದ ಸಾಲಿ ಮತ್ತು ಮಧುಸೂದನ ವೈ.ಎನ್ ಅವರು ಭಾಗವಹಿಸುತ್ತಿದ್ದಾರೆ. ಈ ಗೋಷ್ಠಿಯನ್ನು ಆನಂದ ಕುಂಚನೂರ್ ಅವರು ನಡೆಸಿಕೊಡಲಿದ್ದಾರೆ.

    ಅನ್ಯ ಭಾಷೆಯಗಳ ಸಾಹಿತ್ಯದ ವಾತಾವರಣವನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ‘ಭಾಷೆ ಬೇರೆ, ಭಾವವೊಂದೇ…?’ ಶೀರ್ಷಿಕೆಯ ಗೋಷ್ಠಿಗಳಲ್ಲಿ ಹಿಂದಿ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಯ ಡಾ. ಅಜಯ್ ಕುಮಾರ್ ಸಿಂಗ್, ಸುಧಾಕರನ್ ರಾಮಂತಳಿ, ಮಲರವಿಳಿ .ಕೆ ಮತ್ತು ಪೂರ್ಣಿಮ ತಮ್ಮಿರೆಡ್ಡಿ ಅವರು ಭಾಗವಹಿಸಲಿದ್ದು, ಇಂದಿರಾ ಶರಣ್ ಹಾಗೂ ರೂಪ ಸತೀಶ್ ಅವರು ಈ ಗೋಷ್ಥಿಗಳನ್ನು ನಡೆಸಿಕೊಡಲಿದ್ದಾರೆ.

    ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ರಂಗಕರ್ಮಿ ಶ್ರೀ. ಶ್ರೀನಿವಾಸ ಜಿ ಕಪ್ಪಣ್ಣನವರು ಭಾಗವಹಿಸುತ್ತಿದ್ದಾರೆ. ಈ ವೇಳೇ ‘ಈ ಹೊತ್ತಿಗೆ’ ಪ್ರಶಸ್ತಿ ಪಡೆd ಕತೆಗಾರರು ಮತ್ತು ಕವಿಗಳೊಂದಿಗೆ ಸಂವಾದ ಏರ್ಪಡಿಸಲಾಗಿದೆ.

    ಇದನ್ನೂ ಓದಿ: ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಲ್ಲಿ ರಾಹುಲ್ ಗಾಂಧಿಗೆ ಮನೆ ನೀಡಿ; ಅರ್ಜಿ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts