More

    ಅತಿಯಾಗಿ ಜೇನುತುಪ್ಪ ಸೇವಿಸಿದರೆ ಏನಾಗುತ್ತದೆ? ಈ ಕುರಿತಾದ ಮಹತ್ವದ ಮಾಹಿತಿ ಇಲ್ಲಿದೆ…

    ಜೇನುತುಪ್ಪವು ರುಚಿ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಒಳ್ಳೆಯದು ಎಂಬುದನ್ನು ನಾವು ಚಿಕ್ಕಂದಿನಿಂದಲೂ ಕೇಳಿಕೊಂಡುಕೊಂಡು ಬಂದಿದ್ದೇವೆ. ಇದರ ಆರೋಗ್ಯಕರ ಪ್ರಯೋಜನಗಳಿಂದಾಗಿ ಅನೇಕ ಜನರು ಜೇನುತುಪ್ಪವನ್ನು ಯಾವುದೇ ಸಮಯದಲ್ಲಿ ಮತ್ತು ಯಾವುದೇ ಪ್ರಮಾಣದಲ್ಲಿ ಸೇವಿಸುತ್ತಾರೆ. ಆದರೆ, ಅತಿಯಾದ ಜೇನುತುಪ್ಪ ಸೇವನೆಯು ಆರೋಗ್ಯಕರ ಲಾಭದ ಬದಲಾಗಿ ಅಡ್ಡಪರಿಣಾಮಗಳನ್ನು ಬೀರುತ್ತದೆ. ಅತಿಯಾದರೆ ಅಮೃತವೂ ಕೂಡ ವಿಷ ಎನ್ನುವಂತೆ ಅತಿಯಾದ ಜೇನುತುಪ್ಪ ಸೇವನೆಯೂ ಆರೋಗ್ಯಕ್ಕೆ ಹಾನಿ ಉಂಟುಮಾಡಲ್ಲದು. ಅದು ಹೇಗೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

    ಅಲರ್ಜಿಯಾಗಬಹುದು: ಅತಿಯಾದ ಜೇನುತುಪ್ಪ ಸೇವನೆಯಿಂದ ಅಲರ್ಜಿ ಉಂಟಾಗಲಿದೆ. ಪೊಲೆನ್​ ಗ್ರೇನ್​ ಅಲರ್ಜಿ ಇರುವವರು ಜೇನುತುಪ್ಪವನ್ನು ಸೇವಿಸಬಾರದು. ಸೇವಿಸಿದ್ದಲ್ಲಿ ಅಲರ್ಜಿ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಅದೇ ರೀತಿ ಜೇನುತುಪ್ಪವನ್ನು ಅತಿಯಾಗಿ ಸೇವಿಸುವುದರಿಂದ ಅನಾಫಿಲ್ಯಾಕ್ಸಿಸ್ ಎಂಬ ಅಲರ್ಜಿ ಉಂಟುಮಾಡಬಹುದು.

    ಇದನ್ನೂ ಓದಿ: ಮೋದಿ vs ರಾಹುಲ್​ ಯಾರು ಜನಪ್ರಿಯರು? ಸೋಶಿಯಲ್​ ಮೀಡಿಯಾ ಡೇಟಾ ಹಂಚಿಕೊಂಡ ಕಾಂಗ್ರೆಸ್​, ಬಿಜೆಪಿ

    ಫುಡ್​ ಪಾಯ್ಸನಿಂಗ್​: ಜೇನು ತುಪ್ಪವನ್ನು ಅತಿಯಾಗಿ ಸೇವಿಸುವುದರಿಂದ ಫುಡ್ ಪಾಯ್ಸನಿಂಗ್ ಸಮಸ್ಯೆಯೂ ಕಾಡಬಹುದು. ಆಹಾರ ವಿಷವಾದರೆ, ಹೊಟ್ಟೆ ನೋವು, ಭೇದಿ, ವಾಂತಿ ಮುಂತಾದ ಸಮಸ್ಯೆಗಳು ಉಂಟಾಗಲಿವೆ. ಇದರೊಂದಿಗೆ ಜೇನು ತುಪ್ಪ ಅತಿಯಾದ ಸೇವನೆಯಿಂದ ಮಕ್ಕಳಲ್ಲಿ ಬೊಟುಲಿಸಮ್ ವಿಷದ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ.

    ಹೊಟ್ಟೆ ನೋವು: ಜೇನುತಪ್ಪದ ಅತಿಯಾದ ಸೇವನೆ ಹೊಟ್ಟೆ ನೋವಿಗೂ ಕಾರಣವಾಗಬಹುದು. ಇದು ಹೊಟ್ಟೆ ಸೆಳೆತ ಮತ್ತು ಅತಿಸಾರದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಜೇನುತುಪ್ಪದಲ್ಲಿ ಕಂಡುಬರುವ ಫ್ರಕ್ಟೋಸ್ ಪ್ರಮಾಣವು ಸಣ್ಣ ಕರುಳಿನ, ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ತಡೆಯುತ್ತದೆ ಮತ್ತು ಇದು ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗಬಹುದು.

    ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಬಹುದು: ಜೇನುತುಪ್ಪವನ್ನು ಅತಿಯಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ. ಜೇನುತುಪ್ಪವು ಸ್ವಲ್ಪ ಪ್ರಮಾಣದ ಫ್ರಕ್ಟೋಸ್ ಅನ್ನು ಹೊಂದಿರುತ್ತದೆ. ಈ ಕಾರಣದಿಂದಾಗಿ ಮಧುಮೇಹ ರೋಗಿಗಳು ಜೇನುತುಪ್ಪವನ್ನು ಸೇವಿಸಬಾರದು.

    ಇದನ್ನೂ ಓದಿ: ದೆಹಲಿ ಆಡಳಿತ ಮೇಲೆ ಕೇಂದ್ರದ ಹಿಡಿತ: ವೈಯಕ್ತಿಕ ಡೇಟಾ ಸುರಕ್ಷತೆ ಸಹಿತ 4 ಮಸೂದೆಗೆ ರಾಷ್ಟ್ರಪತಿ ಅಂಕಿತ; ಜನವಿಶ್ವಾಸ ಜಾರಿ

    ಈ ವಿಷಯಗಳ ಬಗ್ಗೆಯೂ ಕಾಳಜಿ ವಹಿಸುವುದು ಸೂಕ್ತ
    * ಜೇನುತುಪ್ಪ ಮತ್ತು ದೇಸಿ ತುಪ್ಪವನ್ನು ಎಂದಿಗೂ ಸಮಾನ ಪ್ರಮಾಣದಲ್ಲಿ ಒಟ್ಟಿಗೆ ತಿನ್ನಬಾರದು. ಇದು ವಿಷದಂತಿದೆ.
    * ಗರ್ಭಾವಸ್ಥೆಯಲ್ಲಿ ಮತ್ತು ಹಾಲುಣಿಸುವ ಸಮಯದಲ್ಲಿಯೂ ಸಹ ಜೇನುತುಪ್ಪವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು.
    * ತುಂಬಾ ಬಿಸಿ ನೀರಿನಲ್ಲಿ ಜೇನುತುಪ್ಪ ಬೆರೆಸಿ ಎಂದಿಗೂ ಕುಡಿಯಬೇಡಿ. ಇದಕ್ಕಾಗಿ ಸಾಮಾನ್ಯ ಅಥವಾ ಉಗುರು ಬೆಚ್ಚಗಿನ ನೀರನ್ನು ಬಳಸಿ.

    ಕೇಳುವವರಿಲ್ಲ ಗೌರಿದುಃಖ!: ಹೆಣ್ಣು ಮಕ್ಕಳ ಕಳ್ಳಸಾಗಣೆ; ಅಪ್ರಾಪ್ತ ಗರ್ಭಿಣಿಯರ ಸಂಖ್ಯೆ ಹೆಚ್ಚಳ, ಆಡುವ ವಯಸ್ಸಲ್ಲಿ ಬಾಲ್ಯ ಕಳೆದುಕೊಂಡ 45 ಸಾವಿರ ಬಾಲಕಿಯರು

    ನಮ್ಮ ಆರೋಗ್ಯ ಇರುವುದೇ ನಮ್ಮ ಕೈಯ್ಯಲ್ಲಿ…

    ವಿದೇಶಿ ಬದುಕಿನ ಮೋಹ ತಂದ ಸಾವು: ಆ ಕ್ಷಣ ಅಂಕಣ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts