ಸಿನಿಮಾ

ಪ್ರತಿನಿತ್ಯ ಜೇನುತುಪ್ಪ ಸೇವಿಸಿ…ಅನಾರೋಗ್ಯ ಕಾಡುವ ಭಯವೇ ಇರಲ್ಲ..

ಬೆಂಗಳೂರು: ಜೇನುತುಪ್ಪ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ..? ನೈಸರ್ಗಿಕವಾದ ಸಿಹಿಯನ್ನು ಹೊಂದಿರುವ ಜೇನುತುಪ್ಪ ಅನೇಕ ರೋಗಗಳಿಗೆ ಮದ್ದಾಗಿದೆ. ಸಹಸ್ರಾರು ವರ್ಷಗಳಿಂದ, ಜೇನುತುಪ್ಪವು, ಅಡುಗೆ ಮನೆಯ ಒಂದು ವಿಶೇಷ ಆಹಾರ ಹಾಗೂ ಪ್ರಮುಖವಾದ ವೈದ್ಯಕೀಯ ಪರಿಹಾರವಾಗಿದೆ. ಹಲವು ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತಿರುವ ಜೇನುತುಪ್ಪದ ಅನೇಕ ಪ್ರಯೋಜನಗಳನ್ನು ನಾವು ನೋಡೋಣ.

ಜೇನುತುಪ್ಪವು ರುಚಿಕರವಾದ ಮತ್ತು ಪೌಷ್ಟಿಕಾಂಶದ ನೈಸರ್ಗಿಕ ಸಿಹಿಕಾರಕವಾಗಿದ್ದು, ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಜೇನುತುಪ್ಪ ಸೇವಿಸಿದರೆ ಸಿಗುವ ಲಾಭ  ನಿಮಗೆ ತಿಳಿದರೆ ದಿನಕ್ಕೆ 1ರಿಂದ 2 ಚಮಚ ಸೇವೆನೆ ಮಾಡುತ್ತೀರ.

ಜೇನುತುಪ್ಪ ಸೇವನೆಯಿಂದ ಇರುವ ಪ್ರಯೋಜನಗಳು:

ಉಗುರು ಬೆಚ್ಚಗಿನ ನೀರು ಮತ್ತು ಜೇನುತುಪ್ಪ ಬೆರೆಸಿ ಕುಡಿದರೆ ತೂಕ ಕಳೆದುಕೊಳ್ಳಬಹುದು. ಇದು ನಿಮಗೆ ಅಗತ್ಯವಾದ ಪೋಷಕಾಂಶ ಒದಗಿಸುತ್ತದೆ.

ಬೆಚ್ಚಗಿನ ನೀರಿನ ಜೊತೆ ಜೇನು ತುಪ್ಪವನ್ನು ಸೇರಿಸಿ ಸೇವಿಸಿದರೆ, ರಕ್ತದ ಹಿಮೋಗ್ಲೋಬಿನ್ ಮಟ್ಟವು ಹೆಚ್ಚಾಗಿ, ರಕ್ತಹೀನತೆಯನ್ನು ಗುಣಪಡಿಸುತ್ತದೆ.

ಯೋಗದ ಅಭ್ಯಾಸಗಳನ್ನು ಮಾಡುವವರಿಗಾಗಿ ಜೇನುತುಪ್ಪವನ್ನು ವಿಶೇಷವಾಗಿ ಶಿಫಾರಸು ಮಾಡಲಾಗುತ್ತದೆ. ಜೇನುತುಪ್ಪವನ್ನು ಸೇವಿಸುವುದರಿಂದ, ರಕ್ತ ಪರಿಚಲನೆಯ ವ್ಯವಸ್ಥೆಯು ಸಮತೋಲನಕ್ಕೆ ಬರತ್ತದೆ.

ಕೆಮ್ಮು ಕಾಣಿಸಿಕೊಂಡರೆ ನೀವು ಜೇನುತುಪ್ಪದ ಜತೆಗೆ ಕಾಳುಮೆಣಸಿನ ಪುಡಿಯನ್ನು ಹಾಕಿ ಸೇವಿಸುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.

ಜೇನುತುಪ್ಪವು ಕಾರ್ಬೋಹೈಡ್ರೇಟ್‌ಗಳ ನೈಸರ್ಗಿಕ ಮೂಲವಾಗಿದೆ, ಇದು ಶಕ್ತಿಯ ಅತ್ಯುತ್ತಮ ಮೂಲವಾಗಿದೆ. ಇದು ಅಥ್ಲೆಟಿಕ್ ಕಾರ್ಯಕ್ಷಮತೆಯನ್ನು ಸುಧಾರಿಸಲು ಮತ್ತು ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ದಿನಕ್ಕೆರಡು ಬಾರಿ, ಜೇನುತುಪ್ಪ ಮತ್ತು ತಾಜಾ ನಿಂಬೆಯ ರಸವನ್ನು ಮುಖಕ್ಕೆ ಹಚ್ಚಿ, ೨೦ ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ಮುಖದ ಮೇಲಿರುವ ಕಪ್ಪು ಕಲೆಗಳನ್ನು ತೆಗೆದುಹಾಕಬಹುದು.

ತರಚು ಗಾಯದ ಮೇಲೆ ಜೇನುತುಪ್ಪವನ್ನು ಹಚ್ಚಿದರೆ, ಅದು ಗಾಯವನ್ನು ಬೇಗ ಗುಣ ಮಾಡುತ್ತದೆ ಹಾಗೂ ಗಾಯದ ಕಲೆಯನ್ನು ಕಡಿಮೆ ಮಾಡುತ್ತದೆ.

ನಾಳೆ ನೂತನ ಸಿಎಂ ಪ್ರಮಾಣವಚನ; ಬೇರೆ ರಾಜ್ಯಗಳ ಸಿಎಂಗಳಿಗೆ ಕಾಂಗ್ರೆಸ್ ಆಹ್ವಾನ

Latest Posts

ಲೈಫ್‌ಸ್ಟೈಲ್