More

    ಹೆಜ್ಜೇನು ಕಡಿತದಿಂದ 8 ಮಂದಿ ಗಾಯ

    ಕಿನ್ನಿಗೋಳಿ: ಇಲ್ಲಿಗೆ ಸಮೀಪದ ಮೂರುಕಾವೇರಿಯ ಮುಖ್ಯ ರಸ್ತೆಯ ವಸತಿ ಸಮುಚ್ಚಯದಲ್ಲಿ ಗೂಡು ಕಟ್ಟಿದ್ದ ಹೆಜ್ಜೇನು ಸೋಮವಾರ ಬೆಳಗ್ಗೆ ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಕಚ್ಚಿದ ಪರಿಣಾಮ 8 ಮಂದಿ ಗಾಯಗೊಂಡು ಕಿನ್ನಿಗೋಳಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಕೆನರಾ ಲೈಟಿಂಗ್ ಸಿಬ್ಬಂದಿ ಬೈಕ್‌ನಲ್ಲಿ ತೆರಳುತ್ತಿರುವಾಗ ನೊಣಗಳ ಹಿಂಡು ದಾಳಿ ಮಾಡಿದೆ. ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗೋಳಿಜೋರ ನೀರಳಿಕೆ ನಿವಾಸಿ ರವಿ, ಮೂರುಕಾವೇರಿ ರೋಟರಿ ಶಾಲೆ ಶಿಕ್ಷಕ ಸೂರ್ಯಕಾಂತ್ ತೀವ್ರ ಗಾಯಗೊಂಡು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಉಳಿದಂತೆ ರಿಚರ್ಡ್ ನಝರತ್ ಮೂರುಕಾವೇರಿ, ರಿವಿಯಾನ್ ಮೂರುಕಾವೇರಿ, ಶರತ್ ಪೂಜಾರಿ ಮಾರಡ್ಕ, ಅಲ್ಬರ್ಟ್ ಡಿಸೋಜ, ಮನೋಹರ್ ಮುಚ್ಚೂರು ಆಸ್ಪತ್ರೆಗೆ ದಾಖಲಾಗಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ಘಟನೆ ನಡೆದ ಸ್ಥಳ, ಆಸ್ಪತ್ರೆಗೆ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಾಯೀಶ್ ಚೌಟ, ಅರಣ್ಯಾಧಿಕಾರಿ ನಾಗೇಶ್ ಬಿಲ್ಲವ, ಸಿಬ್ಬಂದಿ ರಾಜು ಎಲ್.ಜೆ, ಸಂತೋಷ್ ಭೇಟಿ ನೀಡಿದ್ದಾರೆ.

    ಗೂಡು ತೆರವು ಕಾರ್ಯಚರಣೆ: ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮುತುವರ್ಜಿಯಲ್ಲಿ ವಸತಿ ಸಮುಚ್ಚಯದಲ್ಲಿನ ಹೆಜ್ಜೇನು ತೆರವು ವ್ಯವಸ್ಥೆ ಮಾಡಲಾಗುವುದು. ಅದಕ್ಕಾಗಿ ಮುಚ್ಚೂರಿನ ಜೇನು ಹಿಡಿಯುವ ಯುವಕರ ತಂಡವನ್ನು ನಿಯೋಜನೆ ಮಾಡಲಾಗಿದೆ ಎಂದು ಕಿನ್ನಿಗೋಳಿ ಪಪಂ ಮುಖ್ಯಾಧಿಕಾರಿ ಸಾಯೀಶ್ ಚೌಟ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts