More

    ಪ್ರಾಮಾಣಿಕತೆಯ ಪ್ರತೀಕ ಅರಿಹಂತ ಸಹಕಾರಿ

    ಬೋರಗಾವ : ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಗೆ ಹೆಚ್ಚಿನ ಒತ್ತು ನೀಡಿದ ಕಾರಣ ಅರಿಹಂತ ಸಹಕಾರಿಯು ಇಂದು ಎಲ್ಲರ ನಂಬಿಕೆ ಹಾಗೂ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ, ಸಹಕಾರಿ ಹಿರಿಯ ಧುರೀಣ ರಾವಸಾಹೇಬ ಪಾಟೀಲ ಹೇಳಿದ್ದಾರೆ.

    ಶನಿವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಂಸ್ಥೆಯ 30ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸಿಬ್ಬಂದಿ ಸಹಕಾರ ಹಾಗೂ ಗ್ರಾಹಕರ ನೆರವಿನಿಂದ ನಾವು ಸಹಕಾರಿ ರಂಗದಲ್ಲಿ ಇಂದು ಉತ್ತಮ ಹೆಸರು ಪಡೆದುಕೊಂಡಿದ್ದೇವೆ. ಸಹಕಾರಿಯಿಂದ ಗ್ರಾಹಕರಿಗಾಗಿ ವಿವಿಧ ಸೌಲಭ್ಯಗಳನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ಶೀಘ್ರ ಯೋಜನೆ ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದರು.

    ಪಿಕೆಪಿಎಸ್ ಚೇರ್ಮನ್ ಉತ್ತಮ ಪಾಟೀಲ ಮಾತನಾಡಿ, ಕರೊನಾ ಮಹಾಮಾರಿಯಿಂದ ಸಂಕಷ್ಟದಲ್ಲಿದ್ದ ಅನೇಕರಿಗೆ ಸಹಕಾರಿಯಿಂದ ಅನೇಕ ರೀತಿಯ ಸೌಲಭ್ಯ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

    ಉಪಾಧ್ಯಕ್ಷ ಸುಭಾಷ ಶೆಟ್ಟಿ ಮಾತನಾಡಿ, ನಂಬಿಕೆ, ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯ ಆಧಾರದ ಮೇಲೆ ಅರಿಹಂತ ಸಂಸ್ಥೆಯು 45 ಶಾಖೆಗಳ ಮೂಲಕ ಬೆಳಗಾವಿ ಹಾಗೂ ಹುಬ್ಬಳಿ ಜಿಲ್ಲಾದ್ಯಂತ ಕಾರ್ಯನಿರ್ವಹಿಸುತ್ತಿದೆ. 11,987 ಸದಸ್ಯರನ್ನು ಹೊಂದಿರುವ ಸಂಸ್ಥೆಯು 4.12 ಕೋಟಿ ರೂ. ದುಡಿಯುವ ಬಂಡವಾಳ, 40.87 ಕೋಟಿ ರೂ. ನಿಧಿ, 725.16 ಕೋಟಿ ರೂ. ಠೇವು ಸಂಗ್ರಹಿಸಿ, 513.72 ಕೋಟಿ ರೂ. ಸಾಲ ವಿತರಿಸಿ, 5.15ಕೋಟಿ ರೂ. ನಿವ್ವಳ ಲಾಭ ಗಳಿಸಿ ಪ್ರಗತಿ ಪಥದಲ್ಲಿ ಸಾಗುತ್ತಿದೆ ಎಂದು ಮಾಹಿತಿ ನೀಡಿದರು.

    ಪ್ರಧಾನ ವ್ಯವಸ್ಥಾಪಕ ಅಶೋಕ ಬಂಕಾಪುರೆ ವಾರ್ಷಿಕ ವರದಿ ಮಂಡಿಸಿ, ಮಂಜೂರಾತಿ ಪಡೆದರು. ಈ ವರ್ಷದ ಅತ್ಯುತ್ತಮ ಶಾಖೆಯಾಗಿ ಖಡಕಲಾಟ ಶಾಖೆಯನ್ನು, ಅತ್ಯುತ್ತಮ ಶಾಖಾ ವ್ಯವಸ್ಥಾಪಕರಾಗಿ ಬೆಳಗಾವಿ ಶಾಖೆಯ ಭರತ ಗುಂಡೆ ಹಾಗೂ ಆದರ್ಶ ಸಿಬ್ಬಂದಿಯಾಗಿ ಬಾಹುಬಲಿ ಶಿರಹಟ್ಟಿ ಹಾರೂಗೇರಿ ಅವರನ್ನು ಸನ್ಮಾನಿಸಲಾಯಿತು. ಜತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ
    ಮಾಡಿದವರನ್ನು ರಾವಸಾಹೇಬ ಪಾಟೀಲ ಸನ್ಮಾನಿಸಿದರು.

    ದತ್ತ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಶ್ರೇಣಿಕ ಪಾಟೀಲ, ನಿರ್ದೇಶಕ ಅಭಿನಂದನ ಪಾಟೀಲ, ಅಭಯ ಕರೋಲೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಂಜಯ ಐದಮಾಳೆ, ರಾಜೀವ್ ಚೌಗಲಾ, ಇಂದ್ರಜಿತ ಪಾಟೀಲ, ಅಶೋಕ ಪಡನಾಡ, ಶಂಕರ ಮಾಳಿ, ವರ್ಧಮಾನ ಪಾಟೀಲ, ಬಾಹುಬಲಿ ಸೋಲ್ಲಾಪುರೆ, ಜಯಗೊಂಡ ಪಾಟೀಲ, ಜಯಪಾಲ ನಾಗಾವೆ, ಅಪ್ಪಾಸಾಹೇಬ ಕಡೋಲೆ, ಪೀರಗೌಡಾ ಪಾಟೀಲ, ಭುಜಗೌಡಾ ಪಾಟೀಲ, ಶರದಕುಮಾರ ಲಡಗೆ, ಅಜಿತ ಕಾಂಬಳೆ, ಬಾಶು ಅಫರಾಜ, ಶ್ರೀಕಾಂತ ವಸವಾಡೆ, ಜಂಬು ಬಳ್ಳೋಳೆ, ವಿಮಲ ಪಾಟೀಲ, ಜಿ.ಎಂ. ಅಶೋಕ ಬಂಕಾಪುರೆ, ವಿಫುಲ ಚೌಗುಲಾ, ಅಮೂಲ ನಾಯಿಕ, ಕಿಶೋರ ಬಾಳಿ, ದಿಲೀಪ ಪಠಾಡೆ, ಶಾಂತಿನಾಥ ತೇರದಾಳೆ ಇತರರು ಇದ್ದರು. ಆರ್.ಎಸ್.ಪಚಂಡಿ ನಿರೂಪಿಸಿದರು. ನಿರ್ದೇಶಕ ಸತೀಶ ಪಾಟೀಲ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts