More

    ವಿದ್ಯಾರ್ಥಿಗಳು ಜೀವನವನ್ನು ವಿಶ್ವಾಸದಿಂದ ಗೆಲ್ಲಲಿ

    ಮೋರಟಗಿ: ಪ್ರತಿಯೊಬ್ಬ ವಿದ್ಯಾರ್ಥಿ ಜೀವನವನ್ನು ವಿಶ್ವಾಸದಿಂದ ಗೆಲ್ಲಬೇಕು. ವಿಶ್ವಾಸವಿಲ್ಲದ ವಿದ್ಯಾರ್ಥಿ ಜೀವನ ಹಾಳು ಬಾವಿಯಿದ್ದಂತೆ ಎಂದು ಗೆಜ್ಜಿ ಕರಿಯರ್ ಅಕಾಡೆಮಿ ನಿರ್ದೇಶಕ ಸುರೇಶ ಗೆಜ್ಜಿ ಹೇಳಿದರು.

    ಗ್ರಾಮದ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಎಸ್‌ಎಸ್‌ಎಲ್‌ಸಿ, ಪಿಯುಸಿ ದ್ವಿತೀಯ ಹಾಗೂ ಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು.

    ವಿದ್ಯಾರ್ಥಿಗಳಿಗೆ ತಮ್ಮದೇ ಆದಂತಹ ಛಲ, ಆತ್ಮವಿಶ್ವಾಸ ಹಾಗೂ ಸಮಯ ಪ್ರಜ್ಞೆ ಇರಬೇಕು. ಓದುವ ಕಡೆ ಹೆಚ್ಚಿನ ಗಮನ ಕೊಡಬೇಕು. ನಿಮ್ಮ ಚಿತ್ತ ಸಾಧನೆಯತ್ತ ಇರಬೇಕು. ಉಳಿ ಏಟು ನೋವು ಕೊಡುತ್ತೆ ಎನ್ನುವುದಾದರೆ ಯಾವ ಕಲ್ಲು ಶಿಲೆ ಆಗಲು ಸಾಧ್ಯವಿಲ್ಲ. ಯಾವ ವಿದ್ಯಾರ್ಥಿ ಹೊಡೆತ ತಿಂದು ಅದರ ನೋವು ಸಹಿಸಿಕೊಂಡು ವಿದ್ಯಾಭ್ಯಾಸ ಮಾಡುತ್ತಾನೆಯೋ ಅವನು ಸಾಧನೆ ಮಾಡುತ್ತಾನೆ ಎಂದರು.

    ಪ್ರಾಚಾರ್ಯ ಟಿ.ಎನ್. ಲಮಾಣಿ ಮಾತನಾಡಿ, ವಾರ್ಷಿಕ ಸ್ನೇಹ ಸಮ್ಮೇಳನ ವಿಜೃಂಭಣೆಯಿಂದ ಮಾಡಿದರೆ ಸಾಲದು. ಮುಂದಿನ ಉನ್ನತ ಶಿಕ್ಷಣಕ್ಕೆ ಹೆಜ್ಜೆ ಇಡುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಸಾಧನೆ ಮಾಡಬೇಕು. ಪತ್ರಿಕೆಯಲ್ಲಿ ತಮ್ಮ ಫಲಿತಾಂಶ ನೋಡಿದ ಹಿಂದಿನ ವಿದ್ಯಾರ್ಥಿಗಳಲ್ಲಿ ತಮಗಿಂತ ಹೆಚ್ಚು ಅಂಕಗಳನ್ನು ತೆಗೆದುಕೊಳ್ಳಬೇಕು ಎಂದು ಛಲ ಹುಟ್ಟಬೇಕು. ಆ ನಿಟ್ಟಿನಲ್ಲಿ ತಾವು ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಆಗಬೇಕು ಎಂದರು.

    ಸಂಸ್ಥೆಯ ಚೇರ್ಮನ್ ಬಿ.ಐ. ಮಸಳಿ ಅಧ್ಯಕ್ಷತೆ ವಹಿಸಿದ್ದರು. ಡಾ. ಚನ್ನವೀರ ಮನಗೂಳಿ, ಎಂ.ಜಿ. ಮಂದೆವಾಲಿ, ನಿರ್ದೇಶಕರಾದ ವಿ.ಎಸ್. ಪಾಟೀಲ, ಸಿದ್ದನಗೌಡ ಪಾಟೀಲ, ಎಸ್.ಎಂ. ಸಿಂಗಾಡಿ, ಬಿ.ಎಸ್. ಬಳಗುಂಪಿ, ಮುಖ್ಯಶಿಕ್ಷಕ ಬಿ.ಆರ್. ಬಿರಾದಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts