More

    ಕನ್ನಡ ನೆಲ-ಜಲ ರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ

    ಜೇವರ್ಗಿ: ಕನ್ನಡ ನೆಲ, ಜಲದ ರಕ್ಷಣೆಗಾಗಿ ನಾವೆಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡುವುದು ಅಗತ್ಯವಾಗಿದೆ. ಅಂದಾಗ ಮಾತ್ರ ಭಾಷೆ ಉಳಿಸಿ, ಬೆಳೆಸಲು ಸಾಧ್ಯ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆದ ಶಾಸಕ ಡಾ.ಅಜಯಸಿಂಗ್ ಹೇಳಿದರು.

    ಕನ್ನಡ ಭವನದಲ್ಲಿ ತಾಲೂಕು ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನಿಂದ ಬುಧವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದಾಗಿದ್ದು, ತನ್ನದೇಯಾದ ಪ್ರಾತಿನಿಧ್ಯ ಹೊಂದಿದೆ. ಕನ್ನಡ ಭಾಷೆಯ ಅಳಿವು- ಉಳಿವು ಕನ್ನಡಿಗರ ಕೈಯಲ್ಲಿದೆ ಎಂದರು.

    ತಹಸೀಲ್ದಾರ್ ಗಜಾನನ ಬಾಳೆ, ಕಸಾಪ ತಾಲೂಕು ಅಧ್ಯಕ್ಷ ಎಸ್.ಕೆ.ಬಿರಾದಾರ, ಪ್ರಮುಖರಾದ ಚನ್ನಮಲ್ಲಯ್ಯ ಹಿರೇಮಠ, ಶಿವಣ್ಣಗೌಡ ಹಂಗರಗಿ, ಕಲ್ಯಾಣಕುಮಾರ ಸಂಗಾವಿ, ಸಿದ್ದಲಿಂಗರಡ್ಡಿ ಇಟಗಿ, ರುಕುಂಪಟೇಲ್ ಇಜೇರಿ, ಭೀಮರಾಯ ನಗನೂರ, ಪ್ರಕಾಶ ಪುಲಾರೆ, ಶಿವಲಿಂಗ ಹಳ್ಳಿ, ಶರಬು ಕಲ್ಯಾಣಿ, ಬಸವರಾಜ ತೆಲ್ಕರ್, ಬಸವರಾಜ ಬಾಗೇವಾಡಿ, ಅಬ್ದುಲ್ ನಬಿ, ಡಾ.ಸಿದ್ದು ಪಾಟೀಲ್, ಡಾ.ಶೋಬಾ ಸಜ್ಜನ್, ಗುರುಲಿಂಗಯ್ಯ ಹಿರೇಮಠ, ಸಂಗೀತಾ ಹಿರೇಮಠ, ಡಾ.ಹಣಮಂತರಾಯ ರಾಂಪುರೆ, ಡಾ.ಗೋವಿಂದ್ರರಾಜ ಆಲ್ದಾಳ ಇತರರಿದ್ದರು.

    ಸಾಹಿತಿ ಸಿ.ಎಸ್.ಆನಂದ ಉಪನ್ಯಾಸ ನೀಡಿದರು. ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಕಲ್ಯಾಣಕುಮಾರ ಸಂಗಾವಿ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts