More

  ಹೋಂ ಸ್ಟೇ, ರೆಸಾರ್ಟ್‌ಗಳಿಗೆ ಡಿಮ್ಯಾಂಡ್

  ಹಾಸನ: ಹೊಸ ವರ್ಷಾಚರಣೆ ಸಂಭ್ರಮದ ಹಿನ್ನೆಲೆಯಲ್ಲಿ ಜಿಲ್ಲೆಯ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳಿಗೆ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದ್ದು, ಜ.2ರ ಸಂಜೆವರೆಗೆ ಎಲ್ಲಿಯೂ ಕೊಠಡಿಗಳು ಖಾಲಿ ಇಲ್ಲದಂತಾಗಿದೆ.

  ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಹೊಸ ವರ್ಷವನ್ನು ಹಸಿರು ಪ್ರಕೃತಿ ಮಡಿಲಲ್ಲಿ ನಿಂತು ಬರ ಮಾಡಿಕೊಂಡು ಸಂಭ್ರಮ ಆಚರಿಸುವ ಉದ್ದೇಶದಿಂದ ಸಾವಿರಾರು ಪ್ರವಾಸಿಗರು ಮಂಗಳವಾರ ಬೆಳಗ್ಗೆಯಿಂದಲೇ ಜಿಲ್ಲೆಯತ್ತ ಬಂದಿದ್ದಾರೆ.

  ಸಕಲೇಶಪುರ, ಬೇಲೂರು, ಆಲೂರು ತಾಲೂಕಿನಲ್ಲಿ ಕಾಫಿ ತೋಟಗಳು ಹಾಗೂ ಪಶ್ಚಿಮಘಟ್ಟದ ಅರಣ್ಯ ಪ್ರದೇಶದಕ್ಕೆ ಹೊಂದಿಕೊಂಡತ್ತಿರುವ ಹೋಂ ಸ್ಟೇ, ರೆಸಾರ್ಟ್‌ಗಳು ಪ್ರವಾಸಿಗರಿಂದ ಭರ್ತಿಯಾಗಿವೆ. ಎಲ್ಲ ಹೋಂ ಸ್ಟೇಗಳಲ್ಲಿಯೂ ಅತಿಥಿಗಳಿಗಾಗಿ ಮಲೆನಾಡಿನ ವಿಶೇಷ ಖಾದ್ಯಗಳನ್ನು ಸಿದ್ಧಪಡಿಸಲಾಗಿದೆ

  ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತ: ಪಶ್ಚಿಮ ಘಟದತ್ತ ಜನರು ಸಾಗರೋಪಾದಿಯಲ್ಲಿ ಹರಿದು ಬರುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ ಪ್ರಯಾಣಿಕರು ಪ್ರಯಾಸ ಪಡುವಂತಾಯಿತು. ಶಾಂತಿಗ್ರಾಮ ಹಾಗೂ ಹಿರೀಸಾವೆ ಟೋಲ್‌ಗಳಲ್ಲಿ ವಾಹನಗಳು ಗಂಟೆಗಟ್ಟಲೇ ನಿಂತಿದ್ದವು.

  ಜಿಲ್ಲಾದ್ಯಂತ ಬಿಗಿ ಭದ್ರತೆ: ಯಾವುದೇ ಅಹಿತಕರ ಘಟನೆ ಸಂಭವಿಸಬಾರದೆಂಬ ಎಚ್ಚರಿಕೆಯಿಂದ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಪ್ರಮುಖ ಹೋಟೆಲ್‌ಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದ್ದು, ಅಹಿತಕರ ಘಟನೆಗೆ ಆಸ್ಪದ ನೀಡಿದರೆ ಕಾನೂನು ಕ್ರಮದ ಎಚ್ಚರಿಕೆಯನ್ನು ಎಸ್ಪಿ ಡಾ.ರಾಮ್ ನಿವಾಸ್ ಸೆಪಟ್ ನೀಡಿದ್ದಾರೆ.

  ಮಧ್ಯರಾತ್ರಿ ಮದ್ಯ ಸೇವಿಸಿ ವಾಹನ ಚಲಾಯಿಸುವ ಚಾಲಕರಿಂದ ಆಗುವ ಅಪಘಾತಗಳನ್ನು ತಡೆಯಲು ವಾಹನಗಳ ತಪಾಸಣೆಗೆ ವಿಶೇಷ ಕ್ರಮ ಕೈಗೊಳ್ಳಲಾಗಿದೆ.

   

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts