More

    ಕಿಡ್ನಿ ಕಲ್ಲುಗಳನ್ನು ನೈಸರ್ಗಿಕವಾಗಿ ಕರಗಿಸಲು ಪರಿಣಾಮಕಾರಿ ಮನೆಮದ್ದುಗಳು ಇಲ್ಲಿವೆ…

    ಕಿಡ್ನಿ ಸ್ಟೋನ್ಸ್​​ ಅಥವಾ ಕಿಡ್ನಿ ಕಲ್ಲು ರೋಗ ಈಗ ಭಾರತದಲ್ಲಿ ಸಾಮಾನ್ಯವಾಗಿಬಿಟ್ಟಿದೆ. ದೇಶದ ಜನಸಂಖ್ಯೆಯ 12 ಪ್ರತಿಶತದಷ್ಟು ಜನರು ಕಿಡ್ನಿ ಸ್ಟೋನ್ಸ್​​ ಸಮಸ್ಯೆಗೆ ಒಳಗಾಗುತ್ತಾರೆ. ಇವರಲ್ಲಿ ಅರ್ಧದಷ್ಟು ಮಂದಿಗೆ ಮೂತ್ರಪಿಂಡದ ಹಾನಿ ಕೂಡ ಸಂಭವಿಸುತ್ತದೆ. ಈ ಕಿಡ್ನಿ ಸ್ಟೋನ್ಸ್​ನಿಂದಾಗಿ ತೀವ್ರ ನೋವು ಅನುಭವಿಸಬೇಕಾಗುತ್ತದೆ.

    ಸೂಕ್ತ ಚಿಕಿತ್ಸೆಯನ್ನು ನಿರ್ಲಕ್ಷಿಸಿದರೆ, ಸೋಂಕು, ಮೂತ್ರನಾಳದಲ್ಲಿ ಅಡಚಣೆ, ರಕ್ತಸ್ರಾವದಂತಹ ಗಂಭೀರ ಸಮಸ್ಯೆಗಳು ಹೆಚ್ಚಾಗಬಹುದು. ಹೀಗಾಗಿ ಲಕ್ಷಣಗಳು ಕಂಡುಬಂದ ಕೂಡಲೇ ಕಿಡ್ನಿ ಸ್ಟೋನ್ಸ್​ ಅಪಾಯವನ್ನು ಕಡಿಮೆ ಮಾಡಲು ಜನರು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕಿಡ್ನಿ ಸ್ಟೋನ್ಸ್​ ತಪ್ಪಿಸಲು ಬಯಸುವವರಿಗೆ ಆಯುರ್ವೇದದ ಮನೆಮದ್ದುಗಳು ತುಂಬಾ ಸಹಾಯಕವಾಗಿವೆ, ಏಕೆಂದರೆ ಅವು ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿಲ್ಲ ಮತ್ತು ಮನೆಯಲ್ಲಿಯೇ ಸುಲಭವಾಗಿ ಪ್ರಯತ್ನಿಸಬಹುದಾಗಿದೆ.

    ಇದನ್ನೂ ಓದಿ: ಪೊಲೀಸರಿಗೇ ಸುತ್ತಿಕೊಂಡ ಬಿಟ್ ಕಾಯಿನ್ ಉರುಳು: ಜಪ್ತಿ ಮಾಡಿದ್ದ ಮೊಬೈಲ್, ಪೆನ್​ಡ್ರೖೆವ್, ಮ್ಯಾಕ್ಬುಕ್​ನಲ್ಲಿ ಸಾಕ್ಷಿ ನಾಶ

    ಹೈಡ್ರೇಟೆಡ್ ಆಗಿರಿ: ದೇಹಕ್ಕೆ ಅಗತ್ಯವಾಗಿ ಬೇಕಾದ ನೀರು ಅಥವಾ ದ್ರವವನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳುವುದರಿಂದ ಮೂತ್ರವು ಕೇಂದ್ರೀಕರಿಸುತ್ತದೆ ಮತ್ತು ಅದು ಕ್ರಮೇಣ ಕಲ್ಲುಗಳ ರಚನೆ ಪಡೆದುಕೊಳ್ಳಲು ಪ್ರಾರಂಭಿಸುತ್ತದೆ. ಇದನ್ನೇ ನಾವು ಕಿಡ್ನಿ ಸ್ಟೋನ್ಸ್​ ಎಂದು ಕರೆಯುತ್ತೇವೆ. ಕಿಡ್ನಿ ಸ್ಟೋನ್ಸ್​ ರಚನೆಯನ್ನು ತಡೆಗಟ್ಟಲು ಸಾಮಾನ್ಯ ಮತ್ತು ಉತ್ತಮ ಮಾರ್ಗವೆಂದರೆ ಸಾಕಷ್ಟು ನೀರು ಕುಡಿಯುವುದು. ದೇಹದಲ್ಲಿ ನೀರಿನ ಕೊರತೆ ಇಲ್ಲದಿದ್ದರೆ, ಮೂತ್ರವು ದುರ್ಬಲಗೊಳ್ಳುವುದಿಲ್ಲ.

    ಸಿಟ್ರಸ್ ಆಹಾರವನ್ನು ಸೇವಿಸಿ: ನಿಮ್ಮ ಡಯೆಟ್​ನಲ್ಲಿ ನೆಲ್ಲಿಕಾಯಿ, ಕಿತ್ತಳೆ, ಮೂಸಂಬಿ ಮತ್ತು ನಿಂಬೆಹಣ್ಣಿನಂತ ಹಣ್ಣುಗಳನ್ನು ಸೇರಿಸಿಕೊಳ್ಳಿ. ಸಿಟ್ರಸ್ ಹಣ್ಣುಗಳಲ್ಲಿ ಸಿಟ್ರಿಕ್ ಆಮ್ಲ ಸಮೃದ್ಧವಾಗಿದೆ. ಇದು ಕಿಡ್ನಿ ಸ್ಟೋನ್ಸ್​ ರಚನೆಯನ್ನು ತಡೆಯುತ್ತದೆ ಮತ್ತು ರಚನೆಯಾದ ಕಿಡ್ನಿ ಸ್ಟೋನ್ಸ್​ ಒಡೆಯಲು ಸಹಾಯ ಮಾಡುತ್ತದೆ.

    ಹುರುಳಿಕಾಳು: ಹಾರ್ಸ್​ ಗ್ರಾಮ್​ ಅಥವಾ ಕುಲ್ತಿ ದಾಲ್​ ಎಂದು ಕರೆಯುವ ಹುರುಳಿಕಾಳಿನಲ್ಲಿ ಅತ್ಯುತ್ತಮವಾದ ಆಯುರ್ವೇದ ಔಷಧೀಯ ಗುಣವಿದೆ. ಇದರ ಸಹಾಯದಿಂದ ಕಿಡ್ನಿ ಸ್ಟೋನ್ಸ್​ ರಚನೆಯನ್ನು ತಡೆಯಬಹುದು ಮತ್ತು ಸ್ಟೋನ್ಸ್​ ಸಹ ತೆಗೆದುಹಾಕಬಹುದು. ಹುರುಳಿಕಾಳುಗಳು ಮೂತ್ರದ ಪ್ರಮಾಣವನ್ನು ಹೆಚ್ಚಿಸುವ ಮತ್ತು ಕಲ್ಲನ್ನು ಕರಗಿಸುವ ಗುಣವನ್ನು ಹೊಂದಿವೆ. ಆದ್ದರಿಂದ ಕಿಡ್ನಿ ಸ್ಟೋನ್ಸ್​ ತೆಗೆದುಹಾಕಲು ಹುರುಳಿಕಾಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಹೀಗಾಗಿ ನಿಮ್ಮ ಡಯೆಟ್​ನಲ್ಲಿ ಇದನ್ನು ಸೇರಿಸಿಕೊಳ್ಳಿ. ಇದನ್ನು ನೀವು ರೊಟ್ಟಿ ಅಥವಾ ಅನ್ನದೊಂದಿಗೆ ತಿನ್ನಬಹುದು.

    ಸಸ್ಯ ಪ್ರೋಟೀನ್ ಬಳಸಿ: ಮಾಂಸಾಹಾರಗಳಲ್ಲಿರುವ ಪ್ರೋಟೀನ್‌ನ ಅತಿಯಾದ ಸೇವನೆಯು ಕಿಡ್ನಿ ಸ್ಟೋನ್ಸ್​ ರಚನೆಯ ಅಪಾಯವನ್ನು ಹೆಚ್ಚಿಸುತ್ತದೆ. ಪ್ರೋಟೀನ್ ಅಗತ್ಯವನ್ನು ಪೂರೈಸಲು, ಆಹಾರದಲ್ಲಿ ಪ್ರಾಣಿ ಪ್ರೋಟೀನ್ ಬದಲಿಗೆ, ಬಟಾಣಿ, ಕಾಳುಗಳು ಮತ್ತು ದ್ವಿದಳ ಧಾನ್ಯಗಳಂತಹ ಸಸ್ಯ ಆಧಾರಿತ ಪ್ರೋಟೀನ್​ ಆಯ್ಕೆ ಉತ್ತಮವಾಗಿದೆ.

    ಇದನ್ನೂ ಓದಿ: ಇನ್​ಸ್ಟಾಗ್ರಾಂನಲ್ಲಿ ಪ್ರತಿ ಪೋಸ್ಟ್​ಗೆ 11.45 ಕೋಟಿ ರೂ. ಚಾರ್ಜ್​ ಮಾಡ್ತಾರೆ ಕೊಹ್ಲಿ! ಯಾರು ಕೊಡ್ತಾರೆ ಈ ಹಣ?

    ಉಪ್ಪು ಸೇವನೆ ಕಡಿಮೆ ಮಾಡಿ: ಸಂಸ್ಕರಿಸಿದ ಆಹಾರಗಳಲ್ಲಿ ಉಪ್ಪಿನಂಶ ಅಧಿಕವಾಗಿದ್ದು, ಇದು ಮೂತ್ರಪಿಂಡದಲ್ಲಿ ಕ್ಯಾಲ್ಸಿಯಂ ಸಂಗ್ರಹವಾಗುವ ಪ್ರಮಾಣವನ್ನು ಹೆಚ್ಚಿಸುತ್ತದೆ. ಸೋಡಿಯಂ ಮತ್ತು ಕ್ಯಾಲ್ಸಿಯಂ ಮೂತ್ರಪಿಂಡಗಳನ್ನು ತಲುಪುವುದರಿಂದ ಕಿಡ್ನಿ ಸ್ಟೋನ್ಸ್​ ರಚನೆಗೆ ಕಾರಣವಾಗುತ್ತದೆ. ಫ್ರೆಂಚ್ ಫ್ರೈಸ್ ಮತ್ತು ಬರ್ಗರ್‌ಗಳಂತಹ ಹೆಚ್ಚಿನ ಸೋಡಿಯಂ ಇರುವ ಫಾಸ್ಟ್-ಫುಡ್‌ಗಳಿಂದ ದೂರವಿರುವುದರಿಂದ ಕಿಡ್ನಿ ಸ್ಟೋನ್ಸ್​ ತಪ್ಪಿಸಬಹುದು. ಬದಲಿಗೆ, ಮೂತ್ರದಲ್ಲಿ ಕ್ಯಾಲ್ಸಿಯಂ ಪ್ರಮಾಣವನ್ನು ಕಡಿಮೆ ಮಾಡಲು ಕಡಿಮೆ ಸೋಡಿಯಂ ಅಂಶವಿರುವ ತಾಜಾ ಆಹಾರವನ್ನು ತೆಗೆದುಕೊಳ್ಳಬೇಕು. ಮೂತ್ರಪಿಂಡದ ಆರೋಗ್ಯವನ್ನು ಉತ್ತೇಜಿಸುವುದರ ಜೊತೆಗೆ, ಕಡಿಮೆ ಸೋಡಿಯಂ ಹೃದಯಕ್ಕೂ ಒಳ್ಳೆಯದು. (ಏಜೆನ್ಸೀಸ್​)

    ಬಾಹುಬಲಿ ಚಿತ್ರದ ಕಟ್ಟಪ್ಪ ಖ್ಯಾತಿಯ ನಟ ಸತ್ಯರಾಜ್​ಗೆ ಮಾತೃ ವಿಯೋಗ

    ಚಂದ್ರನ ದಕ್ಷಿಣ ಧ್ರುವ ಯಾನದಲ್ಲಿ ಭಾರತ-ರಷ್ಯಾ ಸ್ಪರ್ಧೆ: ಇಸ್ರೊ ನೌಕೆಗಿಂತ ತಿಂಗಳು ತಡವಾಗಿ ಉಡಾವಣೆ; 2 ದಿನ ಮೊದಲೇ ಲೂನಾ-25 ಲ್ಯಾಂಡಿಂಗ್ ಸಾಧ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts