More

    ಬಾಯಿಯ ದುರ್ವಾಸನೆಯಿಂದ ಮುಜುಗರಕ್ಕೀಡಾಗಿದ್ದೀರಾ? ಈ ಟಿಪ್ಸ್‌ ಫಾಲೋ ಮಾಡಿ ಸಮಸ್ಯೆಗೆ ಹೇಳಿ ಗುಡ್‌ ಬೈ..

    ಬೆಂಗಳೂರು: ಬಾಯಿಯ ದುರ್ವಾಸನೆ ಸಾಮಾನ್ಯವಾಗಿ ಬಾಯಿಯಲ್ಲಿನ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಅಲ್ಲದೆ, ಪ್ರತಿದಿನ ಬ್ರಷ್​ ಮಾಡದೇ ಇರುವುದರಿಂದ ಆಹಾರದ ಕಣಗಳು ಬಾಯಿಯಲ್ಲಿ ಉಳಿಯುತ್ತದೆ. ಇದರಿಂದಾಗಿ ಬ್ಯಾಕ್ಟೀರಿಯಾ ಶೇಖರಣೆಗೊಂಡು ಕೆಟ್ಟ ವಾಸನೆಯನ್ನು ಉಂಟಾಗುತ್ತದೆ. ಈ ಬಾಯಿಯ ದುರ್ವಾಸನೆಯನ್ನು ನಿಯಂತ್ರಿಸಲು ಹಲವಾರು ಮನೆಮದ್ದುಗಳಿವೆ.

    ಲವಂಗ
    ಬಾಯಿಯಲ್ಲಿನ ಕೀಟಾಣುಗಳನ್ನು ತೊಡೆದು ಹಾಕುವಲ್ಲಿ ಲವಂಗವು ಉತ್ತಮ ಆ್ಯಂಟಿಬಯೋಟಿಕ್​ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಬಾಯಿಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ನಿವಾರಿಸುತ್ತದೆ.

    ನೀರು
    ಹೆಚ್ಚು ನೀರು ಕುಡಿದಷ್ಟು ಆರೋಗ್ಯ ಸುಧಾರಿಸುತ್ತಾ ಹೋಗುತ್ತದೆ ಎಂಬ ವಿಷಯ ನಿಮಗೆ ಗೊತ್ತಿರುತ್ತದೆ. ದೇಹಕ್ಕೆ ಅವಶ್ಯವಿರುವಷ್ಟು ನೀರನ್ನು ಕುಡಿಯದಿದ್ದರೆ ಬ್ಯಾಕ್ಟೀರಿಯಾಗಳು ಬಾಯಿಯಲ್ಲಿ ಶೇಖರಣೆಗೊಂಡು ಬಾಯಿಯ ದುರ್ವಾಸನೆ ಬರುತ್ತದೆ. ಹಾಗಾಗಿ ನಾವು ಹೆಚ್ಚು ನೀರನ್ನು ಕುಡಿಯಬೇಕು.

    ಇದನ್ನೂ ಓದಿ: VIDEO| ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿ ದಾಳಿ; ಶ್ವಾನದ ಜೊತೆ ಕಾದಾಡಿ ಪಾರಾದ

    ಜೇನುತುಪ್ಪ ಹಾಗೂ ದಾಲ್ಚಿನ್ನಿ
    ಜೇನುತುಪ್ಪ ಹಾಗೂ ದಾಲ್ಚಿನ್ನಿಯಲ್ಲಿ ಬ್ಯಾಕ್ಟೀರಿಯಾಗಳನ್ನು ವಿರೋಧಿಸುವ ಶಕ್ತಿಯಿದ್ದು, ಇವು ಹಲ್ಲಿನ ವಸಡನ್ನು ಬಲಪಡಿಸುವುದರ ಜತೆಗೆ ಬಾಯಲ್ಲಿ ಹೆಚ್ಚು ಬ್ಯಾಕ್ಟೀರಿಯಾ ಬೆಳೆಯದಂತೆ ನಿಯಂತ್ರಿಸುತ್ತದೆ.

    ಉಪ್ಪುನೀರು
    ಒಂದು ಲೋಟ ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಬೆರೆಸಿ, ದಿನಾಲೂ ಬಾಯಿ ಮುಕ್ಕಳಿಸುವುದರಿಂದ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ.ಅಲ್ಲದೆ, ಇದು ಸ್ವಲ್ಪ ಗಂಟಲಿನಲ್ಲಿ ಕಿರಿಕಿರಿ ಅಥವಾ ಗಂಟಲು ನೋವು ನಿಯಂತ್ರಣ ಮಾಡುತ್ತದೆ.

    ದಾಲ್ಚಿನ್ನಿಯ ತೊಗಟೆ
    ದಾಲ್ಚಿನ್ನಿಯ ಸಣ್ಣ ತುಣುಕನ್ನು ಸ್ವಲ್ಪ ಸಮಯ ಬಾಯಲ್ಲಿಟ್ಟುಕೊಂಡು ಇದನ್ನ ಉಗಿಯಬೇಕು. ಮಸಾಲೆ ಪದಾರ್ಥವಾದ ದಾಲ್ಚಿನ್ನಿ ದುರ್ವಾಸನೆಯನ್ನು ಬೀರುವ ರೋಗಾಣುಗಳನ್ನು ನಿವಾರಣೆ ಮಾಡುತ್ತದೆ.

    ಜತೆಗೆ ಊಟದ ಬಳಿಕ ಒಂದು ಚಮಚ ಜೀರಿಗೆ ಸೇವನೆ ಮಾಡಿ, ಇದರಿಂದ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ. ಕಿತ್ತಳೆ, ಕಿವಿ, ಸ್ಟ್ರಾಬೆರಿ, ಅನಾನಸ್ ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳನ್ನು ತಿಂದರೆ ಬಾಯಿ ದುರ್ವಾಸನೆ ಬರುವುದಿಲ್ಲ.
    ಒಂದು ಚಮಚ ಸೋಂಪು ಕಾಳು ತಿಂದರೆ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ.ಊಟದ ನಂತರ ಒಂದು ಅಥವಾ ಎರಡು ತಾಜಾ ಪುದೀನಾ ಅಥವಾ ತುಳಸಿ ಎಲೆಗಳನ್ನು ಅಗಿಯಿರಿ.(ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts