More

    ಗೃಹ ನಿರ್ಮಾಣಕ್ಕೆ 5 ಸಾವಿರ ಕೋಟಿ ರೂಪಾಯಿ ; ಗೃಹಸಚಿವ ಬಸವರಾಜ ಬೊಮ್ಮಾಯಿ

    ಕೊರಟಗೆರೆ: ಪೊಲೀಸ್ ಇಲಾಖೆಯ ಗೃಹ ನಿರ್ಮಾಣಕ್ಕೆ 5 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದ್ದು, 2025ರೊಳಗೆ ಶೇ.75 ನಿರ್ಮಾಣವಾಗಲಿದೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಪಟ್ಟಣದಲ್ಲಿ 1.50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಜನಸ್ನೇಹಿ ಪೊಲೀಸ್ ಠಾಣೆ ಕಟ್ಟಡವನ್ನು ಬುಧವಾರ  ಸಿ ಮಾತನಾಡಿದರು. ಇತರ ರಾಜ್ಯಗಳಿಗಿಂತ ಅತಿಹೆಚ್ಚು ಠಾಣೆ ಮತ್ತು ವಸತಿಗೃಹವನ್ನು ಕರ್ನಾಟಕ ಹೊಂದಿದ್ದು, ಕಾನೂನು ಸುವ್ಯವಸ್ಥೆಗೆ ಅನುಕೂಲವಾಗುವಂತೆ ಸುಸಜ್ಜಿತ ಠಾಣೆ ಅಭಿವೃದ್ಧಿಪಡಿಸಲಾಗುವುದು ಎಂದರು.

    ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ, ಕೊರಟಗೆರೆ ಠಾಣೆ, ಸಿಪಿಐ ಠಾಣೆ ಮತ್ತು 12 ವಸತಿಗೃಹ ಇರುವ ಜಯಮಂಗಳಿ ಕಟ್ಟಡ ನಿರ್ಮಾಣಕ್ಕಾಗಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 3.75 ಕೋಟಿ ರೂಪಾಯಿ ಅನುದಾನ ಬಂದಿದೆ. ಆಧುನೀಕರಣಗೊಂಡಿರುವ ಠಾಣೆ ಜತೆಗೆ ಪೊಲೀಸರು ಜನಸ್ನೇಹಿಗಳಾಗಿ ಕೆಲಸ ಮಾಡಬೇಕಾಗಿದೆ ಎಂದರು.

    ಗಡಿಭಾಗದ ಜನಸಾಮಾನ್ಯರ ಬೇಡಿಕೆಯಂತೆ 2016-17ನೇ ಸಾಲಿನಲ್ಲಿ ಕೋಳಾಲ ಭಾಗಕ್ಕೆ ಪ್ರತ್ಯೇಕ ಠಾಣೆಗೆ ಜಾಗ ಗುರುತಿಸಿ 5.70 ಕೋಟಿ ರೂಪಾಯಿ ವೆಚ್ಚದ ಠಾಣೆ ಮತ್ತು 24 ವಸತಿ ಗೃಹಗಳಿರುವ ಸುಸಜ್ಜಿತ ಎರಡು ಬ್ಲಾಕ್‌ನ ಕಟ್ಟಡ ಉದ್ಘಾಟನೆಗೊಂಡಿದೆ. ಕೊರಟಗೆರೆ ಪೊಲೀಸರ ಅನುಕೂಲಕ್ಕಾಗಿ ಒಟ್ಟು 10.40 ಕೋಟಿ ರೂಪಾಯಿ ಅನುದಾನದ ಕಟ್ಟಡ ನಿರ್ಮಾಣವಾಗಿವೆ ಎಂದು ಮಾಹಿತಿ ನೀಡಿದರು.
    ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಮಾಜಿ ಸಚಿವ ಶಿವಣ್ಣ, ಕೊರಟಗೆರೆ ಠಾಣೆ ಉದ್ಘಾಟಿಸಿ, ಠಾಣೆಯ ಒಳಾಂಗಣ ಮತ್ತು ಮೇಲ್ಛಾವಣಿ ಪರಿಶೀಲಿಸಿದರು.

    ನಂತರ ಠಾಣೆಯ ಆವರಣದಲ್ಲಿ ಮೂರು ಕಡೆ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕರ್ನಾಟಕ ಎಡಿಜಿಪಿ ಅಮರ್‌ಕುಮಾರ್‌ಪಾಂಡೆ, ಆರಕ್ಷಕ ಮಹಾನಿರೀಕ್ಷಕ ಶರತ್‌ಚಂದ್ರ, ಜಿಪಂ ಸದಸ್ಯ ಶಿವರಾಮಯ್ಯ, ಎಸ್‌ಪಿ ಡಾ.ಕೆ.ವಂಶಿಕೃಷ್ಣ, ಮಧುಗಿರಿ ಡಿವೈಎಸ್ಪಿ ಪ್ರವೀಣ್, ಸಿಪಿಐ ನದಾಫ್, ಪಿಎಸೈ ಮುತ್ತುರಾಜು, ನವೀನ್, ಗುತ್ತಿಗೆದಾರ ಶ್ರೀನಿವಾಸ್ ಎಂ.ವಿ., ಜಿಲ್ಲಾ ಕಾಂಗ್ರೆಸ್ ಕಾರ‌್ಯದರ್ಶಿ ದಿನೇಶ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆಶಂಕರ್, ಅಶ್ವತ್ಥನಾರಾಯಣ್, ಬಿಜೆಪಿ ತಾಲೂಕು ಅಧ್ಯಕ್ಷ ಎಸ್.ಪವನಕುಮಾರ್ ಇದ್ದರು.

    ಮಲ್ಲಿಕಾರ್ಜುನ ಖರ್ಗೆಗೆ ಬೆದರಿಕೆ ಕರೆ ಬಂದಿರುವ ಬಗ್ಗೆ ತನಿಖೆ ನಡೆಯುತ್ತಿದ್ದು, ಐಜಿ ತನಿಖೆಯ ನೇತೃತ್ವ ವಹಿಸಿದ್ದಾರೆ. ಸಂಪೂರ್ಣ ತನಿಖೆಯಾದ ನಂತರ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.
    ಬಸವರಾಜ ಬೊಮ್ಮಾಯಿ ಗೃಹಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts