More

    ಲೋಕಾಯುಕ್ತ ಬಲೆಗೆ ಬಿದ್ದ ಗೃಹರಕ್ಷಕ; ನಿವೃತ್ತ ಇನ್‌ಸ್ಪೆಕ್ಟರ್​​​ಗೆ ವೈದ್ಯಕೀಯ ವೆಚ್ಚ ಕೊಡಿಸಲು ಲಂಚ ಪಡೆಯುವಾಗ ಬಂಧನ

    ಬೆಂಗಳೂರು: ನಿವೃತ್ತ ಇನ್‌ಸ್ಪೆಕ್ಟರ್ ಅವರ ವೈದ್ಯಕೀಯ ಬಿಲ್ ಕೊಡಿಸುವುದಾಗಿ ನಂಬಿಸಿ 20 ಸಾವಿರ ರೂ. ಲಂಚ ಪಡೆಯುತ್ತಿದ್ದ ಗೃಹ ರಕ್ಷಕನನ್ನು ಲೋಕಾಯುಕ್ತ ಪೊಲೀಸರು ರೆಡ್‌ಹ್ಯಾಂಡೆಡ್​ ಆಗಿ ಬಂಧಿಸಿದ್ದಾರೆ.

    ಗೃಹ ಇಲಾಖೆ ಸಚಿವಾಲಯದಲ್ಲಿ ನಿಯೋಜಿತ ಗೃಹ ರಕ್ಷಕ ಸತೀಶ್ ಬಂಧಿತ. ನಿವೃತ್ತ ಇನ್‌ಸ್ಪೆಕ್ಟರ್ ಪಿ.ಎನ್. ಗಣೇಶ್ ಅವರು ತಮ್ಮ ವೈದ್ಯಕೀಯ ವೆಚ್ಚದ ಮರುಪಾವತಿಗಾಗಿ ಗೃಹ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ವಿಷಯ ತಿಳಿದ ಗೃಹ ರಕ್ಷಕ ಸತೀಶ್, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಬಿಲ್ ಮೊತ್ತ ಕೊಡಿಸುವುದಾಗಿ ನಂಬಿಸಿ 20 ಸಾವಿರ ರೂಪಾಯಿ ಲಂಚ ನೀಡುವಂತೆ ಬೇಡಿಕೆ ಒಡ್ಡಿದ್ದ.

    ಇದರಿಂದ ಬೇಸತ್ತ ನಿವೃತ್ತ ಇನ್‌ಸ್ಪೆಕ್ಟರ್, ಈ ಬಗ್ಗೆ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದರು. ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತ ಪೊಲೀಸರು, ದೂರು ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದಿದ್ದರು. ಮಂಗಳವಾರ ಗೃಹ ಇಲಾಖೆ ಕಚೇರಿಯಲ್ಲಿ ದೂರುದಾರ ಗಣೇಶ್ ಅವರಿಂದ 20 ಸಾವಿರ ರೂ. ಲಂಚ ಪಡೆಯುತ್ತಿದ್ದ ಸತೀಶ್‌ನನ್ನು ಸ್ಥಳದಲ್ಲಿಯೇ ಟ್ರ್ಯಾಪ್ ಮಾಡಿದ ಲೋಕಾಯುಕ್ತ ಪೊಲೀಸರು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

    ಗೃಹಪ್ರವೇಶದ ಮರುದಿನವೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ; ಮಗಳಿಂದಲೇ ಅಂತಿಮಸಂಸ್ಕಾರ..

    ಹಗಲಲ್ಲೇ ಪಾನಮತ್ತನಾಗಿ ಬೈಕ್ ಓಡಿಸಿ ಪಾದಚಾರಿಗೆ ಗುದ್ದಿದ; ಮಹಿಳೆ ಸಾವು, ಸವಾರನ ಸ್ಥಿತಿಯೂ ಗಂಭೀರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts