More

    ಶಬರಿಮಲೆ ಯಾತ್ರಾರ್ಥಿಗಳ ಗಮನಕ್ಕೆ: 2 ವಾರಕ್ಕೆ ಮೊದಲು ಹೀಗೆ ಮಾಡಿ; ಆರೋಗ್ಯ ಇಲಾಖೆಯಿಂದ ಮಹತ್ವದ ಸಲಹೆ

    ಬೆಂಗಳೂರು: ರಾಜ್ಯದಿಂದ ಶಬರಿಮಲೆಗೆ ತೆರಳಲಿರುವ ಶ್ರೀಅಯ್ಯಪ್ಪ ಸ್ವಾಮಿ ಭಕ್ತಾದಿಗಳಿಗೆ ಆರೋಗ್ಯ ಇಲಾಖೆ ಮಹತ್ವದ ಸಲಹೆಯೊಂದನ್ನು ನೀಡಿದ್ದು, ಎಚ್ಚರಿಕೆ ವಹಿಸಬೇಕು ಎಂಬ ಕಿವಿಮಾತನ್ನೂ ಹೇಳಿದೆ. ಉಸಿರಾಟದ ತೊಂದರೆ, ಹೃದ್ರೋಗ, ಅಸ್ತಮಾ ಸೇರಿ ಗಂಭೀರ ಅನಾರೋಗ್ಯ ಸಮಸ್ಯೆ ಹೊಂದಿರುವವರು ಬೆಟ್ಟ ಏರಬಾರದು ಎಂದು ಶಬರಿಮಲೆ ಯಾತ್ರಾರ್ಥಿಗಳಿಗೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.

    ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಗಂಟಲು ನೋವಿನಂತಹ ರೋಗ ಲಕ್ಷಣಗಳನ್ನು ಹೊಂದಿರುವ ಯಾತ್ರಾರ್ಥಿಗಳು ಹೆಚ್ಚು ಪ್ರಯಾಣ ಮಾಡಬಾರದು. ಮಧುಮೇಹ, ಅಧಿಕ ರಕ್ತದೊತ್ತಡ ಸೇರಿ ವಿವಿಧ ಕಾಯಿಲೆಗಳನ್ನು ಹೊಂದಿರುವವರು ವೈದ್ಯರು ಸೂಚಿಸಿದ ಔಷಧಗಳು ಮತ್ತು ಚಿಕಿತ್ಸಾ ದಾಖಲೆಗಳನ್ನು ತಮ್ಮೊಂದಿಗೆ ಸದಾ ಹೊಂದಿರಬೇಕು ಎಂದು ಇಲಾಖೆ ಸೂಚಿಸಿದೆ.

    ತೀರ್ಥಯಾತ್ರೆಯ ಸಮಯದಲ್ಲಿ ನಿಯಮಿತವಾಗಿ ಔಷಧಗಳನ್ನು ಸೇವಿಸಬೇಕು. ಆರೋಗ್ಯಕ್ಕೆ ಸಂಬಂಧಿತ ಸಮಸ್ಯೆ ಇರುವ ಯಾತ್ರಾರ್ಥಿಗಳು ತೀರ್ಥಯಾತ್ರೆಗೆ ಮುಂಚಿತವಾಗಿ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಬೆಟ್ಟ ಏರಲಿಕ್ಕೆ ದೈಹಿಕ ಸದೃಢತೆಯನ್ನು ಹೊಂದಲು ಯಾತ್ರೆಯ ಎರಡು ವಾರ ಮೊದಲು ದಿನಕ್ಕೆ ಕನಿಷ್ಠ ಅರ್ಧ ಗಂಟೆ ಓಟ ಅಥವಾ ನಡಿಗೆ ರೂಢಿಸಿಕೊಳ್ಳುವುದು ಉತ್ತಮ ಎಂದು ಇಲಾಖೆ ತಿಳಿಸಿದೆ.

    ರಾಜ್ಯದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ; ವಸತಿ ನಿಲಯದಲ್ಲೇ ಸಾವು..

    23 ವರ್ಷಗಳ ಕಾಲ ನಾಪತ್ತೆಯಾಗಿದ್ದ ತಂದೆ; ಸತ್ತು ಹೋಗಿದ್ದರೆಂದು ಭಾವಿಸಿದ್ದ ಮಕ್ಕಳಿಗೆ ಕೊನೆಗೂ ಸಿಕ್ಕ ಅಪ್ಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts