More

    ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ನಗಾಲ್ ಗೆಲುವಿನ ಆರಂಭ

    ಬೆಂಗಳೂರು: ಆತಿಥೇಯ ಭಾರತದ ಅಗ್ರ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಗೆಲುವಿನ ಆರಂಭ ಕಂಡಿದ್ದಾರೆ. ಡಬಲ್ಸ್‌ನಲ್ಲಿ ಭಾರತದ ಸಾಯಿ ಕಾರ್ತಿಕ್-ಮನೀಷ್ ಸುರೇಶ್ ಕುಮಾರ್ ಜೋಡಿ ಮೊದಲ ಸುತ್ತಿನಲ್ಲೇ ಸೋಲುಂಡಿತು.
    ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಅಂಗಣದಲ್ಲಿ ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ನ ಆರಂಭಿಕ ಸುತ್ತಿನಲ್ಲಿ ವಿಶ್ವ ನಂ.98 ಸುಮಿತ್ ನಗಾಲ್ 6-2, 6-2 ನೇರಸೆಟ್‌ಗಳಿಂದ ್ರಾನ್ಸ್‌ನ ಜಾಫ್ರಿ ಬ್ಲಾಂಕಾನಿಯಾಕ್ಸ್ ವಿರುದ್ಧ ಸುಲಭ ಗೆಲುವು ಒಲಿಸಿಕೊಂಡರು. ಇದರೊಂದಿಗೆ ್ರಾನ್ಸ್ ಆಟಗಾರನ ಎದುರಿನ ಅಜೇಯ ದಾಖಲೆಯನ್ನು ವಿಸ್ತರಿಸಿದರು. ಕಳೆದ ತಿಂಗಳು ಆಸ್ಟ್ರೇಲಿಯನ್ ಓಪನ್ ಗ್ರಾಂಡ್ ಸ್ಲಾಂ ಕ್ವಾಲಿೈಯರ್ ಸುತ್ತಿನ ಮೊದಲ ಪಂದ್ಯದಲ್ಲೂ ಜಾಫ್ರಿ ಎದುರು ನಗಾಲ್ ಜಯದ ನಗೆ ಬೀರಿದ್ದರು.

    https://x.com/BlrTennisOpen/status/1757402458429485100?s=20

    2014ರ ವಿಂಬಲ್ಡನ್ ಡಬಲ್ಸ್ ಚಾಂಪಿಯನ್ ಕೆನಡದ ಪೊಸ್ಪಿಸಿಲ್ ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ 7-6 (2), 3-6, 6-4 ಸೆಟ್‌ಗಳಿಂದ ಯೂಕ್ರೇನ್‌ನ ಎರಿಕ್ ವಾನ್ಶೆಲ್ಬೋಯಿಮ್ ಅವರನ್ನು ಮಣಿಸಿದರು. ಅಗ್ರ ಶ್ರೇಯಾಂಕಿತ ಇಟಲಿಯ ಲುಕಾ ನಾರ್ಡಿ 3-6, 6-3, 7-6ರಿಂದ ್ರಾನ್ಸ್‌ನ ಡಾನ್ ಆಡೆಡ್ ವಿರುದ್ಧ ಗೆದ್ದು ಎರಡನೇ ಸುತ್ತಿಗೆ ಪ್ರವೇಶಿಸಿದರು. ದಿನದ ಮತ್ತೊಂದು ಪಂದ್ಯದಲ್ಲಿ ್ರಾನ್ಸ್‌ನ ಬೆಂಜಮಿನ್ ಬೋನ್‌ಜಿ 6-3, 6-2 ರಿಂದ ಆಸ್ಟ್ರೇಲಿಯಾದ ಫಿಲ್ಿ ಸಿಕುಲಿಕ್ ಅವರನ್ನು ಮಣಿಸಿದರು.

    https://x.com/BlrTennisOpen/status/1757396955595190675?s=20

    ಇಟಲಿಯ ಎನ್‌ರಿಕ್ ಡಲ್ಲ ವಾಲೆ 6-2, 7-5 ರಿಂದ ಎವ್ಗೆನಿ ಡಾನ್ಸ್ಕೊಯ್ ಎದುರು ಗೆದ್ದು ಬೀಗಿದರು. ಇಟಲಿಯ ಅಲೆಕ್ಸಿ ಜಖರೋವ್, ಸ್ಯಾಮ್ಯುಯೆಲ್ ವಿನ್ಸೆಂಟ್ ರುಗ್ಗೆರಿ ವಿರುದ್ಧ 6-2, 7-5 ರಿಂದ ಜಯ ಸಾಧಿಸಿದರು. ಕೊರಿಯಾದ ಸಿಯೊಂಗ್ ಚಾನ್ ಹಂಗ್ 6-4. 6-3 ರಿಂದ ಆಸ್ಟ್ರೇಲಿಯಾದ ಟ್ರಿಸ್ಟನ್ ಸ್ಕೂಲ್‌ಕೆಟ್ ಅವರನ್ನು ಪರಾಭವಗೊಳಿಸಿ ಮುಂದಿನ ಸುತ್ತಿಗೆ ಲಗ್ಗೆಯಿಟ್ಟರು.
    ಅಮೆರಿಕದ ಟ್ರಿಸ್ಟನ್ ಬೋಯರ್ 3-6, 6-3, 6-3 ರಿಂದ ಹಿನ್ನಡೆಯನ್ನು ಮೆಟ್ಟಿನಿಂತು ಆಸ್ಟ್ರೇಲಿಯಾದ ಬೆರ್ನಾಡ್ ಟಾಮಿಕ್ ವಿರುದ್ಧ ಜಯಶಾಲಿಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts