More

    ಮರ ಆಯ್ತು, ಈಗ ಮನೆಯೇ ಸ್ಥಳಾಂತರ!: ಕನಸಿನ ಸೂರಿಗೆ ಹೈವೇ ವಿಘ್ನ, ಹಾನಿಯಾದ್ರೆ ಕಂಪನಿಯೇ ಹೊಣೆ

    ಮಂಡ್ಯ: ರಸ್ತೆ ಕಾಮಗಾರಿ, ವಾಸ್ತು ಕಾರಣಗಳಿಗಾಗಿ ದೊಡ್ಡ ದೊಡ್ಡ ಮರ, ದೇಗುಲಗಳನ್ನು ಅಡಿಪಾಯದ ಸಮೇತ ಲಿಫ್ಟ್ ಮಾಡುವುದು ಹೊಸತೇನಲ್ಲ. ಆದರೆ ಇಲ್ಲೊಬ್ಬರು ಬೈಪಾಸ್ ನಿರ್ವಣದ ಕಾರಣದಿಂದಾಗಿ ತನ್ನ ಕನಸಿನ ಮನೆಯನ್ನೇ 20 ಲಕ್ಷ ರೂ. ವೆಚ್ಚ ಮಾಡಿ ಸ್ಥಳಾಂತರಿಸುವ ಕಾರ್ಯಕ್ಕೆ ಕೈಹಾಕಿದ್ದಾರೆ.

    ಕೋಣನಹಳ್ಳಿಯ ಮಲ್ಲಿಕಾರ್ಜುನ್ 5 ವರ್ಷದ ಹಿಂದೆ ವಿ.ಸಿ.ಫಾರಂ ಮಾರ್ಗಮಧ್ಯೆ 36 ಚದರ ಅಡಿಯಲ್ಲಿ ಮನೆ ಕಟ್ಟಿಕೊಂಡು ವಾಸವಿದ್ದಾರೆ. ಮೇಲಂತಸ್ತಿನಲ್ಲಿ 2 ಚಿಕ್ಕ ಮನೆಗಳನ್ನು ಕಟ್ಟಿ ಬಾಡಿಗೆಗೆ ಕೊಟ್ಟಿದ್ದಾರೆ. ಆದರೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ತಗ್ಗಿಸುವ ಉದ್ದೇಶದಿಂದ ಆರಂಭವಾಗಿರುವ ಬೈಪಾಸ್ ರಸ್ತೆ ಅಗಲೀಕರಣ ಕಾಮಗಾರಿಯಿಂದಾಗಿ ಮನೆಯ ಅರ್ಧ ಭಾಗವನ್ನೇ ಒಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಹೊಸ ಮನೆ ಕಟ್ಟಲು ಲಕ್ಷಾಂತರ ರೂ.ವೆಚ್ಚವಾಗುವುದಲ್ಲದೆ ಗುಣಮಟ್ಟದ ಮರಳು ಸಿಗುವುದೂ ಕಷ್ಟ. ಹೀಗಾಗಿ ಲಿಫ್ಟಿಂಗ್ ಯೋಜನೆ ರೂಪಿಸಿದ ಮಲ್ಲಿಕಾರ್ಜುನ್ ಹರಿಯಾಣ ಮೂಲದ ಕಂಪನಿ ಮೊರೆ ಹೋಗಿದ್ದಾರೆ.

    2 ತಿಂಗಳಿನಿಂದ ಕೆಲಸ

    20 ಲಕ್ಷ ರೂ. ವೆಚ್ಚದಲ್ಲಿ ಮನೆ ಲಿಫ್ಟಿಂಗ್ ಮಾಡಲು ಜತೆ ಒಪ್ಪಂದವಾದ ಬಳಿಕ ಕೆಲಸ ಆರಂಭವಾಗಿದೆ. 2 ತಿಂಗಳಿನಲ್ಲಿ ಮನೆಯನ್ನು 3 ಅಡಿ ಎತ್ತರಿಸಲಾಗಿದೆ. ಇನ್ನು ಹದಿನೈದು ದಿನದಲ್ಲಿ ಕಾಂಪೌಂಡ್ ಹೊರತುಪಡಿಸಿ 45 ಅಡಿ ಹಿಂದಕ್ಕೆ ಮತ್ತು 20 ಅಡಿ ಪಕ್ಕಕ್ಕೆ ಲಿಫ್ಟ್ ಮಾಡಲಾಗುತ್ತದೆ.

    ಮನೆ ಒಡೆಯಲು ಇಷ್ಟವಾಗಲಿಲ್ಲ. ಆದ್ದರಿಂದ, ಲಿಫ್ಟಿಂಗ್ ಮಾಡಿಸಲು ತೀರ್ವನಿ ಸಲಾಯಿತು.

    | ಮಲ್ಲಿಕಾರ್ಜುನ್ ಮನೆ ಮಾಲೀಕ

    ಮುದ್ದಿನ ಮನೆ ಲಿಫ್ಟಿಂಗ್

    ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಕಾಲದಲ್ಲಿ ನಿರ್ವಣವಾಗಿದ್ದ ಮುದ್ದಿನ ಮನೆಯನ್ನು ಬೆಂಗಳೂರು-ಮೈಸೂರು ನಡುವೆ ನಿರ್ಮಾಣವಾಗುತ್ತಿರುವ ಜೋಡಿ ರೈಲ್ವೆ ಮಾರ್ಗಕ್ಕೆ ತೊಂದರೆಯಾಗುತ್ತದೆನ್ನುವ ಕಾರಣಕ್ಕೆ 15 ಮೀಟರ್ ದೂರಕ್ಕೆ ಸ್ಥಳಾಂತರಿಸಲಾಗಿತ್ತು.

    ಡ್ಯಾಮೇಜ್ ಷರತು!

    ಒಪ್ಪಂದದಂತೆ, ಕೆಲಸ ಪ್ರಾರಂಭಕ್ಕೆ ಮುನ್ನ ಆಗಿರುವ ಡ್ಯಾಮೇಜ್ ಹೊರತುಪಡಿಸಿ ಲಿಫ್ಟಿಂಗ್ ಪೂರ್ಣಗೊಳ್ಳುವವರೆಗೆ ಮನೆ ಕಂಪನಿ ವಶದಲ್ಲಿರುತ್ತದೆ. ಈ ವೇಳೆ ಡ್ಯಾಮೇಜ್ ಆದರೆ ಕಂಪನಿಯೇ ಸರಿಪಡಿಸಿಕೊಳ್ಳಬೇಕಿದೆ. ಕಂಪನಿ ಸಿಬ್ಬಂದಿ ಮನೆಯ ಮೇಲ್ಭಾಗದ ಕೊಠಡಿಯಲ್ಲಿ ವಾಸವಿದ್ದಾರೆ.

    | ಕೆ.ಎನ್. ರಾಘವೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts