More

    ಹರಿಪ್ರಿಯಾಗೆ ಹಾಲಿವುಡ್​ ಪ್ರಶಸ್ತಿ

    ಬೆಂಗಳೂರು: ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ನಿರ್ದೇಶನದ “ಅಮೃತಮತಿ’ ಚಿತ್ರವು ಈಗಾಗಲೇ ಸಾಲುಸಾಲು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಇದೀಗ ಆ ಸಾಲಿಗೆ ಮತ್ತೊಂದು ಅವಾರ್ಡ್​ ಸೇರ್ಪಡೆಯಾಗಿದೆ. ಹಾಲಿವುಡ್​ ಅಂತಾರಾಷ್ಟ್ರೀಯ ಗೋಲ್ಡನ್​ ಏಜ್​ ಚಿತ್ರೊತ್ಸವದಲ್ಲಿ ಹರಿಪ್ರಿಯಾ ಅವರಿಗೆ ಶ್ರೇಷ್ಠ ನಟಿ ಪ್ರಶಸ್ತಿ ಸಂದಿದೆ.

    ಈ ಮೊದಲು ನೋಯ್ಡಾದ ಎರಡು ಸಂಸ್ಥೆಗಳು ನಡೆಸಿದ ಪ್ರತ್ಯೇಕ ಅಂತಾರಾಷ್ಟ್ರಿಯ ಚಿತ್ರೋತ್ಸವಗಳಲ್ಲಿಯೂ ಹರಿಪ್ರಿಯಾ ಶ್ರೇಷ್ಠ ನಟಿ ಪ್ರಶಸ್ತಿಗೆ ಭಾಜನರಾಗಿದ್ದರು. “ಅಮೃತಮತಿ’ ಚಿತ್ರ ಇದುವರೆಗೂ 10ಕ್ಕೂ ಅಧಿಕ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿ ಪ್ರದರ್ಶನ ಕಂಡಿದೆ. ಇತ್ತೀಚೆಗಷ್ಟೇ ಲಾಸ್​ ಏಂಜಲಸ್​ ಸನ್​ ಚಿತ್ರೋತ್ಸವದಲ್ಲಿ ಶ್ರೇಷ್ಠ ಚಿತ್ರ ಮತ್ತು ಬರಗೂರರಿಗೆ ಶ್ರೇಷ್ಠ ಚಿತ್ರಕತೆ ಪ್ರಶಸ್ತಿ ಲಭಿಸಿತ್ತು. ಅಟ್ಲಾಂಟ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಚಿತ್ರಕ್ಕೆ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ಪ್ರಶಸ್ತಿ ಬಂದರೆ, 11ನೇ ದಾದಾ ಸಾಹೇಬ್​ ಾಲ್ಕೆ ಚಿತ್ರೋತ್ಸವದಲ್ಲಿ “ವಿಶೇಷ ಚಿತ್ರ’ ಎಂಬ ಮನ್ನಣೆಗೆ ಪಾತ್ರವಾಗಿದೆ.

    “ಅಮೃತಮತಿ’ಯು 13ನೇ ಶತಮಾನದ ಕನ್ನಡ ಕವಿ ಜನ್ನನ “ಯಶೋಧರ ಚರಿತೆ’ ಕಾವ್ಯವನ್ನು ಆಧರಿಸಿದೆ. ಈ ಕಾವ್ಯವನ್ನಾಧರಿಸಿ ಬರಗೂರು ರಾಮಚಂದ್ರಪ್ಪ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹರಿಪ್ರಿಯಾ, ಕಿಶೋರ್​, ಸುಂದರ್​ರಾಜ್​, ವತ್ಸಲಾ ಮೋಹನ್​ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಶಮಿತಾ ಮಲ್ನಾಡ್​ ಸಂಗೀತ ಈ ಚಿತ್ರಕ್ಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts