More

    ಸದ್ಗುಣ ಬೆಳೆಸಿಕೊಳ್ಳಲು ಹೋಳಿಹಬ್ಬ ಪ್ರೇರಕ

    ಸೊರಬ: ಹಬ್ಬ ಹರಿದಿನಗಳಿಗೆ ವಿಶೇಷ ಮಹತ್ವವಿದ್ದು, ಅವುಗಳು ನಮ್ಮ ಜೀವನಕ್ಕೆ ಹೊಸ ಚೈತನ್ಯ ನೀಡುತ್ತವೆ ಎಂದು ಶಿರಸಿಯ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿದ್ಯಾಲಯದ ವೀಣಕ್ಕ ಹೇಳಿದರು.
    ಪಟ್ಟಣದ ಚಿಕ್ಕಪೇಟೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೋಳಿ ಹುಣ್ಣಿಮೆ, ಮಹಿಳಾ ದಿನಾಚರಣೆ ಮತ್ತು ವಿಮಲಕ್ಕ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಸಮಾಜದಲ್ಲಿ ಪ್ರತಿಯೊಬ್ಬರೂ ತಮ್ಮೊಳಗಿನ ದುರ್ಗುಣಗಳನ್ನು ತೊರೆದು ಸದ್ಗುಣ ಬೆಳೆಸಿಕೊಳ್ಳಲು ಹೋಳಿ ಹುಣ್ಣಿಮೆಯಂತಹ ಹಬ್ಬಗಳು ಪ್ರೇರಕ. ಮರೆಯಾಗುತ್ತಿರುವ ಸಂಸ್ಕಾರವನ್ನು, ಮಾನವತ್ವದ ಗುಣವನ್ನು ಮತ್ತು ಆತ್ಮಬಲದ ವಿಶ್ವಾಸವನ್ನು ಜನರಲ್ಲಿ ಜಾಗೃತಗೊಳಿಸುವುದು ವಿದ್ಯಾಲಯದ ಮುಖ್ಯ ಉದ್ದೇಶ ಎಂದರು.
    ದಂತ ವೈದ್ಯ ಡಾ. ಜ್ಞಾನೇಶ್ ಮಾತನಾಡಿ, ಹಿಂದು ಪರಂಪರೆಯಲ್ಲಿ ಹೆಣ್ಣಿಗೆ ವಿಶೇಷ ಗೌರವವಿದ್ದು ಭೂಮಿ, ನದಿ, ಸರೋವರಗಳಿಗೆ ಹೋಲಿಸಲಾಗಿದೆ. ಭಾವನೆಗಳ ಶಕ್ತಿ ಸ್ವರೂಪಿಣಿ ಎಂದು ಬಣ್ಣಿಸಬಹುದು ಎಂದು ಹೇಳಿದರು.

    ಉದ್ಯಮಿ ನಾಗರಾಜ್ ಗುತ್ತಿ ಮಾತನಾಡಿ, ಲೌಕಿಕ ಜೀವನದ ಸಂಸ್ಕಾರವನ್ನು ಬಿತ್ತುವ ಕಾರ್ಯದಲ್ಲಿ ತಾಯಿ ಪಾತ್ರ ಹಿರಿದು ಎಂದರು. ಬ್ರಹ್ಮಕುಮಾರಿಯರಾದ ಅನಸೂಯಾ, ವೀಣಾ, ಸುರೇಖಾ, ಸ್ನೇಹಾ, ಸುಹಾಸಿನಿ, ಜ್ಯೋತಿ, ಅನ್ನಪೂರ್ಣ, ಲತಾ, ಸರಸ್ವತಿ ನಾವುಡ, ಶಾಂತಮ್ಮ, ಜಯಮಾಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts