More

    ಹಾಲಿ ಚಾಂಪಿಯನ್ ವಿಂಡೀಸ್ ತಂಡವನ್ನು ಟಿ20 ವಿಶ್ವಕಪ್‌ನಿಂದ ಹೊರದಬ್ಬಿದ ಶ್ರೀಲಂಕಾ

    ಅಬುಧಾಬಿ: ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಶ್ರೀಲಂಕಾ ವಿರುದ್ಧ 20 ರನ್‌ಗಳಿಂದ ಸೋಲು ಕಾಣುವುದರೊಂದಿಗೆ ಟಿ20 ವಿಶ್ವಕಪ್ ಟೂರ್ನಿಯಿಂದ ಗುರುವಾರ ಅಧಿಕೃತವಾಗಿ ಹೊರಬಿದ್ದಿದೆ. ಇದರೊಂದಿಗೆ, ಅರಬ್ ನಾಡಿನಲ್ಲಿ ನಡೆಯುತ್ತಿರುವ 7ನೇ ಆವೃತ್ತಿಯ ಚುಟುಕು ಕ್ರಿಕೆಟ್ ಮಹಾಸಮರದಲ್ಲಿ ಹೊಸ ಚಾಂಪಿಯನ್ ಉದಯವಾಗುವುದು ಖಚಿತಗೊಂಡಿದೆ.

    ಜಯೆದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಲಂಕಾ ತಂಡ, ಚರಿತ್ ಅಸಲಂಕಾ (68 ರನ್, 41 ಎಸೆತ, 8 ಬೌಂಡರಿ, 1 ಸಿಕ್ಸರ್), ಪಥುಮ್ ನಿಸ್ಸಂಕಾ (51 ರನ್, 41 ಎಸೆತ, 5 ಬೌಂಡರಿ) ಬಿರುಸಿನ ಬ್ಯಾಟಿಂಗ್ ನೆರವಿನಿಂದ 3 ವಿಕೆಟ್‌ಗೆ 189 ರನ್ ಪೇರಿಸಿತು. ಪ್ರತಿಯಾಗಿ ವಿಂಡೀಸ್ ತಂಡ, ಶಿಮ್ರೊನ್ ಹೆಟ್ಮೆಯರ್ (81*ರನ್, 54 ಎಸೆತ, 8 ಬೌಂಡರಿ, 4 ಸಿಕ್ಸರ್) ಏಕಾಂಗಿ ಹೋರಾಟದ ನಡುವೆಯೂ 8 ವಿಕೆಟ್‌ಗೆ 169 ರನ್ ಗಳಿಸಲಷ್ಟೇ ಶಕ್ತವಾಯಿತು. ಈಗಾಗಲೆ ಸೆಮೀಸ್ ರೇಸ್‌ನಿಂದ ಹೊರಬಿದ್ದಿದ್ದ ಲಂಕಾ ಸಮಾಧಾನಕ ಜಯದೊಂದಿಗೆ ನಿರ್ಗಮಿಸಿದರೆ, 3ನೇ ಸೋಲಿನೊಂದಿಗೆ ವಿಂಡೀಸ್ ಕೂಡ 3ನೇ ಬಾರಿ ಪ್ರಶಸ್ತಿ ಗೆಲ್ಲುವ ಆಸೆ ಕೈಚೆಲ್ಲಿತು.

    ಕುಸಲ್ ಪೆರೇರ (29) ಜತೆ ಮೊದಲ ವಿಕೆಟ್‌ಗೆ 42 ರನ್ ಸೇರಿಸುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟ ನಿಸ್ಸಂಕಾ ಬಳಿಕ ಅಸಲಂಕಾ ಜತೆಗೂಡಿ 2ನೇ ವಿಕೆಟ್‌ಗೆ 91 ರನ್ ಜತೆಯಾಟವಾಡಿದರು. ಸ್ಲಾಗ್ ಓವರ್‌ಗಳಲ್ಲಿ ಅಸಲಂಕಾ, ನಾಯಕ ಶನಕ (25*ರನ್, 14 ಎಸೆತ, 2 ಬೌಂಡರಿ, 1 ಸಿಕ್ಸರ್) ಜತೆಗೂಡಿ 19 ಎಸೆತಗಳಲ್ಲಿ 46 ರನ್ ದೋಚುವ ಮೂಲಕ ತಂಡದ ಮೊತ್ತವನ್ನು 180ರ ಗಡಿ ದಾಟಿಸಿದರು. ಲಂಕಾ ಕೊನೇ 5 ಓವರ್‌ಗಳಲ್ಲಿ 57 ರನ್ ಸೂರೆಗೈದಿತು.

    ಶ್ರೀಲಂಕಾ: 3 ವಿಕೆಟ್‌ಗೆ 189 (ನಿಸ್ಸಂಕಾ 51, ಕುಸಲ್ ಪೆರೇರ 29, ಅಸಲಂಕಾ 68, ಶನಕ 25*, ರಸೆಲ್ 33ಕ್ಕೆ 2, ಬ್ರಾವೊ 42ಕ್ಕೆ 1). ವೆಸ್ಟ್ ಇಂಡೀಸ್: 8 ವಿಕೆಟ್‌ಗೆ 169 (ಗೇಲ್ 1, ಲೆವಿಸ್ 8, ಪೂರನ್ 46, ಚೇಸ್ 9, ಹೆಟ್ಮೆಯರ್ 81*, ರಸೆಲ್ 2, ಪೊಲ್ಲಾರ್ಡ್ 0, ಹೋಲ್ಡರ್ 8, ಬ್ರಾವೊ 2, ಕರುಣರತ್ನೆ 43ಕ್ಕೆ 2, ಬಿನುರ 24ಕ್ಕೆ 2, ಚಮೀರ 41ಕ್ಕೆ 1, ಶನಕ 18ಕ್ಕೆ 1, ಹಸರಂಗ 19ಕ್ಕೆ 2).

    ಟಿ20 ವಿಶ್ವಕಪ್‌ನಲ್ಲಿ ಗ್ರೂಪ್ ಆಫ್​ ಡೆತ್ ಎನಿಸಿದ 1ನೇ ಗುಂಪಿನಲ್ಲಿ ಸೆಮೀಸ್ ಲೆಕ್ಕಾಚಾರ ಹೇಗಿದೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts