More

    ಸಮಚಿತ್ತ ಬದುಕು ನೆಮ್ಮದಿಗೆ ಹಾದಿ: ನಿವೃತ್ತ ನ್ಯಾಯಮೂರ್ತಿ ಬಿಲ್ಲಪ್ಪ ಅಭಿಪ್ರಾಯ

    ಹೊಳಲ್ಕೆರೆ: ವಿವೇಚನೆಯಿಂದ ಜೀವನ ನಡೆಸಿದಾಗ ಸಾಧನೆ ಮಾಡಲು ಸಾಧ್ಯ. ಯಾವುದರ ಮೇಲೂ ಹೆಚ್ಚು ಅವಲಂಬಿತ ಆಗಬಾರದು. ಕಷ್ಟ, ಸುಖವನ್ನು ಸಮಚಿತ್ತದಿಂದ ಸ್ವೀಕರಿಸಬೇಕೆಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ಹೇಳಿದರು.

    ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ರಕ್ಷಾ ಬಂಧನ ವಿಶಿಷ್ಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಬದುಕಿಗೆ ಮೌಲ್ಯ ಬೇಕು. ಇಲ್ಲಿ ಯಾವುದೂ ಶಾಶ್ವತವಲ್ಲ. ಯಾರೊಬ್ಬರೂ ಇಲ್ಲಿಗೆ ಅನಿವಾರ್ಯವಲ್ಲ. ಭೂಮಿ ಸೂರ್ಯನ ಸುತ್ತಲು ತಿರುಗುತ್ತಿದ್ದಾನೆ ಎನ್ನುವ ಸತ್ಯವನ್ನು ಜಗತ್ತಿಗೆ ಅರ್ಥ ಮಾಡಿಸಲು ವಿಜ್ಞಾನಿಗಳು ನೂರಾರು ವರ್ಷ ಶ್ರಮಿಸಿದ್ದರು. ಕಲ್ಲು ನಾಗರಕ್ಕೆ ಹಾಲು ಹಾಕುವುದು ಎಷ್ಟು ಸರಿ ಎನ್ನುವುದು ಬಸವಣ್ಣ ವಚನದಲ್ಲಿ ಹೇಳಿದ್ದಾರೆ. ಇಂತಹ ಅದೆಷ್ಟೊ ಸತ್ಯ-ಅಸತ್ಯಗಳು ನಮ್ಮ ನಡುವೆ ಇವೆ. ಅವುಗಳ ಆತ್ಮವಲೋಕನ ಆಗಬೇಕು. ನಾವು ಎಲ್ಲರನ್ನು ಪ್ರೀತಿಸಬೇಕು. ಅದು ನಾಟಕ ಆಗಬಾರದು, ಹಸಿವಿದ್ದವನಿಗೆ ಅನ್ನ ನೀಡುವುದು, ರಸ್ತೆಯಲ್ಲಿ ಕುರುಡನಿಗೆ ರಸ್ತೆ ದಾಟಿಸುವುದು ಪ್ರೀತಿ ಎನ್ನುವ ಸಂಕಲ್ಪಬೇಕು ಎಂದರು.

    ವರದಕ್ಷಿಣೆ ವಿಚಾರದಲ್ಲಿ ಇದುವರೆಗೂ ಹುಡುಗನ ಪಾಲಕರು ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆ ಇಲ್ಲ. ಸಮಾಜದಲ್ಲಿ ಸಾಕಷ್ಟು ಹಿಂಸೆ, ಶೋಷಣೆ ಇದೆ ಎಂದು ಹೇಳಿದರು.

    ಹಳೆಯ ವಿದ್ಯಾರ್ಥಿಗಳ ಸಂಘದಿಂದ ಹೊಸದುರ್ಗ ಸರ್ಕಾರಿ ಕಾಲೇಜಿಗೆ 8400 ಪುಸ್ತಕಗಳನ್ನು ಉಚಿತವಾಗಿ ನೀಡಲಾಗಿದೆ. ಅದರ ಫಲವನ್ನು ಎಲ್ಲರೂ ಪಡೆದುಕೊಳ್ಳಲು ಅವಕಾಶವಿದೆ. ಇಲ್ಲಿನ ಪುಸ್ತಕ ಸದ್ಭಳಕೆ ಆಗಬೇಕು. ಅದು ಪುಸ್ತಕ ನೀಡಿದವರ ಕನಸು ಸಾಕಾರವಾಗಲಿದೆ ಎಂದರು.

    ಈಶ್ವರೀಯ ವಿವಿ ಹೊಳಲ್ಕೆರೆ ಶಾಖೆಯ ಸಂಚಾಲಕಿ ಸುಮಿತ್ರಾ, ಹುಬ್ಬಳಿಯ ಮಹಾಲಕ್ಷ್ಮಿ, ಸುನೀಲ್, ರುಕ್ಮಿಣಿ, ವಕೀಲರಾದ ಎಸ್.ವೇದಮೂರ್ತಿ, ಎಸ್.ಜಿ. ರಂಗಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಮೋಹನ್ ನಾಗರಾಜ್, ಜಯಣ್ಣ, ಲಯನ್ ಕ್ಲಬ್ ಅಧ್ಯಕ್ಷ ವಿಜಯಕುಮಾರ್, ಕಾರ್ಯದರ್ಶಿ ಜಾದು ಮೋಹನ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts