More

    ಹೊಳಲ್ಕೆರೆಯಲ್ಲಿ ಮೊದಲ ಬಾರಿಗೆ ಗದ್ದುಗೆ ಏರಿದ ಬಿಜೆಪಿ

    ಹೊಳಲ್ಕೆರೆ: ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಆರ್.ಎ. ಅಶೋಕ್, ಉಪಾಧ್ಯಕ್ಷರಾಗಿ ಕೆ.ಸಿ.ರಮೇಶ್ ಅವಿರೋಧ ಆಯ್ಕೆಯಾಗಿದ್ದು, ಬಿಜೆಪಿ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಏರಿದೆ.

    ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಆರ್.ಎ. ಅಶೋಕ್ ಹಾಗೂ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಕೆ.ಸಿ.ರಮೇಶ್, ಕಾಂಗ್ರೆಸ್‌ನ ಬಿ.ಎಸ್.ರುದ್ರಪ್ಪ, ಪಕ್ಷೇತರ ಸದಸ್ಯೆ ಪೂರ್ಣಿಮಾ, ಬಿಜೆಪಿ ಬಂಡಾಯ ಅಭ್ಯರ್ಥಿ ಡಿ.ಎಸ್.ವಿಜಯ್ ಸ್ಪರ್ಧಿಸಿದ್ದರು.

    ಅಶೋಕ್ ಹಾಗೂ ರಮೇಶ್ ಹೊರತುಪಡಿಸಿ ಉಳಿದವರು ನಾಮಪತ್ರ ಹಿಂಪಡೆದ ಕಾರಣ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.
    ಕಮಲ ಪಾಳಯದ ತಂತ್ರ: ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಶಾಸಕ ಎಂ.ಚಂದ್ರಪ್ಪ, ಸಂಸದ ನಾರಾಯಣಸ್ವಾಮಿ, ಯುವ ಮುಖಂಡ ರಘುಚಂದನ್ ಅವರ ಚರ್ಚೆಯ ಫಲವಾಗಿ ಮೂವರು ಪಕ್ಷೇತರ ಸದಸ್ಯರು ಹಾಉ ಕಾಂಗ್ರೆಸ್ ಪಾಳಯಲ್ಲಿದ್ದ ಪಕ್ಷೇತರ ಸದಸ್ಯೆ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸಿದರು. ಇದರಿಂದ ಆಯ್ಕೆ ಸುಲಭವಾಯಿತು.

    ಮೊದಲು ಸಭೆ, ವಾಗ್ವಾದ: ಚುನಾವಣೆಗೂ ಮೊದಲು ಶಾಸಕ ಎಂ.ಚಂದ್ರಪ್ಪ ನೇತೃತ್ವದಲ್ಲಿ ಸಭೆ ನಡೆಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟು ಬಿಜೆಪಿ ಸದಸ್ಯ ಡಿ.ಎಸ್.ವಿಜಯ್ ಅವರು ನಾಮಪತ್ರ ಸಲ್ಲಿಸಿದರು. ಇದರಿಂದ ಗಲಿಬಿಲಿಗೊಂಡ ಬಿಜೆಪಿ ತಾಲೂಕು ಅಧ್ಯಕ್ಷ ಎಂ.ಬಿ.ಸಿದ್ದೇಶ್ ಹಾಗೂ ವಿಜಯ್ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯ ಪ್ರವೇಶಿಸಿ ಗುಂಪು ಕಟ್ಟಿದ್ದ ಜನರನ್ನು ಚದುರಿಸಿದರು.

    ಈ ನಡುವೆ ಡಿ.ಎಸ್.ವಿಜಯ್ ಬೆಂಬಲಕ್ಕೆ ನಿಂತಿದ್ದ ಸದಸ್ಯೆ ಬಿ.ವಸಂತ ರಾಜ್ ದಿಢೀರ್ ಬಿಜೆಪಿ ಬೆಂಬಲಿಸಿದ್ದರಿಂದ ವಿಜಯ್ ನಾಮಪತ್ರ ಹಿಂದಕ್ಕೆ ಪಡೆದರು. ಸದಸ್ಯರಾದ ಪಿ.ಆರ್.ಮಲ್ಲಿಕಾರ್ಜುನ್, ಪಿ.ಎಚ್.ಮುರುಗೇಶ್, ಸುಧಾ, ಸೈಯದ್ ಸಜೀಲ್, ವಿಜಯಸಿಂಹ ಖಟ್ರೋತ್, ಸವಿತಾ, ಮಮತಾ, ಸೈಯದ್ ಮನ್ಸೂರ್, ಚುನಾವಣಾಧಿಕಾರಿ ರಮೇಶ್ ಆಚಾರ್, ಮುಖ್ಯಾಧಿಕಾರಿ ಎ.ವಾಸಿಂ ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts