More

    ಶಾಲಾವರಣಗಳು ಕುಡಿತದ ಅಡ್ಡೆಗಳು

    ಹೊಳಲ್ಕೆರೆ: ಸೂಕ್ತ ಭದ್ರತೆ ಇಲ್ಲದ ಕಾರಣ ಪಟ್ಟಣದ ಬಹುತೇಕ ಸರ್ಕಾರಿ ಶಾಲೆ ಆವರಣಗಳು ಸಂಜೆ ವೇಳೆಗೆ ಕುಡುಕರ ಅಡ್ಡೆಯಾಗಿ ಪರಿವರ್ತನೆಯಾಗುತ್ತವೆ.

    ಕರೊನಾ ಸೋಂಕು, ಲಾಕ್‌ಡೌನ್ ಕಾರಣ ಕಳೆದ ಎರಡು ತಿಂಗಳಿಂದ ಶಾಲೆಗಳಿಗೆ ರಜೆ. ಜತೆಗೆ ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ ನಿಷೇಧ.

    ಇದರಿಂದ ಕೆಲ ಕಿಡಿಗೇಡಿಗಳು ಶಾಲೆ ಆವರಣವನ್ನೇ ಮದ್ಯ ಸೇವನೆಯ ಅಡ್ಡೆಯನ್ನಾಗಿಕೊಂಡಿದ್ದು, ತ್ಯಾಜ್ಯಗಳನ್ನು ಅಲ್ಲೇ ಬಿಸಾಡಿ ಹೋಗುವುದು ಸಾಮಾನ್ಯವಾಗಿದೆ.

    ಪಟ್ಟಣದ ಹೃದಯ ಭಾಗದಲ್ಲಿರುವ ಹೈಟೆಕ್ ಮಾದರಿ ಶಾಲೆ ಕೂಡ ಇಂತಹ ಚಟುವಟಿಕೆಯಿಂದ ಹೊರತಾಗಿಲ್ಲ. ಶಾಲೆಯ ಪಕ್ಕದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಬಿಆರ್‌ಸಿ ಕಚೇರಿಗಳಿವೆ. ಸಂಜೆ ವೇಳೆ ಶಾಲೆಯ ಆವರಣ ಕುಡುಕರ ತಾಣವಾಗಿ ಪರಿವರ್ತನೆಯಾಗುತ್ತದೆ.

    ಪಟ್ಟಣದ ಕೆಲ ಮದ್ಯದಂಗಡಿಗಳು ಸಮಯ ಪಾಲನೆ ಮಾಡದೇ ಮದ್ಯ ಮಾರಾಟ ಮಾಡುತ್ತಿವೆ. ಕೆಲ ಅಂಗಡಿಗಳಲ್ಲಿ ಕೂಡ ಅಕ್ರಮವಾಗಿ ಮದ್ಯ ಮಾರಲಾಗುತ್ತಿದೆ ಎಂಬ ದೂರು ಕೂಡ ಕೇಳಿ ಬಂದಿವೆ.

    ಗಸ್ತು ತಿರುಗುವ ಪೊಲೀಸರು, ಶಾಲೆಯ ಸಿಬ್ಬಂದಿ ಸೇರಿ ಯಾವೊಬ್ಬ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂಬುದು ಜನರ ಆರೋಪ.

    ಕೆಲ ಕಿಡಿಗೇಡಿಗಳು ಶಾಲೆಯ ಆವರಣದಲ್ಲಿ ಕುಳಿತು ಕುಡಿಯುತ್ತಿದ್ದಾರೆ. ಬೆಳಗ್ಗೆಯಿಂದ ತಡರಾತ್ರಿ ತನಕ ಮದ್ಯಪಾನ ಮಾಡುತ್ತಾರೆ. ಈ ಕುರಿತು ಕ್ರಮ ಕೈಗೊಳ್ಳಬೇಕು.
    ಮಾಪೂಜ್ ಸಾಮಾಜಿಕ ಕಾರ್ಯಕರ್ತ

    ಶಾಲೆಯ ಆವರಣವನ್ನು ದುರ್ಬಳಕೆ ಮಾಡಿಕೊಳ್ಳುವ ಯಾವುದೇ ವ್ಯಕ್ತಿಯಾದರೂ ಸರಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
    ಕೆ.ನಾಗರಾಜ್ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts