More

    ಲಾಕ್‌ಡೌನ್ ಪಾಲನೆ ಸರ್ವರ ಕರ್ತವ್ಯ

    ಹೊಳಲ್ಕೆರೆ: ಕರೊನಾ ವೈರಸ್‌ನಿಂದ ಜನರನ್ನು ಕಾಪಾಡಲು ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್ ನಿರ್ಧಾರ ಕೈಗೊಂಡಿದ್ದು, ಪ್ರತಿಯೊಬ್ಬರು ಪಾಲನೆ ಮಾಡಬೇಕು ಎಂದು ಶಾಸಕ ಎಂ.ಚಂದ್ರಪ್ಪ ಮನವಿ ಮಾಡಿದರು.

    ತಾಲೂಕಿನ ಬ್ರಹ್ಮಪುರ, ಬಂಜನಗೊಂಡನಹಳ್ಳಿ, ಪಂಪಾಪುರ, ರಾಮೇನಹಳ್ಳಿ, ಟಿ.ನುಲೇನೂರು, ತೊಡರನಹಾಳ್, ಲಿಂಗದಹಳ್ಳಿ, ತಿರುಮಲಾಪುರದಲ್ಲಿ ಶುಕ್ರವಾರ ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ಮಾತನಾಡಿದರು.

    ಲಾಕ್‌ಡೌನ್ ಘೋಷಣೆ ಮಾಡಿದಾಗಿನಿಂದಲೂ ಕ್ಷೇತ್ರದಾದ್ಯಂತ ಸುತ್ತಾಡಿ ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.

    ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಕಾರ್ಯಕರ್ತರು, ಮುಖಂಡರು ಹಳ್ಳಿಗಳಲ್ಲಿ ಸಿಗುವ ಗುಣಮಟ್ಟದ ಬಟ್ಟೆಗಳಲ್ಲಿ ಮಾಸ್ಕ್ ತಯಾರಿಸಿ ಗ್ರಾಮಸ್ಥರಿಗೆ ವಿತರಣೆ ಮಾಡಬೇಕು ಎಂದು ತಿಳಿಸಿದರು.

    ನ್ಯಾಯಬೆಲೆ ಅಂಗಡಿಗಳಲ್ಲಿ ಎರಡು ತಿಂಗಳಿಗಾಗುವಷ್ಟು ಪಡಿತರ ನೀಡಲಾಗುತ್ತಿದೆ. ಪಡಿತರ ಚೀಟಿಗೆ ಅರ್ಜಿ ಹಾಕದವರಿಗೂ ಧಾನ್ಯ ವಿತರಿಸುವಂತೆ ನ್ಯಾಯಬೆಲೆ ಅಂಗಡಿ ಮಾಲೀಕರುಗಳಿಗೆ ಸೂಚಿಸಲಾಗಿದೆ ಎಂದರು.

    ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪ್ರತಿ ಗ್ರಾಮಗಳಿಗೆ ಹೋಗಿ ಜನರ ಕುಂದು ಕೊರತೆ ಆಲಿಸಬೇಕು ಎಂದು ಸೂಚಿಸಿದರು.

    ಮಲಸಿಂಗನಹಳ್ಳಿ ಗುಡ್ಡದಲ್ಲಿ 101 ಕೋಟಿ ರೂ. ವೆಚ್ಚದಲ್ಲಿ ಡ್ಯಾಂ ಕಟ್ಟಿಸಿ ಎಚ್.ಡಿ.ಪುರ ಮತ್ತು ತಾಳ್ಯ ಕ್ಷೇತ್ರದ ಆರು ಕೆರೆಗಳಿಗೆ ನೀರು ಹರಿಸಲಾಗುವುದು. ಟೆಂಡರ್ ಮುಗಿದ ನಂತರ ಒಂದು ತಿಂಗಳೊಳಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕರೆಸಿ ಚಿತ್ರಹಳ್ಳಿ ಗೇಟ್ ಬಳಿ ಭೂಮಿಪೂಜೆಗೆ ಚಾಲನೆ ನೀಡಲಾಗುವುದು ಎಂದರು.

    ಜಿಪಂ ಮಾಜಿ ಸದಸ್ಯ ಎಲ್.ಬಿ.ರಾಜಶೇಖರ್, ಮಾಧ್ಯಮ ಜಿಲ್ಲಾ ವಕ್ತಾರ ದಗ್ಗೆ ಶಿವಪ್ರಕಾಶ್, ಮಿಲ್ಟ್ರಿ ನಾಗರಾಜಪ್ಪ, ನುಲೇನೂರು ಈಶ್ವರಪ್ಪ, ನಂಜುಂಡಪ್ಪ, ಗ್ರಾಪಂ ಅಧ್ಯಕ್ಷ ಮಹಂತೇಶ್, ಅರುಣ್ ನುಲೇನೂರು, ವಿಜಯಕುಮಾರ್, ಜಗದೀಶ್ ಲಿಂಗದಹಳ್ಳಿ, ಟಿ.ಸಿ.ರಾಜಪ್ಪ ಇದ್ದರು.

    ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಮನವಿ: ಸಮರ್ಪಕ ವಿದ್ಯುತ್ ಪೂರೈಕೆ ಮಾಡದಿರುವುದರಿಂದ ತೋಟಗಳನ್ನು ಕಷ್ಟವಾಗಿದೆ ಎಂದು ಟಿ.ನುಲೇನೂರು ಗ್ರಾಮದ ರೈತರು ಶಾಸಕರ ಬಳಿ ಅಳಲು ತೋಡಿಕೊಂಡರು. ಯಾರು ಆತಂಕ ಪಡಬೇಕಿಲ್ಲ. ಬೆಸ್ಕಾಂ ಇಂಜಿನಿಯರ್ ಮತ್ತು ಸರ್ಕಾರದ ಜತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts