More

    ಶಿಕ್ಷಣ, ಸಂಘಟನೆ, ಹೋರಾಟದಿಂದ ಶಕ್ತಿ

    ಹೊಳಲ್ಕೆರೆ: ಅಂಬೇಡ್ಕರ್ ಅವರ ಚಿಂತನೆಯಂತೆ ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಉಪನ್ಯಾಸಕ ಚಂದ್ರಶೇಖರ್ ಸಲಹೆ ನೀಡಿದರು.

    ದಲಿತ ಸಂಘರ್ಷ ಸಮಿತಿ ಕಚೇರಿ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರ 63ನೇ ಪರಿನಿಬ್ಬಾಣ ದಿನಾಚರಣೆಯಲ್ಲಿ ಮಾತನಾಡಿದರು.

    ಸಮಾಜದಲ್ಲಿನ ಅಸಮಾನತೆಯ ವಿರುದ್ಧ ಬಾಬಾಸಾಹೇಬ್ ಹೋರಾಡಿದರು. ದಲಿತರಿಗಷ್ಟೆ ಅಲ್ಲದೆ ಎಲ್ಲ ವರ್ಗ, ಜಾತಿಗಳ ಬಡವರು, ಮಹಿಳೆಯರಿಗೂ ಅವಕಾಶ ಸಿಗಬೇಕೆಂಬ ಉದ್ದೇಶದಿಂದ ಸಂವಿಧಾನ ರಚನೆ ಮಾಡಿದರು ಎಂದರು.

    ಸಂಘದ ಸಂಚಾಲಕ ಲಿಂಗರಾಜು ಮಾತನಾಡಿ, ಸಂವಿಧಾನ ಶಿಲ್ಪಿ ಜೀವನ ನಮಗೆ ಮೂಲ ಬೇರು. ಕರ್ನಾಟಕದ ಬಿ.ಕೃಷ್ಣಪ್ಪ ಮೊಟ್ಟ ಮೊದಲ ಬಾರಿಗೆ ದಲಿತ ಚಳವಳಿ ಹುಟ್ಟು ಹಾಕಿದ ಮಹಾನ್ ವ್ಯಕ್ತಿ ಎಂದು ಸ್ಮರಿಸಿದರು.

    ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ರಮೇಶ್ ಕೋಡಗಲ್ಲು ಮಾತನಾಡಿ, ಅಂಬೇಡ್ಕರ್ ಒಬ್ಬ ಧೀಮಂತ ನಾಯಕ. ಶೋಷಿತ ನಿಜ ದೇವರು ಎಂದರು.

    ಸಂಘದ ಸಂಚಾಲಕ ಡಿ.ಆರ್.ಪಾಂಡುರಂಗಸ್ವಾಮಿ, ಗಂಗಾಧರಪ್ಪ ಚಿಕ್ಕಬಳ್ಳಾಪುರ, ತರೀಕೆರೆ ವೆಂಕಟೇಶ್, ಎನ್.ಕುಮಾರಿ, ಜಿಲ್ಲಾ ಸಂಚಾಲಕಿ ಲಕ್ಷ್ಮಮ್ಮ, ತಿಪ್ಪಮ್ಮ ಕೆರೆಯಾಗಲಹಳ್ಳಿ, ಕುಕ್ಕಡಮ್ಮ, ಬಿಜೆಪಿ ಎಸ್ಸಿ ಘಟಕದ ಅಧ್ಯಕ್ಷ ಬಸವರಾಜ್, ವಕೀಲ ಕಾಲ್ಕೆರೆ ವಿಜಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts