More

    ಎಸ್ಸಿ, ಎಸ್ಟಿ ಒಂದೇ ನಾಣ್ಯದ ಎರಡು ಮುಖ

    ಹೊಳಲ್ಕೆರೆ: ಎಸ್‌ಸಿ, ಎಸ್‌ಟಿ ಸಮುದಾಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಹನುಮಂತಪ್ಪ ಹೇಳಿದರು.

    ಒಂಟಿಕಂಬದ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಹಾಗೂ ಸರ್ವ ಸಮುದಾಯದ ಸಾಮೂಹಿಕ ವಿವಾಹ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

    ಪಪಂ ಮಾಜಿ ಉಪಾಧ್ಯಕ್ಷ ಜಯಸಿಂಹ ಖಾಟ್ರೋತ್ ಮಾತನಾಡಿ, ಜಯಂತ್ಯುತ್ಸವಕ್ಕೆ ಲಂಬಾಣಿ ಸಮುದಾಯದ ಎಲ್ಲ ಹೆಣ್ಣು ಮಕ್ಕಳನ್ನು ಸಾಂಸ್ಕೃತಿಕ ಉಡುಗೆಗಳೊಂದಿಗೆ ಕರೆ ತರಲಾಗುವುದು ಎಂದರು.

    ಭೋವಿ ಸಮಾಜದ ಜಿಲ್ಲಾಧ್ಯಕ್ಷ ಚಿಕ್ಕಂದವಾಡಿ ತಿಪ್ಪೇಸ್ವಾಮಿ ಮಾತನಾಡಿ, ದಲಿತ ಸಂಘಟನೆಗಳು, ಅಂಬೇಡ್ಕರ್ ವಿಚಾರಧಾರೆಗಳನ್ನು ಪ್ರತಿ ಮನೆ ಮನೆಗೂ ತಲುಪಿಸುವ ಕೆಲಸ ಎಂದು ತಿಳಿಸಿದರು.

    ಸಮಿತಿ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯ್ಯಣ್ಣ ಮಾತನಾಡಿ, ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಎಲ್ಲ ಸಮುದಾಯಗಳಿಂದ ಒಂದೊಂದು ಜೋಡಿ ಇದ್ದರೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

    ದಲಿತ ಮುಖಂಡರಾದ ಚಿಕ್ಕಂದವಾಡಿ ಶಿವಣ್ಣ, ಪ್ರಸನ್ನಕುಮಾರ್, ದಿವಾಕರ್, ನಾಗರಾಜ್, ಪ್ರಭಾಕರ್, ಮಂಜು ಉಡಗೆರೆ, ಮಂಜು ಎಮ್ಮಿಗನೂರು, ವಿಶ್ವನಾಥನಹಳ್ಳಿ ಮಂಜಪ್ಪ, ಚಂದ್ರು ಮತಿಘಟ್ಟ, ಯುವಕರಾದ ವಿಜಯಕುಮಾರ್ ಎನ್.ಹನುಮಲಿ, ಜಗದೀಶ್.ಎಂ ಅಪ್ಪರಸನಹಳ್ಳಿ, ನವೀನ್‌ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts