More

    1300 ಕೋಟಿ ರೂ. ಅನುದಾನ

    ಹೊಳಲ್ಕೆರೆ: ಶಾಸಕನಾಗಿ ಒಂದೂವರೆ ವರ್ಷದಲ್ಲಿ ಕ್ಷೇತ್ರದ 390 ಹಳ್ಳಿಗಳ ಅಭಿವೃದ್ಧಿಗೆ 1300 ಕೋಟಿ ರೂ. ಅನುದಾನ ತದಿದ್ದೇನೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

    ತಾಲೂಕಿನ ಹಿರೇಕಂದವಾಡಿ ಗ್ರಾಮದಲ್ಲಿ ಸೋಮವಾರ ಪಿಡಬ್ಲುೃಡಿ ವತಿಯಿಂದ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

    ಮದಕರಿಪುರದಿಂದ ಹಿರೇಕಂದವಾಡಿ ತನಕ ಈಗಾಗಲೇ 2 ಕೋಟಿ ರೂ. ಅನುದಾನದ ರಸ್ತೆ ನಿರ್ಮಾಣ ಮಾಡಲಾಗಿದೆ. ಬಿ.ದುರ್ಗದಿಂದ ಹಿರೇಕಂದವಾಡಿ ಬೆಟ್ಟದವರೆಗೆ 1.5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.

    ಕಳೆದ ನಾಲ್ಕೈದು ವರ್ಷ ಸಕಾಲಕ್ಕೆ ಮಳೆ ಬಾರದೆ ರೈತರು ನೀರಿನ ಬರ ಅನುಭವಿಸಿದ್ದಾರೆ. ತೋಟಗಾರಿಕೆ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ತೋಟಕ್ಕೆ ನೀರಿನ ಪೂರೈಕೆ ಮಾಡಿದ್ದಾರೆ. ಈ ಸಂಕಷ್ಟಕ್ಕೆ ಶೀಘ್ರ ಪರಿಹಾರ ದೊರೆಯಲಿದೆ ಎಂದು ತಿಳಿಸಿದರು.

    ದೇಶದಲ್ಲಿ 1 ಕೋಟಿ ಮನೆಗಳ ನಿರ್ಮಾಣ ಮಾಡುವ ಯೋಜನೆಗೆ ಪ್ರಧಾನಿ ಅನುಮೋದನೆ ನೀಡಿರುತ್ತಾರೆ. ನಮ್ಮ ತಾಲೂಕಿಗೆ 2 ಸಾವಿರ ಮನೆ ಬರಲಿದ್ದು, ಆರ್ಥಿಕ ದುರ್ಬಲರಿಗೆ ಹಾಗೂ ವಸತಿ ರಹಿತರಿಗೆ ವಿತರಿಸಲಾಗುತ್ತದೆ ಎಂದರು.

    1.5 ಕೋಟಿ ರೂ. ವೆಚ್ಚದಲ್ಲಿ ಕಲ್ವನಾಗತಿಹಳ್ಳಿಯ ಹಳ್ಳಕ್ಕೆ ಸೇತುವೆ ಹಾಗೂ ಬ್ಯಾರೇಜ್ ನಿರ್ಮಾಣ ಮಾಡಲಾಗುತ್ತದೆ. ಬಿ.ದುರ್ಗ ಸೇತುವೆಗೆ ಇಂದು ಭೂಮಿ ಪೂಜೆ ಸಲ್ಲಿಸಲಾಗಿದೆ ಎಂದು ಹೇಳಿದರು.

    ಜಿಪಂ ಸದಸ್ಯೆ ಸುಮಾ ಲಿಂಗರಾಜ್, ಬಿಜೆಪಿ ಮುಖಂಡ ಇಂದ್ರಪ್ಪ ಗುಂಜಿಗನೂರು, ತಾಪಂ ಸದಸ್ಯ ದೇವರಾಜ್, ಗ್ರಾಪಂ ಅಧ್ಯಕ್ಷೆ ಗಂಗಮ್ಮ, ಸದಸ್ಯರಾದ ಈಶಣ್ಣ, ಕರಿಯಣ್ಣ, ಬಸವರಾಜಪ್ಪ, ಹಾಲು ಒಕ್ಕೂಟದ ಅಧ್ಯಕ್ಷ ಲೋಕೇಶ್, ಮುಖಂಡರಾದ ರಮೇಶ್, ಶಂಬಲಿಂಗಪ್ಪ, ಎಚ್.ಎಂ.ಮಂಜಪ್ಪ, ಶಿಕ್ಷಕ ವೆಂಕಟೇಶ್, ಇಂಜಿನಿಯರ್ ಮಹಾಬಲೇಶ್ವರ್, ಗುತ್ತಿಗೆದಾರ ರಾಜಶೇಖರಪ್ಪ, ಎಪಿಎಂಸಿ ಸದಸ್ಯ ಮರುಳಸಿದ್ದೇಶ್ ಇದ್ದರು.

    ನಿಗದಿತ ಕೆರೆಗಳಿಗೆ ವರ್ಷದಲ್ಲಿ ಭದ್ರೆ ನೀರು: ಭದ್ರಾ ಮೇಲ್ದಂಡೆ ಹಾಗೂ ಸಾಸ್ವೆಹಳ್ಳಿ ಯೋಜನೆ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯುತ್ತಿವೆ. ಇನ್ನೊಂದು ವರ್ಷದಲ್ಲಿ ನಿಗದಿತ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಸಂಕಷ್ಟದಲ್ಲಿದ್ದ ಅಡಕೆ ತೋಟದ ರೈತರಿಗೆ ಅನುಕೂಲವಾಗಿದೆ ಎಂದು ಚಂದ್ರಪ್ಪ ತಿಳಿಸಿದರು.

    ಭರಮಸಾಗರದ 41 ಹಳ್ಳಿಗಳ ಕೆರೆಗಳಿಗೆ ನೀರು ಹರಿಸಲು ಸರ್ಕಾರ 565 ಕೋಟಿ ರೂ. ಅನುದಾನ ನೀಡಿದೆ. ಹೊಳಲ್ಕೆರೆ ಸಣ್ಣ ಕೆರೆಯಿಂದ ತಾಳ್ಯ ಭಾಗದ ಕೆರೆಗಳಿಗೆ ನೀರು ಪೂರೈಕೆ ಮಾಡಲು 105 ಕೋಟಿ ರೂ. ಅನುದಾನ ತರಲಾಗಿದೆ. ಹಿರೇಕಂದವಾಡಿ ಜನರ ಆಶಯದಂತೆ ಕೆರೆಗೆ ನೀರು ತುಂಬಿಸಲು ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts