More

  ಗದಗ: ಅಧಿಕಾರಿಗಳಿಗೆ ಎಚ್ಚರಿಕೆ, ಸೂಚನೆ ನೀಡಿದ ಎಚ್.ಕೆ. ಪಾಟೀಲ

  – ನೀರು ಪೂರೈಕೆ ಕುರಿತು ಸುಳ್ಳು ಮಾಹಿತಿ ಏಕೆ? ನಾಚಿಕೆ ಆಗುವುದಿಲ್ಲವೇ? ಅಧಿಕಾರಿಗಳಿಗೆ ತರಾಟೆ.

  ವಿಜಯವಾಣಿ ಸುದ್ದಿಜಾಲ ಗದಗ

  ಜಿಲ್ಲೆಯ ಶುದ್ಧ ನೀರಿನ ಘಟಕ ಮತ್ತು ಗೌರವ ಘಟಕಗಳ ಬಗ್ಗೆ ದೇಶವೇ ತಿರುಗಿ ನೋಡಿದೆ. ಆದರೆ, ಅಧಿಕಾರಿಗಳು ಈ ಘಟಕಗಳನ್ನು ದುರಸ್ತಿ ಮಾಡುವ ಮನಸ್ಸು ಮಾಡಿಲ್ಲ. ಕುಡಿಯುವ ನೀರಿನ ಕುರಿತು ಸಚಿವಾಲಯಕ್ಕೂ ಸುಳ್ಳು ಮಾಹಿತಿ ನೀಡುತ್ತೀರಿ. ನಿಮಗೆ ನಾಚಿಕೆ ಇಲ್ಲವೇ? ಜನರ ಸಮಸ್ಯೆ ಕುರಿತು ಬೇಜವಾಬ್ದಾರಿ ತನ ಏಕೆ?. ಅಧಿಕಾರಿಗಳ ನಿಷ್ಕಾಳಜಿ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

  ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಚ್.ಕೆ. ಪಾಟೀಲ ಭರವಸೆ ನೀಡಿದ್ದ 19 ಭರವಸೆಗಳ ಯೋಜನೆ ಜಾರಿ ವಿಳಂಬ ಮತ್ತು ಅನುಷ್ಠಾನ ಕುರಿತು ಜಿಪಂ ಸಭಾಗಂಣದಲ್ಲಿ ಸಭೆ ನಡೆಸಿದ ಅವರು, ಕುಡಿಯು ನೀರು.. ವಿಷಯಗಳ ಕುರಿತು ಚರ್ಚೆ ನಡೆಸಿದರು.

  ಪ್ರಮುಖವಾಗಿ ನಗರಕ್ಕೆ ಪೂರೈಕೆಯಾಗುವ 24/7 ನೀರು ಪೂರೈಕೆ ಕುರಿತು ಚರ್ಚಿಸಿ, ನಗರಕ್ಕೆ ಎಷ್ಟು ನೀರು ಪೂರೈಕೆ ಆಗುತ್ತದೆ ಎಂಬುದರ ಬಗ್ಗೆ ಅಧಿಕಾರಿಗಳಲ್ಲಿ ಮಾಹಿತಿ ಇಲ್ಲ. 65 ಕಿಮೀ ಯಿಂದ ಗದಗ ನಗರಕ್ಕೆ ನೀರು ಆಗಮಿಸುತ್ತಿದೆ. ನೀರು ಬರುವ ಮಧ್ಯ ಸೋರಿಕೆ, ಇತರೆ ಕಾರಣಗಳಿಂದ ನೀರು ಪೋಲಾಗುತ್ತದೆ. ಆದ್ದರಿಂದ ಜಲಸಂಗ್ರಹ ಅವಶ್ಯವಿದೆ. ಜಲಸಂಗ್ರಹ ಸಮರ್ಪಕ ಆಗದ ಕಾರಣ ನಗರದ ಜನರು 5 ವರ್ಷ ನೀರಿನ ಸಮಸ್ಯೆ ಉಲ್ಭಣಗೊಂಡಿದೆ. ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಕಿಡಿಕಾರಿದರು.

  ಅವಳಿ ನಗರದ ಒಳಚರಂಡಿ ವ್ಯವಸ್ಥೆ ಕೆಟ್ಟಿದೆ. ಎಜೆನ್ಸಿ, ನಗರಸಭೆ, ಒಳಚರಂಡಿ ಇಲಾಖೆಗೆ ಕಾಳಜಿ ಇಲ್ಲ. ಕೇವಲ್ ಬಿಲ್ ಪಾಸ ಮಾಡುವುದರಲ್ಲೇ ನಿಮಗೆ ಆಸಕ್ತಿ ಇದೆ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ 75 ಕಿಮೀ ಒಳಚರಂಡಿ ನಿರ್ವಹಣೆ ನಗರಸಭೆಗೆ ಹಸ್ತಾಂತರಗೊಂಡಿದೆ ಎಂದು ಪ್ರತಿಕ್ರಿಯೆ ನೀಡಿದರು. ಗಂಗಿಮಡಿ ವಸತಿ ನಿಲಯಗಳ ಬಗ್ಗೆ ಚರ್ಚೆ ಜರುಗಿತು. ನಗರದ ಆಶ್ರಯ ಮನೆಗಳ ಹಕ್ಕುಪತ್ರ ಬಾಕಿ ಉಳಿಸದಂತೆ ವಿತರಿಸಲು ಎಚ್.ಕೆ. ಪಾಟೀಲ ಸೂಚಿಸಿದರು.

  ನಗರಸಭೆಯಲ್ಲಿ ನಿವೇಶನಕ್ಕೆ ಫಾರ್ಮ ನಂ.3 ನೀಡುವ ಬಗ್ಗೆ
  ನಗರಸಭೆಯಲ್ಲಿ ಎಜೆಂಟರ್ ಹಾವಳಿ ಹೆಚ್ಚಾಗಿದೆ ಎಂದು ಕಿಡಿ ಕಾರಿದ ಸಚಿವರು ಏಜೆಂಟರು ಬಂದರೆ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ನಾಮ ಫಲಕ ಅಳವಡಿಸಲು ನಗರಸಭೆಗೆ ಸೂಚಿಸಿದರು.

  *ಎಚ್.ಕೆ. ಪಾಟೀಲ ಎಚ್ಚರಿಕೆ:*

  – ನೀರು ಪೂರೈಕೆ, ಮಂಜೂರಾತಿ ಕುರಿತು ಕಡತಗಳಲ್ಲಿ ಎಲ್ಲವೂ ಸರಿ ಇದೆ. ಆದರೆ, ಪ್ರಾಯೋಗಿಕವಾಗಿ ಸ್ಥಳದಲ್ಲಿ ಯಾವುದೂ ಕಾಣುವುದಿಲ್ಲ.

  – ಒಳಚರಂಡಿ, ನೀರು ನಿರ್ವಹಣೆಯ ಬಿಲ್ ಪಾಸ್ ಮಾಡುವುದರಲ್ಲೇ ಆಸಕ್ತಿ ಹೆಚ್ಚು.

  – ಫಾರ್ಮ ನಂಬರ್ 3 ಸೇರಿದಂತೆ ಇತರೆ ಕೆಲಸಕ್ಕೆ ಲಂಚದ ಗುಳಿತನ ಕೈ ಬಿಡಬೇಕು ಎಂದು ನಗರಸಭೆಗೆ ತರಾಟೆ. ಕಾವೇರಿ ತಂತ್ರಾಂಶ ಅಭಿವೃದ್ಧಿ ಆಗುವ ವರೆಗೆ ಫಾರ್ಮ ವಿತರಣೆಗೆ ತಡೆ ನೀಡುವಂತಿಲ್ಲ.

  – ಕಾಶಿ ವಿಶ್ವನಾಥ ನಗರ, ನಗರದ ನಾಲ್ಕು ಹುಡ್ಕೊ ಕಾಲನಿಯಿಂದ ಲಿಂಕ್ ಒಳಚರಂಡಿ, ಒಳಚರಂಡಿ  ಸಂಪರ್ಕ ಸಮಸ್ಯೆ ಬಗೆಹರಿಸಿ.

  – ನಗರಸಭೆ, ಒಳಚರಂಡಿ ಇಲಾಖೆ ಜತೆಗೂಡಿ ಸಮಸ್ಯೆ ಬಗೆ ಹರಿಸಿ.

  – ಗಂಗಿಮಡಿ, ಆಶ್ರಯ ಕಾಲನಿ ಮನೆಗಳನ್ನು ಜುಲೈ ಒಳಗಾಗಿ ಪೂರ್ಣಗೊಳಿಸಬೇಕು.

  – ಶುದ್ಧ ನೀರಿನ ಘಟಕ ದುರಸ್ತಿ ಆಗಿಲ್ಲ. ನೀರಿನ ಶುದ್ದೀಕರಣ ಮಾಡುವ ಘಟಕದ ಮೆಮರಿನ್ ಬದಲಾಯಿಸಿಯೇ ಇಲ್ಲ ಎಂದು ಅಧಿಕಾರಿಗಳಿಗೆ ತರಾಟೆ.

  *ಅಧಿಕಾರಿಗಳಅಳಲು:*
  ಒಳಚರಂಡಿ ಇಲಾಖೆಗೆ ಮೂಲಭೂತ ಸೌಕರ್ಯಗಳಿಲ್ಲ. ಸಿಬ್ಬಂದಿ, ಮಷಿನರಿ ಕೊರತೆ ಇದೆ. ಸಮರ್ಪಕ ಸೇವೆ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ನೋವು ತೋಡಿಕೊಂಡರು. 24/7 ನೀರು ಪೂರೈಕೆ ಯಲ್ಲೂ ಇಂತದ್ದೇ ಸಮಸ್ಯೆ ತೋಡಿಕೊಂಡರು. ನಿವೇಶನಕ್ಕೆ ಫಾರ್ಮ ನಂ3 ಹಕ್ಕು ಪತ್ರ ನೀಡಲು ಸಾಫ್ಟವೇರ್ ಸಮಸ್ಯೆ ಇದೆ ಎಂದು ನಗರಸಭೆ ಕಮಿಷನರ್ ತಿಳಿಸಿದರು.

  *ನಗರಸಭೆಆಯುಕ್ತರಿಗೆನಿರ್ದೇಶನ:*
  ನಗರ ಸಭೆಯಲ್ಲಿ 10 ಕ್ಕಿಂತ ಹೆಚ್ಚು ದಿನ ಅರ್ಜಿಗಳು ಪೆಂಡಿಂಗ್ ಇದ್ದರೆ ಪಟ್ಟಿ ಮಾಡಿ. ನೂರಾರು ಕೇಸ್ ವರ್ಕರ್ ಇದ್ದರೂ ಅರ್ಜಿಗಳು ಬಾಕಿ ಏಕೆ ಉಳಿಯುತ್ತವೆ? ಫಾರ್ಮ ನಂಬರ್ 3 ಪಡೆಯಲು ಜನರು ಕಷ್ಟ ಪಡುತ್ತಿದ್ದಾರೆ. ಈ ಬಗ್ಗೆ ಎಚ್ಚರ ವಹಿಸಿ ಎಂದು ಎಚ್.ಕೆ. ಪಾಟೀಲ ಎಚ್ಚರಿಸಿದರು. ನಗರಸಭೆ ವಿರೋಧ ಪಕ್ಷದ ನಾಯಕ ಚಂದಾವರಿ ಮಧ್ಯ ಪ್ರವೇಶಿಸಿ ನಗರಸಭೆ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರು.

  *ಎನ್ರಿನಿಮ್ಉದ್ದೇಶ?*
  ಅಮೃತ ಯೋಜನೆಯಡಿ ಭೀಷ್ಮ ಕೆರೆ ಯೋಜನೆ ಅರ್ಧಕ್ಕೆ ನಿಲ್ಲಿಸಿರುವುದೇಕೆ?. ಎನ್ ರಾಜಕಾರಣ ಮಾಡ್ತಿದಿರಾ ಎಂದು ಯೋಜನಾ ನಿರ್ದೇಶಕರಿಗೆ ಎಚ್.ಕೆ. ಪಾಟೀಲ ತರಾಟೆಗೆ ತೆಗೆದುಕೊಂಡರು. ಯೋಜನೆ ಏಕೆ ಸ್ಥಗಿತಗೊಂಡಿತು ಎಂಬುದರ ವರದಿ ನೀಡಲು ತಿಳಿಸಿದರು. ಭೀಷ್ಮ ಕೆರೆ ಒತ್ತುವರಿ ಕುರಿತು ಪ್ರಕರಣ ಇರುವ ಕುರಿತು ಯೋಜನಾ ನಿರ್ದೇಶಕರು ಪ್ರತಿಕ್ರಿಯೆ ನೀಡಿದರು. ಕಾಮಗಾರಿ ನಿಲ್ಲಿಸುವಂತೆ ಕೋರ್ಟ್ ಸೂಚನೆ ಏನಾದರೂ ನೀಡಿದೆಯಾ ಎಂದು ಎಚ್. ಕೆ. ಪಾಟೀಲ ಪ್ರಶ್ನಿಸಿದರು. 

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts