More

    ಆರಂಭದಲ್ಲಿ ಚಿಕಿತ್ಸೆ ಪಡೆದಾಗ ರೋಗ ಗುಣಮುಖ

    ಯಲಬುರ್ಗಾ: ಎಚ್‌ಐವಿ ಮುಕ್ತ ಭಾರತಕ್ಕಾಗಿ ಎಲ್ಲರ ಸಹಕಾರ ಅಗತ್ಯ ಎಂದು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಸಿ.ಎಂ.ಹಿರೇಮಠ ಹೇಳಿದರು.
    ತಾಲೂಕಿನ ಕುಡಗುಂಟಿಯ ಸಮುದಾಯ ಭವನದಲ್ಲಿ 2030ರ ವೇಳೆಗೆ ಎಚ್‌ಐವಿ ಮುಕ್ತ ಭಾರತಕ್ಕಾಗಿ ಸಮುದಾಯ ಆಧಾರಿತ ತಪಾಸಣಾ ಶಿಬಿರದಲ್ಲಿ ಶನಿವಾರ ಮಾತನಾಡಿದರು.

    ಎಚ್‌ಐವಿ ಮುಕ್ತ ಭಾರತಕ್ಕಾಗಿ ಎಲ್ಲರ ಸಹಕಾರ ಅಗತ್ಯ

    ಎಚ್‌ಐವಿ ಅರ್ಜಿತವಾದ ಕಾಯಿಲೆ ಆಗಿದೆ. ರೋಗವು ನಾಲ್ಕು ಕಾರಣದಿಂದ ಬರುತ್ತದೆ. ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಬರಲಿದೆ. ಇದನ್ನು ಆರಂಭಿಕ ಹಂತದಲ್ಲೆ ತಪಾಸಣೆಗೆ ಒಳಗಾಗಿ, ಚಿಕಿತ್ಸೆ ಪಡೆದಾಗ ಬಹುಕಾಲ ಸಾಮಾನ್ಯರಂತೆ ಜೀವನ ನಡೆಸಬಹುದು. ಗರ್ಭಿಣಿಯರು ಮೊದಲ 3 ತಿಂಗಳ ಒಳಗೆ ತಪ್ಪದೆ ಎಚ್‌ಐವಿ ಪರೀಕ್ಷೆಗೆ ಒಳಗಾಗಬೇಕು. ಇದರಿಂದ ಮಗುವಿಗೆ ಕಾಯಿಲೆ ಹರಡುವಿಕೆ ತಡೆಯಬಹುದು ಎಂದರು.

    ಇದನ್ನೂ ಓದಿ: ಆನೆದಂತ, ಶ್ರೀಗಂಧ, ರಕ್ತಚಂದನ ಸೇರಿ 3 ಕೋಟಿ ಮೌಲ್ಯದ ವಸ್ತುಗಳ ಅಕ್ರಮ ಸಂಗ್ರಹ; ಇಬ್ಬರು ಅರೆಸ್ಟ್​

    ಜಿಲ್ಲಾ ಮೇಲ್ವಿಚಾರಕ ಮಾಲತೇಶ ಸಜ್ಜನರ ಮಾತನಾಡಿ, ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಚ್‌ಐವಿ ಸೋಂಕಿತರಿದ್ದಾರೆ. ಹಾಗಾಗಿ 20 ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳಿಗೆ ಎಚ್‌ಐವಿ ಕಾಯಿಲೆ ತಡೆಗಟ್ಟುವಿಕೆ ಮತ್ತು ಸಾಮಾಜಿಕ ಸೌಲಭ್ಯಗಳು ಕುರಿತು ತರಬೇತಿ ನೀಡಲಾಗುತ್ತಿದೆ ಎಂದರು.
    ಆಪ್ತಸಮಾಲೋಚಕ ಅಮರೇಶ ಅಂಗಡಿ ಮಾತನಾಡಿ, ಎಚ್‌ಐವಿ ಪರೀಕ್ಷೆ ಮತ್ತು ತಡೆಗಟ್ಟುವಿಕೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಸಿಎಚ್‌ಒ ಗಾಯತ್ರಿ ಅವರು ಅಸಾಂಕ್ರಾಮಿಕ ಕಾಯಿಲೆಗಳ ಕುರಿತು ಮಾಹಿತಿ ನೀಡಿದರು.
    ಗ್ರಾಪಂ ಅಧ್ಯಕ್ಷ ಶರಣಪ್ಪ ಕುರಿ, ಸದಸ್ಯ ಶರಣಪ್ಪ ಹಾದಿಮನಿ, ಪ್ರಮುಖರಾದ ಶಂಕರಗೌಡ ಪಾಟೀಲ, ಮಲ್ಲಿಕಾರ್ಜುನಗೌಡ, ಆರೋಗ್ಯ ಇಲಾಖೆಯ ಡಾ. ಅಭಿಷೇಕ, ರಮೇಶ, ವೀರಭದ್ರಪ್ಪ, ಮಹಮದ್ ಯಾಶಿನಶೇಖ, ಗಾಯತ್ರಿ, ಸಬೀನಾಬೇಗಂ, ಮಾರುತಿ, ಶಮಶಾದ ಬೇಗಂ, ಜ್ಯೋತಿ, ಕೆಎಚ್‌ಪಿಟಿ ಸಿಂಧು, ಸ್ನೇಹ ಸಂಸ್ಥೆಯ ದೇವಪ್ಪ, ಶರಣಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts