More

    ಊಟ ಡೆಲಿವರಿ ಲೇಟಾಗಿದ್ದಕ್ಕೆ ಮುಖಕ್ಕೆ ಪಂಚ್​ ಹೊಡೆಸಿಕೊಂಡ ಯುವತಿ! ಇನ್​​ಫ್ಲೂಯೆನ್ಸರ್​ ಕಥೆ ಕೇಳೋರ್ಯಾರು?

    ಬೆಂಗಳೂರು: ಡೆಲಿವರಿ ಬಾಯ್​ ಊಟ ಲೇಟಾಗಿ ತಂದ ಎನ್ನುವ ಕಾರಣಕ್ಕೆ ಆತನನ್ನು ಮನೆಯ ಬಾಗಿಲಲ್ಲಿ ನಿಲ್ಲಿಸಿ, ಸಿಬ್ಬಂದಿಯ ಸ್ಪಷ್ಟನೆ ಕಾದ ಯುವತಿಯೊಬ್ಬಳು ಮುಖಕ್ಕೆ ಪಂಚ್​ ಹೊಡೆಸಿಕೊಂಡು ಆಸ್ಪತ್ರೆ ಸೇರಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್​ ಸಿಟಿಯಲ್ಲಿ ನಡೆದಿದೆ.

    ಹಿತೇಶಾ ಚಂದ್ರಾಣಿ ಹೆಸರಿನ ಯುವತಿ ಮಂಗಳವಾರ ಮಧ್ಯಾಹ್ನ ಊಟವನ್ನು ಜೊಮ್ಯಾಟೋದಲ್ಲಿ ಆರ್ಡರ್​ ಮಾಡಿದ್ದಾಳೆ. 3-30ರ ಸಮಯಕ್ಕೆ ಊಟ ಡೆಲಿವರಿ ಆಗುವುದಾಗಿ ಆ್ಯಪ್​ನಲ್ಲಿ ತಿಳಿಸಲಾಗಿದೆ. ಆದರೆ ಡೆಲಿವಿ ಬಾಯ್ ಕಾಮರಾಜ್​ 4-30ಕ್ಕೆ ಫುಡ್​ ಡೆಲಿವರಿ ಮಾಡಲು ಆಕೆಯ ಮನೆ ಬಾಗಿಲಿಗೆ ಬಂದಿದ್ದಾನೆ. ಅದಾಗಲೇ ಹಿತೇಶಾ ಜೊಮ್ಯಾಟೋ ಸಿಬ್ಬಂದಿಗೆ ಫುಡ್​ ಡೆಲಿವರಿ ಲೇಟಾಗಿರುವ ಬಗ್ಗೆ ಮಾಹಿತಿ ನೀಡಿದ್ದಳಂತೆ. ಕಾಮರಾಜ್​ ಮನೆ ಬಾಗಿಲಿಗೆ ಬಂದಾಗ, ಆತನನ್ನು ಅಲ್ಲಿಯೇ ನಿಲ್ಲಿಸಿ, ಆರ್ಡರ್​ ಕ್ಯಾನ್ಸಲ್​ ಮಾಡಿರುವುದಾಗಿ ಆತನಿಗೆ ಹೇಳಿದ್ದಾನೆ.

    ಹಾಗೆ ಹೇಳಿದ ಹಿತೇಶಾ ಬಾಗಿಲು ಹಾಕಿಕೊಳ್ಳಲು ಪ್ರಯತ್ನಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಕಾಮರಾಜ್​, ಬಾಗಿಲನ್ನು ದೂಡಿ, ಮನೆಯೊಳಗೆ ಹೋಗಿ ಊಟವನ್ನು ಇಟ್ಟು ಬಂದಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಿನ್ನ ಗುಲಾಮ ನಾನಲ್ಲ ಎಂದು ಕಾಮರಾಜ್​ ಬೈದಿದ್ದಾನೆ. ಆತನ ವರ್ತನೆಯಿಂದ ಸಿಟ್ಟಿಗೆದ್ದ ಹಿತೇಶಾ ಕೈಗೆ ಚಪ್ಪಲಿ ಎತ್ತಿಕೊಂಡಿದ್ದಳು ಎನ್ನಲಾಗಿದೆ. ಈ ವೇಳೆ ಆತ ಆಕೆಯ ಮುಖಕ್ಕೆ ಪಂಚ್​ ಮಾಡಿರುವುದಾಗಿಯೂ ಆಕೆ ಹೇಳಿಕೊಂಡಿದ್ದಾಳೆ. ಮೂಗಿನಿಂದ ರಕ್ತ ಬರುತ್ತಿರುವ ಫೋಟೋಗಳನ್ನೂ ಹಂಚಿಕೊಂಡಿದ್ದಾಳೆ.

    ಹಿತೇಶಾ ಇನ್​ಸ್ಟಾಗ್ರಾಂ ಇನ್​​ಫ್ಲೂಯೆನ್ಸರ್​ ಎನಿಸಿಕೊಂಡಿದ್ದಾಳೆ. ಇನ್​ಸ್ಟಾಗ್ರಾಂನಲ್ಲಿ ಆಕೆಗೆ 35 ಸಾವಿರಕ್ಕೂ ಅಧಿಕ ಅಭಿಮಾನಿಗಳಿದ್ದಾರೆ.

    ಈ ಫೋಟೋದಲ್ಲಿರುವವರು ರಾಜ್ಯವೊಂದರ ಮಾಜಿ ಮುಖ್ಯಮಂತ್ರಿ! ಯಾರೆಂದು ಗುರುತಿಸಿ ಹೇಳಿ..

    VIDEO| 60ರ ವೃದ್ಧನ 2ನೇ ಮದುವೆಗೆ ಒಪ್ಪದ ಮಕ್ಕಳು! ವಿದ್ಯುತ್​ ಕಂಬವೇರಿ ಕುಳಿತ ವೃದ್ಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts