More

  ವಿವೇಕರಿಂದ ದೇಶದ ಸಂಸ್ಕೃತಿ ವಿಶ್ವಕ್ಕೆ ಪರಿಚಯ

  ಹಿರಿಯೂರು: ಭಾರತೀಯ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಆರ್‌ಎಸ್‌ಎಸ್ ಮುಖಂಡ ಹಲಗಲದ್ದಿ ತಿಪ್ಪೇಸ್ವಾಮಿ ಹೇಳಿದರು.

  ಇಲ್ಲಿನ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಎಬಿವಿಪಿಯಿಂದ ಆಯೋಜಿಸಿದ್ದ ವಿವೇಕಾನಂದರ 157 ಜನ್ಮ ಜಯಂತ್ಯುತ್ಸವ ಹಾಗೂ ಸದ್ಭಾವನಾ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

  ಸ್ವಾಮಿ ವಿವೇಕಾನಂದರ ಚೈತನ್ಯ ನುಡಿಗಳು ಜಗತ್ತಿಗೆ ಜ್ಞಾನದ ದೀಪವಾಗಿವೆ. ಜ್ಞಾನ, ವಿಜ್ಞಾನ, ಸುಜ್ಞಾನ ಹಾಗೂ ಆಧ್ಯಾತ್ಮಿಕ ತತ್ವಗಳು ಜಗತ್ತಿಗೆ ಪಸರಿಸಲು ಶ್ರಮಿಸಿದ ಮಹಾನ್ ಸಂತ ಎಂದರು.

  ಎಬಿವಿಪಿ ಸಂಘಟನೆ ಸಹ ಕಾರ್ಯದರ್ಶಿ ಜನಾರ್ಧನ್ ಮಾತನಾಡಿ, ವಿವೇಕಾನಂದರ ಚಿಂತನೆ, ಆದರ್ಶಗಳು ನಮ್ಮೆಲ್ಲರಿಗೂ ಜ್ಞಾನದ ಬೆಳಕಾಗಿವೆ. ವಿದ್ಯಾರ್ಥಿಗಳು ವೈಜ್ಞಾನಿಕ-ಆಧ್ಯಾತ್ಮಿಕ ಚಿಂತನೆ ಬೆಳೆಸಿಕೊಂಡು ದೇಶ ಕಟ್ಟಲು ಶ್ರಮಿಸಬೇಕು ಎಂದು ಕರೆ ನೀಡಿದರು.

  ಪ್ರಾಚಾರ್ಯ ಡಾ.ಡಿ.ಧರಣೀಂದ್ರಯ್ಯ ಮಾತನಾಡಿ, ಯುವ ಸಮೂಹದಲ್ಲಿ ಸಂಸ್ಕಾರ, ವಿವೇಕಾನಂದರ ಚಿಂತನೆ, ದೇಶಾಭಿಮಾನದ ಮನೋಭಾವ ಮೂಡಿಸಲು ಪದವಿ ಕಾಲೇಜುಗಳಲ್ಲಿ ವಿವೇಕಾನಂದರ ಜನ್ಮ ದಿನ ಆಚರಿಸಲಾಗುತ್ತಿದೆ ಎಂದರು.

  ಡಾ.ಸಿದ್ದಲಿಂಗಯ್ಯ, ಬಾಲಾಜಿ, ದೈಹಿಕ ಶಿಕ್ಷಣ ನಿರ್ದೇಶಕ ತಿಪ್ಪೇಸ್ವಾಮಿ, ಎಬಿವಿಪಿ ಹಿರಿಯ ಕಾರ್ಯಕರ್ತ ಎಚ್.ಆರ್.ಯೋಗೇಶ್, ಸತೀಶ್,ಯೋಗಾನಂದ್, ವಿಜಯಕುಮಾರ್ ಇತರರಿದ್ದರು.

  150 ಮೀಟರ್ ಉದ್ದದ ತ್ರಿವರ್ಣ ಧ್ವಜ ಹಿಡಿದ ವಿವಿಧ ಶಾಲಾ-ಕಾಲೇಜುಗಳ ಒಂದು ಸಾವಿರ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts